ಬದಲಾವಣೆ ಅಗತ್ಯ: ಐಸಿಸಿ ಕ್ರಿಕೆಟ್ ಸಮಿತಿ ತೆಗೆದುಕೊಂಡ 6 ಕಠಿಣ ನಿರ್ಧಾರಗಳು

ಕ್ರಿಕೆಟ್ ನಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವ ಸಲುವಾಗಿ ಭಾರತೀಯ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಸಭೆ ಸೇರಿದ ಐಸಿಸಿ ಕ್ರಿಕೆಟ್ ಸಮಿತಿ ಹಲವು ಮಹತ್ವದ...
ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆ

ಕ್ರಿಕೆಟ್ ನಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವ ಸಲುವಾಗಿ ಭಾರತೀಯ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಸಭೆ ಸೇರಿದ ಐಸಿಸಿ ಕ್ರಿಕೆಟ್ ಸಮಿತಿ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿವೆ.

ಸಭೆಯಲ್ಲಿ ಐಸಿಸಿ ಕ್ರಿಕೆಟ್ ಸಮಿತಿ 6 ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದು, ನಿರ್ಧಾರಗಳ ಪ್ರಮುಖ ಅಂಶಗಳು ಈ ಕೆಳಗಿನಂತಿವೆ...

ಕ್ರಿಕೆಟ್ ರಚನೆ
ಸಮಿತಿ ಸಭೆಯಲ್ಲಿ ಕ್ರಿಕೆಟ್ ರಚನೆ ಕುರಿತಂತೆ ಚರ್ಚೆ ನಡೆಸಲಾಗಿದ್ದು, ಸಭೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನ್ನು ಗಮನದಲ್ಲಿಟ್ಟುಕೊಂಡು ಆಟಕ್ಕೆ ಮೂರು ರೀತಿಯ ಸ್ವರೂಪ ನೀಡಲು ತೀರ್ಮಾನಿಸಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಬಡ್ತಿ ಹಾಗೂ ವರ್ಗಾವಣೆಗಳನ್ನು ನೀಡಲು ತೀರ್ಮಾನಿಸಿದ್ದು, ಈ ಬಗೆಗಿನ ಬೆಳವಣಿಗೆಯನ್ನು ಬಹಿರಂಗ ಪಡಿಸಲು ಐಸಿಸಿ ನಿರಾಕರಿಸಿದೆ. ಇದಲ್ಲದೆ, ಸಭೆಯಲ್ಲಿ ಹಗಲು/ರಾತ್ರಿ ಆಡುವ ಟೆಸ್ಟ್ ಕ್ರಿಕೆಟ್ ಬಗ್ಗೆಯೂ ಚರ್ಚೆ ನಡೆಸಲಾಗಿದ್ದು, ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ.

ತಂತ್ರಜ್ಞಾನ ಬಳಕೆ
ಇನ್ನು ಕ್ರಿಕೆಟ್ ನಲ್ಲಿ ತಂತ್ರಜ್ಞಾನ ಬಳಕೆಯನ್ನು ಹೆಚ್ಚಿಸುವುದರ ಕುರಿತಂತೆಯೂ ಚರ್ಚೆ ನಡೆಸಲಾಗಿದ್ದು, ಈ ಬಗ್ಗೆ ಎಂಐಟಿ ಇಂಜಿನಿಯರ್ ಗಳು ಸಲಹೆ ನೀಡಿದ್ದು, ಪ್ರಸ್ತುತ ಬಳಕೆಯಾಗುತ್ತಿರುವ (ಡಿಸಿಶನ್ ರಿವ್ಯೂ ಸಿಸ್ಟಮ್) ತಂತ್ರಜ್ಞಾನದ ಕುರಿತಂತೆ ಐಸಿಸಿಗೆ ವಿವರಣೆಯನ್ನು ನೀಡಿದ್ದಾರೆ.

