ದಾಖಲೆಯ ಕ್ಲೀನ್ ಸ್ವೀಪ್ ಗೆ ಯಂಗ್ ಇಂಡಿಯಾ ಸಜ್ಜು

ಮೊದಲ ಎರಡು ಪಂದ್ಯಗಳನ್ನು ಗೆದ್ದು ಈಗಾಗಲೇ ಸರಣಿಯನ್ನು ಕೈವಶಪಡಿಸಿಕೊ೦ಡಿರುವ ಭಾರತ ತ೦ಡ ಜಿ೦ಬಾಬ್ವೆ ವಿರುದ್ಧದ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ತುದಿಗಾಲಲ್ಲಿ ನಿಂತಿದೆ.
ಅಭ್ಯಾಸ ನಿರತ ಭಾರತ ತಂಡ (ಸಂಗ್ರಹ ಚಿತ್ರ)
ಅಭ್ಯಾಸ ನಿರತ ಭಾರತ ತಂಡ (ಸಂಗ್ರಹ ಚಿತ್ರ)
Updated on

ಹರಾರೆ: ಮೊದಲ ಎರಡು ಪಂದ್ಯಗಳನ್ನು ಗೆದ್ದು ಈಗಾಗಲೇ ಸರಣಿಯನ್ನು ಕೈವಶಪಡಿಸಿಕೊ೦ಡಿರುವ ಭಾರತ ತ೦ಡ ಜಿ೦ಬಾಬ್ವೆ ವಿರುದ್ಧದ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ  ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ತುದಿಗಾಲಲ್ಲಿ ನಿಂತಿದೆ.

ಇಂದು ನಡೆಯಲಿರುವ ಪಂದ್ಯ ಗೆಲ್ಲುವ ಮೂಲಕ ಕ್ಲೀನ್‍ಸ್ವೀಪ್ ಸಾಧಿಸುವುದೇ ಭಾರತದ ಗುರಿಯಾಗಿದ್ದು, ಕೊನೆಯ ಪಂದ್ಯವನ್ನಾದರೂ ಗೆಲ್ಲುವ ಮೂಲಕ ತವರಿನಲ್ಲಿ ಮಾನ ಉಳಿಸಿಕೊಳ್ಳುವ  ಇರಾದೆ ಜಿಂಬಾಬ್ವೆಯದ್ದು. ಹೀಗಾಗಿ ಇಂದಿನ ಪಂದ್ಯ ರೋಚಕತೆಯಿಂದ ಕೂಡಿರಲಿದ್ದು, ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಒಂದಷ್ಟು ಬದಲಾವಣೆ ಕಾಣುವಸಾಧ್ಯತೆ ಗಳಿವೆ.

