
ಮುಂಬಯಿ: ತಮ್ಮ ಅಪ್ಪಟ ಪಾಕ್ ಅಭಿಮಾನಿಗೆ ಭಾರತ ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ವೀಕ್ಷಿಸಲು ಮಹೇಂದ್ರ ಸಿಂಗ್ ಧೋನಿ ಟಿಕೆಟ್ ನೀಡಿದ್ದಾರೆ.
ಮೊಹಮದ್ ಬಶೀರ್. 62 ವರ್ಷದ ಪಾಕಿಸ್ತಾನದ ಈ ವ್ಯಕ್ತಿ ಮಹೇಂದ್ರ ಸಿಂಗ್ ಧೋನಿ ಅವರ ಕಟ್ಟಾ ಅಭಿಮಾನಿ. ಅರ್ಧ ಪಾಕಿಸ್ತಾನ ಬಾವುಟ ಅರ್ಧ ಹಿಂದೂಸ್ತಾನ ಬಾವುಟ ಹೊಂದಿರುವ ಬಟ್ಟೆ ಧರಿಸಿ, ಉದ್ದನೆಯ ದಾಡಿಯೊಂದಿಗೆ ಪೋರ್, ಸಿಕ್ಸ್ ಭಾರಿಸಿದಾಗ ಉಭಯ ತಂಡಕ್ಕೂ ಚಿಯರಪ್ ಮಾಡತ್ತಾರೆ.
ಬಷಿರ್ ಚಾಚಾ ಸದಾ ಧೋನಿ ಶ್ರೇಯಸ್ಸನ್ನು ಬಯಸುತ್ತಾರೆ. 2011ರ ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್ ಸಿಗದೆ ನಿರಾಶರಾದಾಗ ಟಿಕೆಟ್ ನೀಡಿದ್ದು ಧೋನಿ. ಕಳೆದ ಶನಿವಾರ ನಡೆದ ಇಂಡೋ-ಪಾಕ್ ಪಂದ್ಯದಲ್ಲಿ ಕೂಡ ಕಾಣಿಸಿಕೊಂಡ ಬಷಿರ್, ಪಾಕ್ ಹಾಗೂ ಭಾರತಕ್ಕೆ ತಮ್ಮ ಬೆಂಬಲ ಸೂಚಿಸಿದ್ದರು. ಆಟಕ್ಕೆ ದೇಶ, ಧರ್ಮದ ಹಂಗಿಲ್ಲ ಎಂದು ಬಷಿರ್ ಚಾಚಾ ಸಾಬೀತು ಪಡಿಸಿದರು.
Advertisement