ಬ್ಯಾಟ್ ಗಾತ್ರ
ಸಭೆಯಲ್ಲಿ ಬ್ಯಾಟ್ ಗಾತ್ರಗಳ ಕುರಿತಂತೆಯೂ ಚರ್ಚೆ ನಡೆಸಲಾಗಿದ್ದು, ಈ ಬಗ್ಗೆ ಸಮಿತಿ ಭಾರೀ ಕಳವಳ ವ್ಯಕ್ತಪಡಿಸಿದೆ. ಕ್ರಿಕೆಟ್ ನಿಯಮಗಳನ್ನು ರೂಪಿಸುವ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್ ಗೆ ಬ್ಯಾಟ್ ನ ಗಾತ್ರ ಕಿರಿದುಕೊಳಿಸುವ ಬಗ್ಗೆ ಬಲವಾದ ಶಿಫಾರಸು ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಂಸಿಸಿಯು, ಈ ಬಗ್ಗೆ ಸ್ಫಷ್ಟ ಸಲಹೆಗಳನ್ನು ನೀಡುವಂತೆ ಐಸಿಸಿ ಕ್ರಿಕೆಟ್ ಸಮಿತಿಯನ್ನು ಕೋರಿದೆ. ಅಲ್ಲದೆ, ಕ್ರಿಕೆಟ್ ಪಂದ್ಯಗಳು ಇತ್ತೀಚಿನ ದಿನಗಳಲ್ಲಿ ಬ್ಯಾಟ್ಸ್ ಮನ್ ಗಳ ಪರವಾಗಿ ಬದಲಾಗುತ್ತಿದ್ದು, ಸುಮ್ಮನೆ ಬಾರಿಸಿದ ಹೊಡೆತಗಳೂ ಕೂಡ ಬೌಂಡರಿ ಗೆರೆಯನ್ನು ದಾಟುತ್ತಿದೆ. ಎಂದು ಹೇಳಿಕೊಂಡಿದೆ.

ನಿಯಮ ಬದಲಿ: ಆಸ್ಟ್ರೇಲಿಯ ಪ್ರಸ್ತಾವಕ್ಕೆ ಒಪ್ಪಿದ ಐಸಿಸಿ
ಇನ್ನು ಪಂದ್ಯದ ವೇಳೆ ಗಾಯಗೊಂಡವರ ಬದಲಿಗೆ ಬೇರೊಬ್ಬ ಆಟಗಾರರರನ್ನು ದೇಶಿ ಕ್ರಿಕೆಟ್ ನಲ್ಲಿ ಆಡಿಸುವ ಪ್ರಸ್ತಾವವವನ್ನು ಆಸ್ಟ್ರೇಲಿಯ ಐಸಿಸಿ ಮುಂದೆ ಇಟ್ಟಿದ್ದು, ಈ ಪ್ರಸ್ತಾವಕ್ಕೆ ಐಸಿಸಿ ಒಪ್ಪಿಗೆ ಸೂಚಿಸಿದೆ. ಇದರಂತೆ 2 ವರ್ಷಗಳ ಅವಧಿಗೆ ಈ ಪ್ರಯೋಗ ಮಾಡಲು ಐಸಿಸಿ ಚಿಂತನೆ ನಡೆಸಿದೆ. ಸಭೆಯಲ್ಲಿ ಈ ಬಗ್ಗೆಯೂ ಚರ್ಚೆಯನ್ನು ನಡೆಸಲಾಗಿದೆ.

ಹೆಲ್ಮೆಟ್ ಸುರಕ್ಷತೆ
ಸಭೆಯಲ್ಲಿ ಆಟಗಾರರ ಹೆಲ್ಮೆಟ್ ಕುರಿತಂತೆಯೂ ಚರ್ಚೆ ನಡೆಸಲಾಗಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಲವು ಆಟಗಾರರು ಹೆಲ್ಮೆಟ್ ಧರಿಸದಿರುವುದರ ಬಗ್ಗೆ ಮಾತುಕತೆ ನಡೆಸಲಾಗಿದೆ. ಕೆಲವು ಆಟಗಾರರು ಬ್ಯಾಟಿಂಗ್ ಮಾಡುವಾಗ ಹೆಲ್ಮೆಟ್ ಧರಿಸುತ್ತಿಲ್ಲ. ಇದು ಅಪಾಯಕ್ಕೆ ಕಾರಣವಾಗಿದ್ದು, ಇನ್ನು ಮುಂದೆ ಪಂದ್ಯದ ವೇಲೆ ಬ್ರಿಟಿಷ್ ಸುರಕ್ಷತಾ ದರ್ಜೆಯ (ಬ್ರಿಟೀಷ್ ಸೇಫ್ಟಿ ಸ್ಟಾಂಡರ್ಡ್) ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಬೇಕೆಂದು ಸಮಿತಿ ತಿಳಿಸಿದೆ.

ಮಹಿಳಾ ಕ್ರಿಕೆಟ್ ಅಪ್ ಡೇಟ್
ಸಭೆಯಲ್ಲಿ ಇತ್ತೀಚೆಗಷ್ಟೇ ನಡೆದ ಅಂತರಾಷ್ಟ್ರೀಯ ಟಿ20 ಪಂದ್ಯಾವಳಿ ಕುರಿತಂತೆಯೂ ಚರ್ಚೆ ನಡೆಸಲಾಗಿದ್ದು, ಮಹಿಳಾ ಟಿ20 ಕ್ರಿಕೆಟ್ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಭಾರತದಲ್ಲಿ 24.5 ಮಿಲಿಯನ್ ಗೂ ಹೆಚ್ಚು ಟಿವಿ ವೀಕ್ಷಕರು ಕ್ರಿಕೆಟನ್ನು ವೀಕ್ಷಿಸಿದ್ದಾರೆಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com