ಸಚಿನ್ ನೋಡಿದರಲ್ಲಾ, ನನಗದಷ್ಟೇ ಸಾಕು: ವಿರಾಟ್ ಕೊಹ್ಲಿ

ಆ ಕ್ಷಣವನ್ನು ವಿವರಿಸಲು ನನ್ನಿಂದ ಸಾಧ್ಯವಿಲ್ಲ. ಅದೆಷ್ಟೋ ಕಾಲ ಸಚಿನ್‌ಭಾಯಿ ಭಾರತಕ್ಕಾಗಿ ಇದೇ ರೀತಿಯ ಗೆಲುವು ತಂದುಕೊಡುತ್ತಿದ್ದರು..
ಸಚಿನ್  ತೆಂಡೂಲ್ಕರ್ ಗೆ ನಮಿಸುತ್ತಿರುವ ವಿರಾಟ್ ಕೊಹ್ಲಿ
ಸಚಿನ್ ತೆಂಡೂಲ್ಕರ್ ಗೆ ನಮಿಸುತ್ತಿರುವ ವಿರಾಟ್ ಕೊಹ್ಲಿ
Updated on
ಕೊಲ್ಕತ್ತಾ: ನಾನು ಅತಿಯಾಗಿ ಇಷ್ಟಪಡುವ, ಗೌರವಿಸುವ ಸಚಿನ್ ತೆಂಡೂಲ್ಕರ್ ಅವರ ಮುಂದೆ ಭಾರತವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಿದ್ದೇ ನನ್ನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣವಾಗಿತ್ತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಶನಿವಾರ ಕೊಲ್ಕತ್ತಾದ ಈಡೆನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ವೈರಿ ಪಾಕಿಸ್ತಾನವನ್ನು ಟೀಂ ಇಂಡಿಯಾ ಪರಾಭವಗೊಳಿಸಿತ್ತು. ಪ್ರಸ್ತುತ ಪಂದ್ಯದಲ್ಲಿ 37 ಎಸೆತಗಳಲ್ಲಿ 55 ರನ್ ಗಳಿಸಿದ ಕೊಹ್ಲಿ ಭಾರತದ ಗೆಲುವಿನ ರೂವಾರಿಯಾಗಿದ್ದರು. ಪಾಕ್ ವಿರುದ್ಧ  ಬಾರಿಸಿದ ಅರ್ಧ ಶತಕವನ್ನು ಕ್ರಿಕೆಟ್ ದೇವರಿಗೆ ಸಮರ್ಪಿಸಿ, ಕ್ರಿಕೆಟ್ ಗ್ರೌಂಡ್‌ನಲ್ಲಿ ನಿಂತು ಶಿರಬಾಗಿ ನಮಿಸಿದ್ದರು. ಅತ್ತ ಸ್ಟೇಡಿಯಂನಲ್ಲಿದ್ದ ಸಚಿನ್, ವಿರಾಟ್‌ಗೆ ಥಮ್ಸ್ ಅಪ್ ತೋರಿಸಿ ಸಂಭ್ರಮಿಸಿದ್ದರು. ಈಡೆನ್‌ನಲ್ಲಿ ಅಂಥಾ ಒಂದು ಅದ್ಭುತ ಕ್ಷಣಕ್ಕೆ ಕ್ರಿಕೆಟ್ ಪ್ರೇಮಿಗಳು ಸಾಕ್ಷಿಯಾದರು. 
ಈ ಬಗ್ಗೆ ವಿರಾಟ್ ಹೇಳಿದ್ದೇನು ಗೊತ್ತಾ?
