ಕ್ರಿಕೆಟ್ ಪಂದ್ಯ: ಕೋಲ್ಕತಾ ಭೇಟಿಗೆ ಪಾಕ್ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಅನುಮತಿ ನಿರಾಕರಣೆ

ಕೋಲ್ಕತಾಗೆ ಭೇಟಿ ನೀಡಲು ಪಾಕಿಸ್ತಾನ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಭಾರತ..
ಭಾರತ-ಪಾಕಿಸ್ತಾನ
ಭಾರತ-ಪಾಕಿಸ್ತಾನ

ನವದೆಹಲಿ: ಭಾರತ-ಪಾಕಿಸ್ತಾನ ನಡುವೆ ಟಿ 20 ಕ್ರಿಕೆಟ್ ಪಂದ್ಯ ನಡೆಯುವುದಕ್ಕೆ ಇನ್ನು ನಾಲ್ಕೇ ದಿನ ಉಳಿದಿದ್ದು, ಕೋಲ್ಕತಾಗೆ ಭೇಟಿ ನೀಡಲು ಪಾಕಿಸ್ತಾನ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಭಾರತದ ವಿದೇಶಾಂಗ ಇಲಾಖೆ ಅನುಮತಿ ನಿರಾಕರಿಸಿದೆ.

ಭದ್ರತೆಯ ಕಾರಣ ನೀಡಿರುವ ಭಾರತ ಸರ್ಕಾರ ಪಾಕಿಸ್ತಾನದ ರಾಯಭಾರಿ ಕಚೇರಿಯ ಒಟ್ಟು 7 ಅಧಿಕಾರಿಗಳಿಗೆ ಕೋಲ್ಕತಾಗೆ ಭೇಟಿ ನೀಡಲು ಅನುಮತಿ ನಿರಾಕರಿಸಿದೆ. ಪಾಕಿಸ್ತಾನದ ಐಎಸ್ಐ ಹಾಗೂ ರಕ್ಷಣಾ ಇಲಾಖೆಯ ಅಧಿಕಾರಿಗಳು ಕ್ರಿಕೆಟ್ ಪಂದ್ಯಕ್ಕಾಗಿ ಕೋಲ್ಕತಾಗೆ ಭೇಟಿ ನೀಡಲಿದ್ದರು, ಆದರೆ ಅವರ ಆಗಮನ ಭದ್ರತೆ ಮೇಲೆ ಪರಿಣಾಮ ಬೀರುವುದರಿಂದ ಅನುಮತಿ ನಿರಾಕರಿಸಲಾಗಿದೆ.

ಈ ಬಗ್ಗೆ ಭಾರತದಲ್ಲಿರುವ ಪಾಕಿಸ್ತಾನ ಹೈ ಕಮಿಷನರ್ ಪ್ರತಿಕ್ರಿಯೆ ನೀಡಿದ್ದು, ಕೋಲ್ಕತಾದಲ್ಲಿರುವ ಪಾಕಿಸ್ತಾನ ತಂಡದ ನೈತಿಕ ಸ್ಥೈರ್ಯ ಹೆಚ್ಚಿಸುವುದು ಕೋಲ್ಕತಾಗೆ ಭೇಟಿ ನೀಡಲಿದ್ದ ಪಾಕಿಸ್ತಾನ ರಾಯಭಾರಿ ಕಚೇರಿ ಅಧಿಕಾರಿಗಳ ಉದ್ದೇಶವಾಗಿತ್ತು, ಆದರೆ ಭಾರತ ಸರ್ಕಾರದ ಕ್ರಮ ದುರದೃಷ್ಟಕರ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com