ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ನೆದರ್ಲೆಂಡ್‌ಗೆ ಜಯ

ಐರ್ಲೆಂಡ್ ಮತ್ತು ನೆದರ್ಲೆಂಡ್ ತಂಡಗಳು ಈಗಾಗಲೇ ಟಿ20 ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿದ್ದು, ಭಾನುವಾರ ನಡೆದ ಔಪಚಾರಿಕ..
ವಿಕೆಟ್ ಪಡೆದ ಸಂಭ್ರಮದಲ್ಲಿ ಪಿಎ ವಾನ್ ಮೀಕೆರೆನ್ (ಚಿತ್ರಕೃಪೆ: ಕ್ರಿಕ್ ಇನ್ಫೋ)
ವಿಕೆಟ್ ಪಡೆದ ಸಂಭ್ರಮದಲ್ಲಿ ಪಿಎ ವಾನ್ ಮೀಕೆರೆನ್ (ಚಿತ್ರಕೃಪೆ: ಕ್ರಿಕ್ ಇನ್ಫೋ)

ಧರ್ಮಶಾಲಾ: ಐರ್ಲೆಂಡ್ ಮತ್ತು ನೆದರ್ಲೆಂಡ್ ತಂಡಗಳು ಈಗಾಗಲೇ ಟಿ20 ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿದ್ದು, ಭಾನುವಾರ ನಡೆದ ಔಪಚಾರಿಕ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ  ನೆದರ್ಲೆಂಡ್ ತಂಡ 12 ರನ್ ಗಳ ರೋಚಕ ಜಯ ಸಾಧಿಸಿದೆ.

ಕೇವಲ ಔಪಚಾರಿಕವಾದರೂ ರೋಚಕತೆ ಸೃಷ್ಟಿಸಲು ಯಶಸ್ವಿಯಾದ ಮಳೆ ಬಾಧಿತ ಪಂದ್ಯದಲ್ಲಿ ನೆದರ್ಲೆಂಡ್ ತಂಡ, ಐರ್ಲೆಂಡ್ ವಿರುದ್ಧ 12 ರನ್‌ಗಳಿಂದ ಸಮಾಧಾನಕರ ಗೆಲುವು  ಸಾಧಿಸಿತು. ಮಳೆಯಿಂದಾಗಿ ಕೇವಲ ಆರು ಓವರ್ ಗಳಿಗೆ ಸೀಮಿತವಾದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ ತಂಡ 5 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿತು.  ಆರಂಭಿಕ ಆಟಗಾರ ಮೈಬರ್ಗ್ ಮತ್ತು ಬೋರೆನ್ 14 ರನ್ ಗಳಿಸುವ ಮೂಲಕ ನೆದರ್ಲೆಂಡ್ ತಂಡ 59 ರನ್ ಗಳ ಸವಾಲಿನ ಮೊತ್ತ ಗಳಿಸುವಲ್ಲಿ ಸಫಲರಾದರು.

ಈ ಮೊತ್ತವನ್ನು ಬೆನ್ನತ್ತಿದ ಐರ್ಲೆಂಡ್ ತಂಡ 6 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 47 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಪಂದ್ಯದ ಕೊನೆಯ ಹಂತದಲ್ಲಿ ಮೇಲುಗೈ ಸಾಧಿಸಿದ ನೆದರ್ಲೆಂಡ್  ಬೌಲರ್ ಗಳು ಕ್ರಮೇಣ ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ಕಾರಣಕರ್ತರಾದರು. ಪ್ರಮುಖವಾಗಿ ಪಿಎ ವಾನ್ ಮೀಕೆರೆನ್ (4 ವಿಕೆಟ್) ಮತ್ತು ರೆವಾನ್ ಡೆರ್ ಮೆರ್ವ್ (2 ವಿಕೆಟ್)  ಜೋಡಿ ಐರ್ಲೆಂಡ್ ತಂಡಕ್ಕೆ ಮಾರಕವಾಗಿ ಪರಿಣಿಮಿಸಿದ್ದರು. ಅಂತಿಮವಾಗಿ ಐರ್ಲೆಂಡ್ ತಂಡ 12 ರನ್ ಗಳ ಅಂತರದಿಂದ ನೆದರ್ಲೆಂಡ್ ಸೋತು ಶರಣಾಯಿತು.

ನಾಲ್ಕು ವಿಕೆಟ್ ಗಳಿಸಿ ಐರ್ಲೆಂಡ್ ಸೋಲಿಗೆ ಕಾರಣವಾದ ಪಿಎ ವಾನ್ ಮೀಕೆರೆನ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com