ಈಗಾಗಲೇ ಸರಣೆ ಭಾರತ ತಂಡದ ಕೈವಶವಾಗಿರುವುದರಿಂದ ಕಳೆದೆರಡು ಪಂದ್ಯಗಳಲ್ಲಿ ಬೆಂಚ್ ಕಾದು ಕುಳಿತಿದ್ದ ಯುವ ಆಟಾಗರರಿಗೆ ನಾಯಕ ಧೋನಿ ಮಣೆಹಾಕುವ ಸಾಧ್ಯತೆಗಳಿವೆ.   ಹರಾರೆ ಸ್ಫೋಟ್ಸ್‍೯ ಕ್ಲಬ್ ಮ್ಯೆದಾನದಲ್ಲಿ ಇಂದು ನಡೆಯಲಿರುವ ಅಂತಿಮ ಏಕದಿನ ಪ೦ದ್ಯದಲ್ಲಿ ತ೦ಡದಲ್ಲಿ ಪ್ರಮುಖ ಬದಲಾವಣೆ ಆಗುವ ಸೂಚನೆಯನ್ನು ಧೋನಿ 2ನೇ ಪ೦ದ್ಯದ ಬೆನ್ನಲ್ಲೇ  ನೀಡಿದ್ದರು. ಅಗ್ರ ಮೂರು ಬ್ಯಾಟ್ಸ್ ಮನ್‍ಗಳಿಗೆ ಎರಡೂ ಪ೦ದ್ಯಗಳಲ್ಲಿ ಉತ್ತಮ ಅವಕಾಶ ಸಿಕ್ಕಿರುವುದರಿ೦ದ ಕೊನೆಯ ಪ೦ದ್ಯದಲ್ಲಿ ಇವರಿಗೆ ವಿಶ್ರಾ೦ತಿ ನೀಡುವ ಸಾಧ್ಯತೆ ಇದ್ದು, ಆರ೦ಭೀಕ  ಕೆಎಲ್ ರಾಹುಲ್ ಹಾಗೂ ಮಧ್ಯಮ ಕ್ರಮಾ೦ಕದ ಬ್ಯಾಟ್ಸ್ ಮನ್ ಅ೦ಬಟಿ ರಾಯುಡು ಅ೦ತಿಮ ಪ೦ದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ. ಕರುಣ್ ನಾಯರ್ ಜತೆ ಆರ೦ಭೀಕರಾಗಿ ಫೈಜ್  ಫಜಲ್ ಆಡುವ ಸಾಧ್ಯತೆ ಇದೆ. ಇನ್ನು ರಾಯುಡು ಸ್ಥಾನದಲ್ಲಿ ಮ೦ದೀಪ್ ಸಿ೦ಗ್ ಕಣಕ್ಕಿಳಿಯಲಿದ್ದಾರೆ. ವೇಗದ ಬೌಲಿ೦ಗ್ ವಿಭಾಗದಲ್ಲಿ ಬರೀ೦ದರ್ ಸನ್‍೯, ಧವಳ್ ಕುಲಕಣಿ೯ ಹಾಗೂ  ಜಸ್‍ಪ್ರೀತ್ ಬುಮ್ರಾ ನಡುವೆ ಒಬ್ಬರು ಅಥವಾ ಇಬ್ಬರಿಗೆ ವಿಶ್ರಾ೦ತಿ ನೀಡುವ ನಿರೀಕ್ಷೆ ಇದೆ

ಇನ್ನು ಕಳೆದೆರಡೂ ಪಂದ್ಯಗಳಲ್ಲಿ ಭಾರತದ ಯುವ ಪಡೆಯ ಪ್ರಭಾವಿ ಬೌಲಿ೦ಗ್ ದಾಳಿಯನ್ನು ಎದುರಿಸಲು ಜಿಂಬಾಬ್ವೆ ತಂಡ ಕಷ್ಟಪಡುತ್ತಿದ್ದು, ತ೦ಡದಲ್ಲಿ ಅನುಭವಿ ಬ್ಯಾಟ್ಸ್ ಮನ್ ಗಳಿದ್ದರೂ  ಅವರಿಂದ ಜವಾಬ್ದಾರಿಯುತ ನಿವ೯ಹಣೆ ಬರುತ್ತಿಲ್ಲ. ಕಳೆದ ಪ೦ದ್ಯದಲ್ಲಿ ಅಧ೯ಶತಕ ಬಾರಿಸಿದ ವುಸಿ ಸಿಬಾ೦ಡ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ಈ ಪಂದ್ಯದಲ್ಲಿ ಜಿಂಬಾಬ್ವೆ ತಂಡ ತಿರುಗಿ ಬೀಳುವ  ಸಾಧ್ಯತೆ ಇದೆ.

 ಸತತ 3ನೇ ಬಾರಿಗೆ ವೈಟ್‍ವಾಷ್?
ಇನ್ನು ಭಾರತ ತಂಡ ತನ್ನ ಅ೦ತಿಮ ಪ೦ದ್ಯವನ್ನೂ ಗೆದ್ದರೆ ಜಿ೦ಬಾಬ್ವೆ ನೆಲದಲ್ಲಿ ಸತತ 3 ಕ್ಲೀನ್‍ಸ್ವೀಪ್ ಮಾಡಿದ ಸಾಧನೆ ಮಾಡಲಿದೆ. ಈಗಾಗಲೇ 2013ರ ಪ್ರವಾಸದ ಏಕದಿನ ಸರಣಿಯನ್ನು  5-0 ಹಾಗೂ 2015ರ ಸರಣಿಯನ್ನು ಭಾರತ 3-0 ಯಿ೦ದ ಗೆದ್ದುಕೊ೦ಡಿದೆ. ಈ ಪಂದ್ಯವನ್ನೂ ಗೆದ್ದರೆ ಭಾರತ ಸತತ 3 ಕ್ಲೀನ್ ಸ್ವೀಪ್ ಮಾಡಿದ ದಾಖಲೆ ಬರೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com