ಭಾರತದ ಇನ್ನಿಂಗ್ಸ್ ಗೆ ಬಲ ತಂದ ಕನ್ನಡಿಗ ರಾಹುಲ್ ಶತಕ

ವೆಸ್ಟ್ ಇಂಡೀಸ್ ವಿರುದ್ಧ ಜಮೈಕಾದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರ ಅಮೋಘ ಶತಕದ ನೆರವಿನಿಂದ ಭಾರತ ತಂಡ ಬರೊಬ್ಬರಿ 162 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದೆ.
ಆಕರ್ಷಕ ಶತಕ ಸಿಡಿಸಿದ ರಾಹುಲ್ ಸಂಭ್ರಮದ ಪರಿ (ಕ್ರಿಕ್ ಇನ್ಫೋ ಚಿತ್ರ)
ಆಕರ್ಷಕ ಶತಕ ಸಿಡಿಸಿದ ರಾಹುಲ್ ಸಂಭ್ರಮದ ಪರಿ (ಕ್ರಿಕ್ ಇನ್ಫೋ ಚಿತ್ರ)

ಜಮೈಕಾ: ವೆಸ್ಟ್ ಇಂಡೀಸ್ ವಿರುದ್ಧ ಜಮೈಕಾದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರ ಅಮೋಘ ಶತಕದ ನೆರವಿನಿಂದ ಭಾರತ ತಂಡ ಬರೊಬ್ಬರಿ  162 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದೆ.

ಆರ್ ಅಶ್ವಿನ್ ಅವರ ಕರಾರುವಕ್ಕಾದ ದಾಳಿಯಿಂದ ವಿಂಡೀಸ್ ತಂಡವನ್ನು ಕೇವಲ 196 ರನ್ ಗಳಿಗೆ ಕಟ್ಟಿಹಾಕಿದ್ದ ಭಾರತ ತಂಡ ಬ್ಯಾಟಿಂಗ್ ನಲ್ಲಿಯೂ ಅದೇ ಪ್ರದರ್ಶನವನ್ನು ಕಾಯ್ದುಕೊಂಡಿದ್ದು,  ಆರಂಭಿಕ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಅವರ ಅಮೋಘ ಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್ ನಲ್ಲಿ ಬರೊಬ್ಬರಿ 162 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ. ಶಿಖರ್ ಧವನ್ ಅವರ  ವಿಕೆಟ್ ಪತನದಿಂದ ಆರಂಭಿಕ ಆಘಾತ ಎದುರಿಸಿದ್ದ ಭಾರತ ತಂಡಕ್ಕೆ ರಾಹುಲ್ ಹಾಗೂ ಪೂಜಾರಾ ನೆರವಾದರು. ಮತ್ತೊಂದು ತುದಿಯಲ್ಲಿ ಉತ್ತಮವಾಗಿ ಆಡುತ್ತಿದ್ದ ರಾಹುಲ್ ಆಕರ್ಷಕ ಶತಕ  ಸಿಡಿಸಿ ಸಂಭ್ರಮಿಸಿದರು.  ಉತ್ತಮವಾಗಿ ಆಡುತ್ತಿದ್ದ ಈ ಜೋಡಿ ತಂಡಕ್ಕೆ ಭರ್ಜರಿ ಶತಕದ ಜೊತೆಯಾಟ ನೀಡಿತು. ಆದರೆ ತಂಡದ ಮೊತ್ತ 208 ರನ್ ಗಳಾಗಿದ್ದಾಗ ಈ ಜೋಡಿ ಬೇರ್ಪಟ್ಟಿತು.

46 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದ ಪೂಜಾರಾ ಇನ್ನಿಲ್ಲಿದ ರನ್ ಕದಿಯಲು ಹೋಗಿ ಅನಾವಶ್ಯಕವಾಗಿ ರನ್ ಔಟ್ ಆದರು. ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ ಕೂಡ 44 ರನ್ ಗಳಿಸಿ  ಆರ್ಧಶತಕದ ಹೊಸ್ತಿಲಲ್ಲಿ ಚೇಸ್ ಗೆ ವಿಕೆಟ್ ಒಪ್ಪಿಸಿದರು. ಈ ವೇಳೆಗಾಗಲೇ ರಾಹುಲ್ 150 ರನ್ ಗಳ ಗಡಿ ದಾಟಿದ್ದರು. ಕೊಹ್ಲಿ ವಿಕೆಟ್ ಪತನದ ಬಳಿಕ ಶತಕ ವೀರ ರಾಹುಲ್ ಕೂಡ ಗೇಬ್ರಿಯಲ್  ಗೆ ವಿಕೆಟ್ ಒಪ್ಪಿಸಿದರು. ರಹಾನೆ ಮತ್ತು ಆರ್ ಅಶ್ವಿನ್ ಜೋಡಿ ಭಾರತದ ಇನ್ನಿಂಗ್ಸ್ ಕಟ್ಟುವ ಜವಾಬ್ಗಾರಿ ಹೊತ್ತರಾದರೂ, ಬಿಶೂ ಬೌಲಿಂಗ್ ನಲ್ಲಿ 3ರನ್ ಗಳಿಸಿ ಎಲ್ ಬಿ ಬಲೆಗೆ ಬಿದ್ದರು. ಪ್ರಸ್ತುತ 42  ರನ್ ಗಳಿಸಿ ಅರ್ಧಶತಕ ಹೊಸ್ತಿಲಲ್ಲಿರುವ ಅಜಿಂಕ್ಯಾ ರಹಾನೆ ಹಾಗೂ 17 ರನ್ ಗಳಿಸಿ ವೃದ್ಧಿಮಾನ್ ಸಾಹಾ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com