"ಆ ಕ್ಷಣವನ್ನು ವಿವರಿಸಲು ನನ್ನಿಂದ ಸಾಧ್ಯವಿಲ್ಲ. ಅದೆಷ್ಟೋ ಕಾಲ ಸಚಿನ್‌ಭಾಯಿ ಭಾರತಕ್ಕಾಗಿ ಇದೇ ರೀತಿಯ ಗೆಲುವು ತಂದುಕೊಡುತ್ತಿದ್ದರು. ಅಭಿಮಾನಿಗಳು ಅವರ ಹೆಸರನ್ನು ಕೂಗುತ್ತಿದ್ದದ್ದು ನಾನು ಕೇಳಿದ್ದೇನೆ. ಈಗ ಅವರ ಮುಂದೆ ಅದೇ ರೀತಿಯ ಅವಕಾಶ ನನಗೆ ಸಿಕ್ಕಿತ್ತು. ಅವರು ನಮ್ಮ ಗೆಲವುವನ್ನು ಕ್ರಿಕೆಟ್ ಸ್ಟ್ಯಾಂಡ್‌ನಲ್ಲಿ ನಿಂತು ಸಂಭ್ರಮಿಸಿದರು. ಅವರ ಆಟವನ್ನು ನೋಡುತ್ತಾ ಕಲಿತು ನಾನು ಕ್ರಿಕೆಟಿಗನಾಗಿದ್ದು. ಇದೀಗ ಅವರಿಗೆ ನನ್ನ ಆಟ ಖುಷಿ ನೀಡುವುದಾದರೆ ಇದಕ್ಕಿಂತ ಹೆಚ್ಚು ನನಗೇನು ಬೇಕು? "
ಅದೇ ವೇಳೆ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ನನ್ನ ಪ್ರದರ್ಶನ ನಿರಾಶಾದಾಯಕವಾಗಿತ್ತು ಎಂಬುದನ್ನು ಕೊಹ್ಲಿ ಒಪ್ಪಿಕೊಂಡಿದ್ದಾರೆ. ಕೇವಲ 25 ರನ್‌ಗಳನ್ನಷ್ಟೇ ಗಳಿಸಲು ನನ್ನಿಂದ ಸಾಧ್ಯವಾಯಿತು. ನನ್ನ ತಂಡವನ್ನು ಗೆಲ್ಲಿಸಬೇಕೆಂದು ಬಯಸಿದ್ದೆ, ಆದರೆ ಕ್ರಿಕೆಟ್ ಎಂದರೆ ಹೀಗೆಯೇ. ನಾನು  40-45 ರನ್ ಗಳಿಸಿದ್ದರೆ ಮೊದಲ ಆಟದಲ್ಲಿ ನಾವು ಗೆಲ್ಲುತ್ತಿದ್ದೆವು. ಅದು ಸಾಧ್ಯವಾಗಿಲ್ಲ.  ಆ ರಾತ್ರಿ ನಾನು ಬೇಸರದಲ್ಲಿದ್ದೆ. ಮುಂದಿನ ಆಟದಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ನಾನು ಚಿಂತಿಸಿದೆ. ಹೇಗೆ ಒಳ್ಳೆ ಶಾಟ್‌ಗಳನ್ನಾಡಬಹುದು ಎಂದು ಕಾರ್ಯತಂತ್ರ ರೂಪಿಸಿದೆ.
ಸೋಲನ್ನು ಹಳಿಯುವುದರಲ್ಲಿ ಪ್ರಯೋಜನವಿಲ್ಲ, ಆ ಸೋಲಿನಿಂದ ಕಲಿತ ಪಾಠಗಳನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕು. ನಾವೀಗ ಆಡುವ ಪಂದ್ಯಗಳಲ್ಲಿ ನಾನು ಯಾವ ರೀತಿ ಸುಧಾರಣೆಯನ್ನು ತರಬೇಕು ಎಂದು ಪ್ರತಿಯೊಬ್ಬರು ಚಿಂತಿಸಿದರೆ ಟೀಂನಲ್ಲಿ ಅದರ ಪರಿಣಾಮವನ್ನು ಕಾಣಬಹುದು. ಪಾಕಿಸ್ತಾನದ ವಿರುದ್ಧ ಆಡುವಾಗ ನನ್ನ ಹೃದಯ ಬಡಿತ ಕಡಿಮೆಯಾಗಿತ್ತು. ಆದರೆ ಮೊದಲ ಮೂರು ವಿಕೆಟ್ ಕಳೆದುಕೊಂಡಾಗ ಅದು ಸ್ವಾಭಾವಿಕವಾಗಿ ಹೆಚ್ಚಾಗಬೇಕಿತ್ತು, ಆದರೆ ಅದು ಹಾಗಾಗಲಿಲ್ಲ. 
ಧನ್ಯವಾದಗಳು..ನನಗೆ ಅದನ್ನು ಸಾಧ್ಯವಾಗಿಸಿದ ಆ ಭಗವಂತನಿಗೆ...

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com