ಐಸಿಸಿ ಟೂರ್ನಿಯಲ್ಲಿ ಸತತ 17 ವರ್ಷಗಳ ಬಳಿಕ ಗೆದ್ದ ಸ್ಕಾಟ್ಲೆಂಡ್..!

ಸತತ 17 ವರ್ಷಗಳ ಬಳಿಕ ಸ್ಕಾಟ್ಲೆಂಡ್ ಕ್ರಿಕೆಟ್ ತಂಡ ಐಸಿಸಿ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಜಯ ದಾಖಲಿಸಿದೆ. ಶನಿವಾರ ಹಾಂಗ್ ಕಾಂಗ್..
ಹಾಂಗ್ ಕಾಂಗ್-ಸ್ಕಾಟ್ಲೆಂಡ್ ನಡುವಿನ ಪಂದ್ಯ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಹಾಂಗ್ ಕಾಂಗ್-ಸ್ಕಾಟ್ಲೆಂಡ್ ನಡುವಿನ ಪಂದ್ಯ (ಚಿತ್ರಕೃಪೆ: ಕ್ರಿಕ್ ಇನ್ಫೋ)

ನಾಗ್ಪುರ: ಸತತ 17 ವರ್ಷಗಳ ಬಳಿಕ ಸ್ಕಾಟ್ಲೆಂಡ್ ಕ್ರಿಕೆಟ್ ತಂಡ ಐಸಿಸಿ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಜಯ ದಾಖಲಿಸಿದೆ. ಶನಿವಾರ ಹಾಂಗ್ ಕಾಂಗ್ ವಿರುದ್ಧ ನಡೆದ ಪಂದ್ಯದಲ್ಲಿ  ಸ್ಕಾಟ್ಲೆಂಡ್ ತಂಡ 8 ವಿಕೆಟ್ ಗಳ ಅಂತರದಲ್ಲಿ ಜಯ ದಾಖಲಿಸಿದೆ.

ಮ್ಯಾಟ್ ಮಚಾನ್ (15ರನ್ ಮತ್ತು 2 ವಿಕೆಟ್) ಆಲ್ ರೌಂಡ್ ಆಟದ ನೆರವಿನಿಂದ ಸ್ಕಾಟ್ಲೆಂಡ್ ತಂಡ ಟಿ20 ವಿಶ್ವಕಪ್‌ನ ತನ್ನ ಕೊನೆಯ ಅರ್ಹತಾ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ಧ ಡಕ್ವರ್ತ್  ಲೂಯಿಸ್ ನಿಯಮದನ್ವಯ 8 ವಿಕೆಟ್ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಹಾಂಗ್ ಕಾಂಗ್ ತಂಡ ನಿಗದಿತ 20 ಓವರ್ ಗಳಲ್ಲಿ ಚಾಪ್ಮನ್ (40 ರನ್)ಅವರ ಸಮಯೋಚಿತ ಆಟದ  ನೆರವಿನಿಂದ 127 ರನ್ ದಾಖಲಿಸಿತು.

ಸ್ಕಾಟ್ಲೆಂಡ್ ಬ್ಯಾಟಿಂಗ್ ಆರಂಭವಾಗುತ್ತಿದ್ದಂತೆಯೇ ಮಳೆರಾಯ ಅಡ್ಡಿಪಡಿಸಿದ. ಹೀಗಾಗಿ ಸ್ಕಾಟ್ಲೆಂಡ್ ಗೆ ಡಕ್ವರ್ತ್ ನಿಯಮದನ್ವಯ ಗೆಲ್ಲಲು 10 ಓವರ್ ಗಲ್ಲಿ 76 ರನ್ ಗಳ ಗುರಿ ನೀಡಲಾಯಿತು.  ಈ ಗುರಿ ಬೆನ್ನುಹತ್ತಿದೆ ಸ್ಕಾಟ್ಲೆಂಡ್ ತಂಡ 8 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 78 ರನ್ ಗಳಿಸುವ ಮೂಲಕ ಸತತ 17 ವರ್ಷಗಳ ಬಳಿಕ ಐಸಿಸಿ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ  ಗೆಲುವು ಸಾಧಿಸಿದೆ. 1999ರ ಏಕದಿನ ವಿಶ್ವಕಪ್ ಬಳಿಕ 20 ಬಾರಿ ಐಸಿಸಿಯ ಜಾಗತಿಕ ಟೂರ್ನಿಯಲ್ಲಿ ಆಡಿದ್ದ ಸ್ಕಾಟ್ಲೆಂಡ್ ಈವರೆಗೂ ಒಂದೂ ಪಂದ್ಯ ಗೆದ್ದಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com