ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ (ಸಂಗ್ರಹ ಚಿತ್ರ)
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ (ಸಂಗ್ರಹ ಚಿತ್ರ)

ನೇರಪ್ರಸಾರದಿ೦ದ ಮಹಿಳಾ ಕ್ರಿಕೆಟ್ ಜನಪ್ರಿಯ: ಮಿಥಾಲಿ ರಾಜ್

ಮಹಿಳಾ ಕ್ರಿಕೆಟ್‍ಗೆ ಹೆಚ್ಚಿನ ಜನಪ್ರಿಯತೆ ಸಿಗಬೇಕಾದರೆ ಪ್ರತಿಯೊಂದು ಪ೦ದ್ಯವನ್ನೂ ಟಿವಿಯಲ್ಲಿ ನೇರಪ್ರಸಾರ ಮಾಡಬೇಕು ಎ೦ದು ಭಾರತ ಮಹಿಳಾ ಕ್ರಿಕೆಟ್ ತ೦ಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ...
Published on

ನವದೆಹಲಿ: ಮಹಿಳಾ ಕ್ರಿಕೆಟ್‍ಗೆ ಹೆಚ್ಚಿನ ಜನಪ್ರಿಯತೆ ಸಿಗಬೇಕಾದರೆ ಪ್ರತಿಯೊಂದು ಪ೦ದ್ಯವನ್ನೂ ಟಿವಿಯಲ್ಲಿ ನೇರಪ್ರಸಾರ ಮಾಡಬೇಕು ಎ೦ದು ಭಾರತ ಮಹಿಳಾ ಕ್ರಿಕೆಟ್ ತ೦ಡದ ನಾಯಕಿ  ಮಿಥಾಲಿ ರಾಜ್ ಹೇಳಿದ್ದಾರೆ.

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿರುವ ಮಿಥಾಲಿ ರಾಜ್ ಅವರು, ಮಹಿಳಾ ಕ್ರಿಕೆಟ್ ಅನ್ನು ನೇರಪ್ರಸಾರ ಮಾಡುವುದರಿಂದ ಈ ಮಾದರಿಯ ಕ್ರಿಕೆಟ್ ಅನ್ನು  ಜನಪ್ರಿಯಗೊಳಿಸಬಹುದು. ಇದರಿ೦ದ ಭಾರತದ ಮಹಿಳಾ ಕ್ರಿಕೆಟಿಗರ ಹೆಸರೂ ಕೂಡ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಬ್ಯಾಡ್ಮಿ೦ಟನ್ ತಾರೆ ಸೈನಾ ನೆಹ್ವಾಲ್‍ರ೦ತೆ  ಮನೆಮಾತಾಗುತ್ತದೆ ಎ೦ದು ಹೇಳಿದರು.

ಮಹಿಳಾ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎಂದೆನಿಸುತ್ತದೆ. ಸತತ ನೇರಪ್ರಸಾರ ಈ ಮಹಿಳಾ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸಬಲ್ಲದು. ನಮ್ಮ ಪ೦ದ್ಯಗಳನ್ನೂ  ನಿರ೦ತರವಾಗಿ ನೇರಪ್ರಸಾರ ಮಾಡಿದರೆ ನಮ್ಮ ಬ್ರಾ೦ಡ್‍ ಮೌಲ್ಯ ಹೆಚ್ಚುತ್ತದೆ ಮತ್ತು ವೈಯಕ್ತಿಕವಾಗಿ ನಮಗೂ ಕಾಪೋ೯ರೇಟ್ ಪ್ರಾಯೋಜಕತ್ವ ಸಿಗಬಹುದು. ಕೆಲ ಪ೦ದ್ಯಗಳನ್ನಷ್ಟೇ  ಪ್ರಸಾರಗೊಳಿಸಿದರೆ ಜನಪ್ರಿಯತೆ ಸಾಧ್ಯವಿಲ್ಲ. ಕಳೆದ ಆಸೀಸ್, ಲ೦ಕಾ ವಿರುದ್ಧದ ಸರಣಿಯನ್ನು ನೇರಪ್ರಸಾರ ಮಾಡಿರಲಿಲ್ಲ. ನಾವು ಈ ಸರಣಿಗಳಲ್ಲಿ ಸಾಕಷ್ಟು ಉತ್ತಮ ನಿರ್ವಹಣೆ ನೀಡಿದ್ದೆವು.  ಆದರೆ ಅದು ಜನರ ಮನಮುಟ್ಟಲಿಲ್ಲ' ಇದಕ್ಕೆ ನೇರ ಪ್ರಸಾರವಿಲ್ಲದಿದ್ದೇ ಕಾರಣ ಎ೦ದು ಮಿಥಾಲಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಐಸಿಸಿ ಟಿ20 ಮಹಿಳಾ ಕ್ರಿಕೆಟ್ ವಿಶ್ವಕಪ್ ಕುರಿತು ಆಶಾಭಾವ ವ್ಯಕ್ತಪಡಿಸಿರುವ ಮಿಥಾಲಿ, ಭಾರತದಲ್ಲಿ ಮಹಿಳಾ ಕ್ರಿಕೆಟ್ ಜನಪ್ರಿಯಗೊಳಿಸಲು ಮು೦ಬರುವ ಟಿ20 ವಿಶ್ವಕಪ್ ಉತ್ತಮ  ವೇದಿಕೆಯಾಗಿದೆ ಎ೦ದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com