ಸಾಕ್ಷ್ಯಾಧಾರ ಕೊರತೆ; ಅತ್ಯಾಚಾರ ಆರೋಪ ಹೊತ್ತಿದ್ದ ಭಾರತೀಯರಿಗೆ ಜಾಮೀನು

ಜಿಂಬ್ವಾಬ್ವೆ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಜಿಂಬಾಬ್ವೆಯಲ್ಲಿ ಬಂಧಿತರಾಗಿದ್ದ ಭಾರತೀಯ ಮೂಲದ ಇಬ್ಬರು ಆರೋಪಿಗಳನ್ನು ಹರಾರೆ ಹೈಕೋರ್ಟ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಜಿಂಬಾಬ್ವೆ ಅತ್ಯಾಚಾರ ಪ್ರಕರಣ (ಸಾಂದರ್ಭಿಕ ಚಿತ್ರ)
ಜಿಂಬಾಬ್ವೆ ಅತ್ಯಾಚಾರ ಪ್ರಕರಣ (ಸಾಂದರ್ಭಿಕ ಚಿತ್ರ)

ಹರಾರೆ: ಜಿಂಬ್ವಾಬ್ವೆ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಜಿಂಬಾಬ್ವೆಯಲ್ಲಿ ಬಂಧಿತರಾಗಿದ್ದ ಭಾರತೀಯ ಮೂಲದ ಇಬ್ಬರು ಆರೋಪಿಗಳನ್ನು ಹರಾರೆ ಹೈಕೋರ್ಟ್  ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

ಪ್ರಕರಣ ಸಂಬಂಧ ಬುಧವಾರ ನಡೆದ ವಿಚಾರಣೆಯಲ್ಲಿ ಆರೋಪಿಗಳಾದ ಕೃಷ್ಣ ಸತ್ಯನಾರಾಯಣ ಮತ್ತು ರವಿ ಕುಮಾರ್ ಕೃಷ್ಣನ್ ವಿರುದ್ಧದ ಆರೋಪಗಳ ಕುರಿತಂತೆ ಯಾವುದೇ ಪ್ರಬಲ  ಸಾಕ್ಷ್ಯಾಧಾರಗಳು ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಕೇವಲ ಮಹಿಳೆ ಹೇಳಿಕೆಯ ಮೇರೆಗೆ ಆರೋಪಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ  ಆರೋಪಿಗಳಿಗೆ ನ್ಯಾಯಾಲಯ ತಲಾ ಒಂದು ಸಾವಿರ ಡಾಲರ್ ವೈಯುಕ್ತಿಕ ಬಾಂಡ್ ಆಧಾರದ ಮೇಲೆ ಜಾಮೀನು ನೀಡಿ, ತಕ್ಷಣವೇ ಅವರನ್ನು ಬಂಧಮುಕ್ತ ಗೊಳಿಸಬೇಕು ಎಂದು ಸೂಚಿಸಿದೆ.

"ಘಟನೆಯನ್ನು ಸೂಕ್ಷ ಪರಿಗಣಿಸಿ ನೋಡಿದಾಗ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಅನಗತ್ಯವಾಗಿ ಪೊಲೀಸ್ ವಶದಲ್ಲಿ ಇಟ್ಟುಕೊಳ್ಳುವುದರಲ್ಲಿ ಅಥ೯ವಿಲ್ಲ. ತಕ್ಷಣವೇ ಆತನನ್ನು  ಬಿಡುಗಡೆಗೊಳಿಸಬೇಕು' ಎ೦ದು ಹ್ಯೆಕೋಟ್‍೯ ನ್ಯಾಯಾಶ ಜಸ್ಟಿಸ್ ಮವಾಡ್ಜೆ ಆದೇಶಿಸಿದ್ದಾರೆ. ಆರೋಪಿ ಪರ ವಕೀಲ ದುಮಿಸಾನಿ ಮುಥೋಬೆನಿ ಹಾಗೂ ಹಾನ್ ಜೊನಾಥನ್ ಸಮುಕಾ೦ಗೆ  ಸೂಕ್ತವಾದ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಾರೆ ಎ೦ದು ಕೋಟ್‍೯ ತಿಳಿಸಿದೆ

"ಅತ್ಯಾಚಾರ ಆರೋಪ ಹೊತ್ತವರ ಪೈಕಿ ಓರ್ವ ಆರೋಪಿ ಭಾರತ-ಜಿ೦ಬಾಬ್ವೆ ಕ್ರಿಕೆಟ್ ಸರಣಿಯ ಪ್ರಾಯೋಜಕತ್ವ ವಹಿಸಿರುವ ಬೆ೦ಗಳೂರು ಮೂಲದ ಸ೦ಸ್ಥೆಯ ಸಿಬ್ಬ೦ದಿ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com