
ನವದೆಹಲಿ: ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ 27 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ತಮ್ಮ ಬಾಲ್ಯದ ದಿನಗಳ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
ತಮ್ಮ ಶಾಲಾ ದಿನಗಳ ಬಗ್ಗೆ ಮಾತನಾಡಿರುವ ಕೊಹ್ಲಿ ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಆಡುತ್ತಾ ರಜಾ ದಿನಗಳನ್ನ ಕಳೆಯುತ್ತಿದ್ದರಂತೆ. ರಜೆ ಮುಗಿಯುತ್ತಿದ್ದಂತೆ ಹೋಮ್ ವರ್ಕ್ ಮಾಡುವುದು ಬಹು ದೊಡ್ಡ ತಲೆನೋವಾಗಿತ್ತು ಎಂದು ಕೊಹ್ಲಿ ತಿಳಿಸಿದ್ದಾರೆ.
ಕ್ರಿಕೆಟ್ ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಕೊಹ್ಲಿಗೆ ಹೋಂ ವರ್ಕ್ ಎಂದರೇ ಅಲರ್ಜಿ ಆಗಿತ್ತಂತೆ. ಹೋಂ ವರ್ಕ್ ಮಾಡುತ್ತಿದ್ದರೂ ಅದರೂ ಮುಗಿಯುತ್ತಲೇ ಇರಲಿಲ್ಲ ಎಂದು ಹೇಳಿದ್ದಾರೆ.
ಇನ್ನೂ ರೇಲ್ವೆ ನಿಲ್ದಾಣದಲ್ಲಿ ಆಟ ಆಡಲು 10 ರೂ. ಬೇಕಿತ್ತು. ಆದರೆ ಆಗಿನ ಸಮಯದಲ್ಲಿ 10 ರೂ. ಹೊಂದಿಸುವುದು ತುಂಬಾ ಕಷ್ಟದ ಕೆಲಸವಾಗಿತ್ತು ಎಂದು ತಮ್ಮ ಬಾಲ್ಯ ಜೀವನವನ್ನು ಮೆಲುಕು ಹಾಕಿದ್ದಾರೆ.
Advertisement