ವಿರಾಟ್ ಕೊಹ್ಲಿಗೆ ಐಸಿಸಿ ಏಕದಿನ ತಂಡದ ನಾಯಕ ಪಟ್ಟ, ಟೆಸ್ಟ್ ನಲ್ಲಿ ಕಡೆಗಣನೆ

ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) 2016ನೇ ಸಾಲಿನ ವರ್ಷದ ಟೆಸ್ಟ್ ಮತ್ತು ಏಕದಿನ ತಂಡಗಳನ್ನು...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) 2016ನೇ ಸಾಲಿನ ವರ್ಷದ ಟೆಸ್ಟ್ ಮತ್ತು ಏಕದಿನ ತಂಡಗಳನ್ನು ಪ್ರಕಟಿಸಿದ್ದು, ಇದರಲ್ಲಿ ಭಾರತ ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ಏಕದಿನ ತಂಡ ನಾಯಕನ ಪಟ್ಟ ನೀಡಿರುವುದು ಹಲವು ಅನುಮಾನ ಹಾಗೂ ಗೊಂದಲಗಳಿಗೆ ಕಾರಣವಾಗಿದೆ.
ಟೆಸ್ಟ್‌ ನಾಯಕನಾಗಿ ಸಮರ್ಥವಾಗಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿ ಅವರಿಗೆ ಟೆಸ್ಟ್‌ ತಂಡದ ನಾಯಕನ್ನಾಗಿ ಆಯ್ಕೆ ಮಾಡುವ ಬದಲು ಐಸಿಸಿ ಏಕದಿನ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಏಕದಿನ ಹಾಗೂ ಟಿ20 ತಂಡದ ಉಪನಾಯಕನಾಗಿದ್ದ ಕೊಹ್ಲಿ ಈಗ ಈಗ 12 ಮಂದಿ ಸದಸ್ಯರ ಐಸಿಸಿ ಏಕದಿನ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಟೆಸ್ಟ್‌ ಟೀಮ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ ಹೊರತಾಗಿಯೂ ಐಸಿಸಿ ಪ್ರಕಟಿಸಿದ ಟೆಸ್ಟ್‌ ತಂಡದಲ್ಲಿ ಕೊಹ್ಲಿ ಅವರನ್ನು ಪರಿಗಣಿಸಲಾಗಿಲ್ಲ.  ಹಲವು ಕ್ರಿಕೆಟ್‌ ಪಂಡಿತರು ಐಸಿಸಿ ಆಯ್ಕೆ ಸರಿಯಾಗಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 
ಇಂದು ಪ್ರಕಟಿಸಲಾದ ಏಕದಿನ ತಂಡದಲ್ಲಿ,.ನಾಲ್ಕು ಮಂದಿ ದಕ್ಷಿಣ ಆಫ್ರಿಕ ಆಟಗಾರರು, ಆಸ್ಟ್ರೇಲಿಯಾದ ಮೂವರು ಆಟಗಾರರು, ಕೊಹ್ಲಿ ಸೇರಿ ಮೂವರು ಭಾರತೀಯ ಆಟಗಾರರು ಹಾಗೂ ಇಂಗ್ಲೆಂಡ್ ಮತ್ತು ವೆಸ್ಟ್​ಇಂಡೀಸ್​ನ ತಲಾ ಒಬ್ಬ ಆಟಗಾರರು ಇದ್ದಾರೆ.
ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾದ ಎಬಿ ಡಿ ವಿಲಿಯರ್ಸ್, ವಿಕೆಟ್ ಕೀಪರ್ ಸ್ಥಾನವನ್ನೂ ನಿಭಾಯಿಸಬಲ್ಲ ಕ್ವಿಂಟಾನ್ ಡಿ ಕಾಕ್, ವೇಗಿ ಕಾಗಿಸೊ ರಬದಾ, ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್, ಡೇವಿಡ್ ವಾರ್ನರ್ ಮತ್ತು ಮಿಚೆಲ್ ಸ್ಟಾರ್ಕ್ ಸ್ಥಾನ ಪಡೆದುಕೊಂಡವರಾಗಿದ್ದಾರೆ. ರೋಹಿತ್ ಶರ್ಮ, ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆದುಕೊಂಡ ಉಳಿದ ಇಬ್ಬರು ಭಾರತೀಯ ಆಟಗಾರರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com