
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸಪ್ಟೆಂಬರ್ ತಿಂಗಳಲ್ಲಿ ಮಿನಿ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯ ಆಯೋಜನೆಗೆ ಇತರ ಕ್ರಿಕೆಟ್ ಮಂಡಳಿಗಳು ವಿರೋಧ ವ್ಯಕ್ತಪಡಿಸಿವೆ.
ಬಿಸಿಸಿಐ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಗೆ ಸೆಪ್ಟಂಬರ್ ತಿಂಗಳಲ್ಲಿ ಮಿನಿ ಐಪಿಎಲ್ ಆಯೋಜನೆ ಕುರಿತು ಕಳೆದ ತಿಂಗಳು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಈ ಪ್ರಸ್ತಾವನೆಗೆ ಇದೀಗ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗಳು ವಿರೋಧ ವ್ಯಕ್ತಪಡಿಸಿವೆ.
ಈ ಮಧ್ಯೆ ಸೆಪ್ಟಂಬರ್ ನಲ್ಲಿ ಐಸಿಸಿ ವಿಶ್ವ ಟಿ20 ಸರಣಿ ಆಯೋಜನೆ ಕುರಿತು ಚಿಂತನೆ ನಡೆಸುತ್ತಿದ್ದು, ಬಿಸಿಸಿಐಗೆ ಹಿನ್ನಡೆಯಾಗಿದೆ. ಚಾಂಪಿಯನ್ಸ್ ಟ್ರೋಪಿ ಯಶಸ್ವಿಯಾಗದ ಹಿನ್ನೆಲೆ ಬಿಸಿಸಿಐ ಈ ವರ್ಷದಿಂದ ಮಿನಿ ಐಪಿಎಲ್ ಆಯೋಜನೆಗೆ ತೀರ್ಮಾನಿಸಿತ್ತು.
Advertisement