ಮೊಹಮ್ಮದ್ ಹಫೀಜ್-ವಿರಾಟ್ ಕೊಹ್ಲಿ
ಕ್ರಿಕೆಟ್
ಪಾಕ್ ನಲ್ಲಿ ಕ್ರಿಕೆಟಿಗ ಹಫೀಜ್ ಗೆ ಅತೀ ಹೆಚ್ಚು ಸಂಭಾವನೆ, ಕೊಹ್ಲಿ ಸಂಭಾವನೆ ಇದರ 100 ಪಟ್ಟು ಹೆಚ್ಚು!
ಪಾಕಿಸ್ತಾನ ಆಟಗಾರ ಮೊಹಮ್ಮದ್ ಹಫೀಜ್ ವಾರ್ಷಿಕವಾಗಿ 2.5 ಕೋಟಿ ಪಡೆಯುವ ಮೂಲಕ ಪಾಕ್ ಕ್ರಿಕೆಟ್ ನಲ್ಲಿ ಗರಿಷ್ಠ ಸಂಭಾವನೆ ಪಡೆಯುವ ಕ್ರಿಕೆಟಿಗ...
ನವದೆಹಲಿ: ಪಾಕಿಸ್ತಾನ ಆಟಗಾರ ಮೊಹಮ್ಮದ್ ಹಫೀಜ್ ವಾರ್ಷಿಕವಾಗಿ 2.5 ಕೋಟಿ ಪಡೆಯುವ ಮೂಲಕ ಪಾಕ್ ಕ್ರಿಕೆಟ್ ನಲ್ಲಿ ಗರಿಷ್ಠ ಸಂಭಾವನೆ ಪಡೆಯುವ ಕ್ರಿಕೆಟಿಗ ಎನಿಸಿಕೊಂಡಿದ್ದರೆ, ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ವಾರ್ಷಿಕವಾಗಿ ಸಂಭಾವನೆ ಹಾಗ ಜಾಹೀರಾತು ಒಪ್ಪಂದಗಳಿಂದ ಬರೋಬ್ಬರಿ 308 ಕೋಟಿ ರುಪಾಯಿ ಸಂಪಾದನೆ ಮಾಡುತ್ತಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) 2015-16ನೇ ಸಾಲಿನ ವರದಿಯನ್ನು ಪಾಕಿಸ್ತಾನ ಸರ್ಕಾರದ ಸಚಿವಾಲಯಕ್ಕೆ ನೀಡಿದ್ದು, ಇದರಲ್ಲಿ 46 ಕ್ರಿಕೆಟಿಗರಿಗೆ ಒಟ್ಟಾರೆ 35 ಕೋಟಿ ರುಪಾಯಿ ಪಾವತಿ ಮಾಡಿದೆ. ಇದರಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ನ ಸಂಭಾವನೆ ಹಾಗೂ ಬೋನಸ್ ಕೂಡ ಸೇರಿದೆ.
ಮೊಹಮ್ಮದ್ ಹಫೀಜ್ ನಂತರ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ತಂಡದ ವಿಕೆಟ್ ಕೀಪರ್ ಸರ್ಫ್ರಾಜ್ ಅಹ್ಮದ್ 2.10 ಕೋಟಿ ರುಪಾಯಿ ಪಡೆದರೆ, ಶಾಹೀದ್ ಆಫ್ರಿದಿ 1.14 ಕೋಟಿ ರುಪಾಯಿ ಪಡೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