
ನವದೆಹಲಿ: ನನ್ನ ಹೇಳಿಕೆಯನ್ನು ವಿವಾದ ಮಾಡುವ ಅಗತ್ಯವಿಲ್ಲ. ಭಾರತದ ಕುರಿತ ಕೆಲ ಸಕಾರಾತ್ಮಕ ಅಂಶಗಳನ್ನು ಹಂಚಿಕೊಂಡಿದ್ದೆ ಅಷ್ಟೇ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರಿದಿ ಹೇಳಿದ್ದಾರೆ.
ಇತ್ತೀಚೆಗೆ ಭಾರತ ಮತ್ತು ಭಾರತೀಯ ಅಭಿಮಾನಿಗಳ ಕುರಿತು ಸಕಾರಾತ್ಮಕವಾಗಿ ಮಾತನಾಡಿದ್ದ ಶಾಹಿದ್ ಅಫ್ರಿದಿ ಅವರ ಹೇಳಿಕೆಗೆ ಪಾಕಿಸ್ತಾನದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಮಂಗಳವಾರ ಸ್ಪಷ್ಟನೆ ನೀಡಿರುವ ಶಾಹಿದ್ ಆಫ್ರಿದಿ ಅವರು, ಕೇವಲ ಭಾರತದ ಕೆಲ ಸಕಾರಾತ್ಮಕ ವಿಚಾರಗಳನ್ನು ಹಂಚಿಕೊಂಡಿದ್ದೆ. ಇದನ್ನು ವಿವಾದ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಇನ್ನು ಇದೇ ಅಂಶದ ಕುರಿತು ಟ್ವಿಟರ್ ನಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅಫ್ರಿದಿ, ನಾನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮಾತ್ರವಲ್ಲ. ಇಡೀ ಪಾಕಿಸ್ತಾನದ ಪ್ರಜೆಗಳನ್ನು ಪ್ರತಿನಿಧಿಸುತ್ತಿದ್ದೇನೆ. ಆ ಹೇಳಿಕೆಯ ಮೂಲಕ ಇಲ್ಲಿನ ಅಭಿಮಾನಿಗಳಿಗೆ ಧನಾತ್ಮಕ ಅಂಶವನ್ನು ತಿಳಿಸಲು ಬಯಸಿದ್ದೆ. ನನ್ನ ಗುರುತು ಪಾಕಿಸ್ತಾನದಿಂದ ಬಂದಿದ್ದು. ವಾಸಿಂ ಅಕ್ರಂ, ವಕಾರ್ ಯೂನಿಸ್, ಇಂಜುಮಾಮ್ ಉಲ್ ಹಕ್ ಇವರೆಲ್ಲರಿಗೂ ಇಲ್ಲಿ ಸಾಕಷ್ಟು ಗೌರವಿದೆ. ಬೇಕಾದರೆ ನೀವು ಇಮ್ರಾನ್ ಖಾನ್‌ರನ್ನೂ ಕೇಳಬಹುದು. ಭಾರತದಲ್ಲಿ ‘ಕ್ರಿಕೆಟ್ ಧರ್ಮ’ದ ರೀತಿ ಎಂದೇ ಹೇಳುತ್ತಾರೆ ಎಂದು ಅಫ್ರಿದಿ ತಿಳಿಸಿದ್ದಾರೆ.
Advertisement