ಐಸಿಸಿ ಟಿ20 ವಿಶ್ವಕಪ್: ಪ್ರಧಾನ ಸುತ್ತಿಗೆ ಆಫ್ಘಾನಿಸ್ತಾನ, ಜಿಂಬಾಂಬ್ವೆಗೆ ಮತ್ತೆ ನಿರಾಸೆ

ಡೇವ್ ವ್ಯಾಟ್ಮೋರ್ (ಕೋಚ್), ಮರ್ವನ್ ಅಟಪಟ್ಟು (ಬ್ಯಾಟಿಂಗ್ ಕೋಚ್), ಮುಖಾಯ್..
ಆಫ್ಘಾನಿಸ್ತಾನ ಮತ್ತು ಜಿಂಬಾಂಬ್ವೆ ನಡುವಿನ ಪಂದ್ಯ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಆಫ್ಘಾನಿಸ್ತಾನ ಮತ್ತು ಜಿಂಬಾಂಬ್ವೆ ನಡುವಿನ ಪಂದ್ಯ (ಚಿತ್ರಕೃಪೆ: ಕ್ರಿಕ್ ಇನ್ಫೋ)

ನಾಗ್ಪುರ: ಡೇವ್ ವ್ಯಾಟ್ಮೋರ್ (ಕೋಚ್), ಮರ್ವನ್ ಅಟಪಟ್ಟು (ಬ್ಯಾಟಿಂಗ್ ಕೋಚ್), ಮುಖಾಯ್ ಎನ್‌ಟಿನಿಯಂಥ (ಬೌಲಿಂಗ್ ಕೋಚ್) ಅತಿರಥ ಮಹಾರಥರನ್ನು ಹೊಂದಿದ್ದರೂ ಜಿಂಬಾಬ್ವೆ  ತಂಡ ಕ್ರಿಕೆಟ್ ಶಿಶು ಆಫ್ಘಾನಿಸ್ತಾನದ ವಿರುದ್ಧ ಮಂಡಿಯೂರಿದ್ದು, ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿದೆ.

ಶನಿವಾರ ನಾಗ್ಪುರದಲ್ಲಿ ನಡೆದ ಆಫ್ಘಾನಿಸ್ತಾನ ತಂಡದ ವಿರುದ್ಧ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಿಂಬಾಂಬ್ವೆ ತಂಡ ಆಫ್ಘಾನಿಸ್ತಾನ ವಿರುದ್ಧ 56 ರನ್ ಗಳ ಹಿನಾಯ ಸೋಲು ಕಂಡಿದೆ.  ವಿಶ್ವಕಪ್ ಗೆ ಅರ್ಹತೆ ಗಳಿಸುವ ನಿಟ್ಟಿನಲ್ಲಿ ಮಾಡು ಇಲ್ಲವೆ ಮಡಿಯಂತಿದ್ದ ಪಂದ್ಯದಲ್ಲಿ ಪಾಕಿಸ್ತಾನ ಮಾಜಿ ನಾಯಕ ಇಂಜಮಾನ್ ಉಲ್ ಹಕ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ  ಆಫ್ಘಾನಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳ ಬೃಹತ್ ರನ್ ಕಲೆಹಾಕಿತು.

ಆಫ್ಘಾನಿಸ್ತಾನ ಪರ ಉತ್ತಮ ಬ್ಯಾಟಿಂಗ್ ಮಾಡಿದ ಮಹಮದ್ ಶಹಜಾದ್ (40 ರನ್), ಶಮಿವುಲ್ಲಾ ಶೆನ್ವಾರಿ (43 ರನ್) ಮತ್ತು ಮಹಮದ್ ನಭಿ (52 ರನ್) ಅವರು ಆಫ್ಘಾನಿಸ್ತಾನ ಬೃಹತ್ ಮೊತ್ತ  ಕಲೆಹಾಕಲು ನೆರವಾದರು. ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಜಿಂಬಾಂಬ್ವೆ ತಂಡ 19.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದು 127 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ  ಆಫ್ಘಾನಿಸ್ತಾನದ ವಿರುದ್ಧ 56 ರನ್ ಗಳ ಹೀನಾಯ ಸೋಲು ಕಂಡಿತಲ್ಲದೇ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿತು.

ಉತ್ತಮವಾಗಿ ಆಡಿ ಆಕರ್ಷಕ ಅರ್ಧ ಶತಕ ಗಳಿಸಿದ ಮಹಮದ್ ನಭಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com