ಮಹಿಳಾ ಟಿ20 ವಿಶ್ವಕಪ್: ಐರ್ಲೆಂಡ್ ವಿರುದ್ಧ ಶ್ರೀಲಂಕಾಗೆ ಜಯ

ಮೊಹಾಲಿಯಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ನ ಭಾನುವಾರದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಶ್ರೀಲಂಕಾ ವನಿತೆಯರು 14 ರನ್..
ಶ್ರೀಲಂಕಾ ತಂಡದ ಚಮರಿ ಅಟ್ಟಪಟ್ಟು ಅವರ ಬ್ಯಾಟಿಂಗ್ ವೈಖರಿ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಶ್ರೀಲಂಕಾ ತಂಡದ ಚಮರಿ ಅಟ್ಟಪಟ್ಟು ಅವರ ಬ್ಯಾಟಿಂಗ್ ವೈಖರಿ (ಚಿತ್ರಕೃಪೆ: ಕ್ರಿಕ್ ಇನ್ಫೋ)

ಮೊಹಾಲಿ: ಮೊಹಾಲಿಯಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ನ ಭಾನುವಾರದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಶ್ರೀಲಂಕಾ ವನಿತೆಯರು 14 ರನ್ ಗಳ ರೋಚಕ ಜಯ ಸಾಧಿಸಿದ್ದಾರೆ.

ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ವನಿತೆಯರ ತಂಡ ಜಯಂಗಿಣಿ (34ರನ್), ವೀರಕ್ಕೋಡಿ (32 ರನ್) ಮತ್ತು ಕೌಶಲ್ಯ (ಅಜೇಯ 35 ರನ್)  ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 129 ರನ್ ಕಲೆಹಾಕಿತು. ಐರ್ಲೆಂಡ್ ವನಿತೆಯರ ಪರ ಮೆಟ್ ಕಲ್ಫೆ ಉತ್ತಮ ಬೌಲಿಂಗ್  ಪ್ರದರ್ಶನ ಮಾಡಿ 4 ವಿಕೆಟ್ ಕಬಳಿಸಿ ಲಂಕಾವನ್ನು ಕೇವಲ 129 ರನ್ ಗಳಿಗೆ ನಿಯಂತ್ರಿಸಿದರು. ಉಳಿದಂತೆ ಡೆಲಾನಿ ಮತ್ತು ರೀಲ್ಲಿ ತಲಾ 1 ವಿಕೆಟ್ ಪಡೆದರು.

ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಐರ್ಲೆಂಡ್ ವನಿತೆಯರು ಅದೇ ಪ್ರದರ್ಶನವನ್ನು ಬ್ಯಾಟಿಂಗ್ ನಲ್ಲಿ ಮುಂದುವರೆಸುವಲ್ಲಿ ವಿಫಲರಾದರು. ಲಂಕಾ ನೀಡಿದ 130 ರನ್ ಗಳ ಗುರಿಗೆ  ಬದಲಾಗಿ ಐರ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದು ಕೊಂಡು 115ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಶ್ರೀಲಂಕಾ ವನಿತೆಯರ ವಿರುದ್ಧ 14 ರನ್ ಗಳ  ಅಂತರದಿಂದ ರೋಚಕ ಸೋಲು ಕಂಡಿತು. ಲಂಕಾಪರ ಎಸ್ ಎಂ ಕುಮಾರಿ 3 ವಿಕೆಟ್ ಪಡೆದರೆ, ರಣವೀರಾ ಮತ್ತು ರಣಸಿಂಘೆ ತಲಾ 1 ವಿಕೆಟ್ ಪಡೆದರು.

ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಐರ್ಲೆಂಡ್ ಮೆಟಕಲ್ಫೆ ಪಂದ್ಯಶ್ರೇಷ್ಢ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com