ಕುಂಬ್ಳೆ ಆಯ್ಕೆಯಲ್ಲಿ ಲಕ್ಷ್ಮಣ್ ವಿರುದ್ಧದ ಸ್ವಹಿತಾಸಕ್ತಿ ಆರೋಪದಲ್ಲಿ ಹುರುಳಿಲ್ಲ: ಬಿಸಿಸಿಐ

ಭಾರತ ತಂಡದ ನೂತನ ಕೋಚ್ ಅನಿಲ್ ಕುಂಬ್ಳೆ ನೇಮಕ ವಿಚಾರದಲ್ಲಿ ಸಲಹಾ ಸಮಿತಿಯ ಸದಸ್ಯ ವಿವಿಎಸ್ ಲಕ್ಷ್ಮಣ್ ಯಾವುದೇ ರೀತಿಯ ಸ್ವಹಿತಾಸಕ್ತಿಯಲ್ಲಿ ಭಾಗಿಯಾಗಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಅಜಯ್ ಶಿರ್ಕೆ ಮತ್ತು ವಿವಿಎಸ್ ಲಕ್ಷ್ಮಣ್ (ಸಂಗ್ರಹ ಚಿತ್ರ)
ಅಜಯ್ ಶಿರ್ಕೆ ಮತ್ತು ವಿವಿಎಸ್ ಲಕ್ಷ್ಮಣ್ (ಸಂಗ್ರಹ ಚಿತ್ರ)

ನವದೆಹಲಿ: ಭಾರತ ತಂಡದ ನೂತನ ಕೋಚ್ ಅನಿಲ್ ಕುಂಬ್ಳೆ ನೇಮಕ ವಿಚಾರದಲ್ಲಿ ಸಲಹಾ ಸಮಿತಿಯ ಸದಸ್ಯ ವಿವಿಎಸ್ ಲಕ್ಷ್ಮಣ್ ಯಾವುದೇ ರೀತಿಯ ಸ್ವಹಿತಾಸಕ್ತಿಯಲ್ಲಿ ಭಾಗಿಯಾಗಿಲ್ಲ  ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಈ ಹಿಂದೆ ಅನಿಲ್ ಕುಂಬ್ಳೆ ನೇಮಕ ವಿಚಾರವಾಗಿ ಲಕ್ಷಣ್ ಸ್ವಹಿತಾಸಕ್ತಿ ಸಂಘರ್ಷದ ಆರೋಪ ಎದುರಿಸುತ್ತಿದ್ದರು. ಅನಿಲ್ ಕುಂಬ್ಳೆ ಮಾಲೀಕತ್ವದ ‘ಟೆನ್ ವಿಕ್’ ಸಂಸ್ಥೆಯಲ್ಲಿ ಬಿಸಿಸಿಐ ನ ಸಲಹಾ  ಸಮಿತಿ (ಸಿಎಸಿ) ಸದಸ್ಯರಾಗಿರುವ ವಿವಿಎಸ್ ಲಕ್ಷ್ಮಣ್ ಷೇರು ಹೊಂದಿದ್ದಾದ್ದು, ಇದೇ ಕಾರಣಕ್ಕಾಗಿ ಅನಿಲ್ ಕುಂಬ್ಳೆ ಪರವಾಗಿ ಲಕ್ಷ್ಮಣ್ ನಿಂತಿದ್ದರು ಎಂಬ ಆರೋಪಗಳು ಕೇಳಿಬಂದಿತ್ತು. ಆದರೆ ಈ  ಆರೋಪಗಳನ್ನು ತಳ್ಳಿ ಹಾಕಿರುವ ಬಿಸಿಸಿಐನ ಕಾರ್ಯದರ್ಶಿ ಅಜಯ್ ಶಿರ್ಕೆ, ಅವರು ವಿವಿಎಸ್ ಲಕ್ಷ್ಮಣ್ ಯಾವುದೇ ರೀತಿಯ ಸ್ವಹಿತಾಸಕ್ತಿಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಇಸಿಗೆ ಲಕ್ಷ್ಮಣ್ ನೇಮಕವಾದ ಬಳಿಕ ಮತ್ತು ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸುವುದಕ್ಕೂ ಮೊದಲೇ ಟೆನ್ ವಿಕ್ ಸ್ಪೋರ್ಟ್ಸ್ ನಿಂದ ಹೊರಬಂದಿದ್ದರು. ಇದೇ ಮಾರ್ಚ್ ನಲ್ಲಿ ಟೆನ್ ವಿಕ್  ಸಂಸ್ಥೆಯಲ್ಲಿ ತಾವು ಹೂಡಿಕೆ ಮಾಡಲಾಗಿದ್ದ ಶೇಕಡಾ 5ರಷ್ಟು ಷೇರುಗಳನ್ನು ವಾಪಸ್ ಪಡೆದಿರುವುದಾಗಿ ಎಂದು ಸಿಎಸಿಯಲ್ಲಿ ಕಾರ್ಯನಿರ್ವಹಿಸುವ ಮೊದಲೇ ಬಿಸಿಸಿಐಗೆ ಲಕ್ಷ್ಮಣ್ ತಿಳಿಸಿದ್ದರು   ಎಂದು ಅಜಯ್ ಶಿರ್ಕೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಬಿಸಿಸಿಐ ನೇಮಿಸಿದ್ದ  ವಿವಿಎಸ್ ಲಕ್ಷ್ಮಣ್, ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ನೇತಡತ್ವದ ಸಲಹಾ ಸಮಿತಿಯು ಮುಖ್ಯಕೋಚ್ ಹುದ್ದೆಗೆ ಹಲವರನ್ನು ಸಂದರ್ಶಿಸಿ ಅಂತಿಮವಾಗಿ  ಅನಿಲ್ ಕುಂಬ್ಳೆ ಅವರ ಹೆಸರನ್ನು ಶಿಫಾರಸು ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com