ಉತ್ತಮ ಫೀಲ್ಡರ್ ಆಗಲು ಫಿಟ್ನೆಸ್ ನನಗೆ ಸಹಾಯವಾಯ್ತು: ವಿರಾಟ್ ಕೊಹ್ಲಿ

ಉತ್ತಮ ಬ್ಯಾಟಿಂಗ್ ಜೊತೆಗೆ ಉತ್ತಮ ಫೀಲ್ಡರ್ ಆಗಲು ನನಗೆ ಫಿಟ್ನೆಸ್ ತುಂಬಾ ಸಹಾಯ ಮಾಡಿದೆ, ತಾವು ದೈಹಿಕವಾಗಿ ಈಗಿರುವಷ್ಟು ಫಿಟ್‌ ಈ ಹಿಂದೆ
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ನವದೆಹಲಿ: ಉತ್ತಮ ಬ್ಯಾಟಿಂಗ್ ಜೊತೆಗೆ ಉತ್ತಮ ಫೀಲ್ಡರ್ ಆಗಲು ನನಗೆ ಫಿಟ್ನೆಸ್ ತುಂಬಾ ಸಹಾಯ ಮಾಡಿದೆ,  ತಾವು ದೈಹಿಕವಾಗಿ ಈಗಿರುವಷ್ಟು ಫಿಟ್‌ ಈ ಹಿಂದೆ ಯಾವತ್ತೂ ಇರಲಿಲ್ಲ ಎಂದು ಭಾರತ ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ.

2012ರ ಐಪಿಎಲ್‌ ಟೂರ್ನಿಯವರೆಗೆ ಫಿಟ್‌ನೆಸ್‌ ಬಗ್ಗೆ ಒಂದು ನಿಮಿಷವೂ ತಲೆ ಕೆಡಿಸಿಕೊಂಡಿರಲಿಲ್ಲ. ಬೆಳಗ್ಗೆಯಿಂದ ಸಂಜೆಯವರೆಗೆ ಯಾವ ರೀತಿಯ ಆಹಾರ ಸೇವಿಸಬೇಕು, ದಿನಕ್ಕೆ ಎಷ್ಟು ಅವಧಿ ದೈಹಿಕ ಕಸರತ್ತು ನಡೆಸಬೇಕು ಎಂಬ ಬಗ್ಗೆ ಮಾಹಿತಿಯೇ ಇರಲಿಲ್ಲ.

ಆದರೆ ನನ್ನ ಫಿಟ್‌ನೆಸ್‌ ಕುರಿತ ವ್ಯಾಖ್ಯಾನ 2012ರ ಐಪಿಎಲ್‌ನಿಂದ ಬದಲಾಯಿತು. ಆರೋಗ್ಯಕರ ದೇಹ ನನ್ನನ್ನು ಉತ್ತಮ ಬ್ಯಾಟ್ಸ್‌ಮನ್‌ ಆಗಿ ರೂಪಿಸುವುದರ ಜತೆಗೆ ಫೀಲ್ಡಿಂಗ್‌ನಲ್ಲೂ ಸುಧಾರಣೆ ಕಾಣಲು ಸಾಧ್ಯವಾಯಿತು ಎಂದು ವಿರಾಟ್‌ ಕೊಹ್ಲಿ ಹೇಳಿದ್ದಾರೆ.

2012ರಿಂದ ನನ್ನ ದೇಹಕ್ಕೆ ಸ್ಪಂದಿಸಲು ಆರಂಭಿಸಿದೆ. ಅಲ್ಲಿಂದ ಜೀವನಶೈಲಿಯೂ ಬದಲಾಯಿತು. ನಾನು ಒಬ್ಬ ಸಾಮಾನ್ಯ ಆಟಗಾರನಾಗಿ ಉಳಿಯಲು ಯಾವತ್ತೂ ಬಯಸಿಲ್ಲ. ವಿಶ್ವದಲ್ಲೇ ಶ್ರೇಷ್ಠ ಎಂದು ಕರೆಸಿಕೊಳ್ಳಬೇಕೆಂಬುದು ನನ್ನ ಬಯಕೆಯಾಗಿತ್ತು. ಹೀಗಾಗಿ ದೈಹಿಕವಾಗಿ ಫಿಟ್‌ ಆಗಿದ್ದರೆ ಏನು ಬೇಕಾದರೂ ಸಾಧಿಸಬಹುದೆಂದು ಭಾವಿಸಿದ್ದೆ ಎಂದು ಕೊಹ್ಲಿ ತಿಳಿಸಿದ್ದಾರೆ.

ಮೊದಲು ನಾನು ಚುರುಕಿನ ಫೀಲ್ಡರ್‌ ಆಗಿರಲಿಲ್ಲ. ಎಲ್ಲಾ ವಿಭಾಗಗಳಲ್ಲಿ ಕ್ಷೇತ್ರರಕ್ಷಣೆ ನಡೆಸಲು  ಸಿದ್ಧನಿರಲಿಲ್ಲ. ಆದರೆ ಫಿಟ್‌ ಆಗಿ, ದೈಹಿಕವಾಗಿ ಬಲಿಷ್ಠನಾದ ಬಳಿಕ ಆ ಎಲ್ಲಾ ನ್ಯೂನತೆಗಳಿಂದ ಹೊರ ಬಂದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com