ಮಹಿಳಾ ಟಿ20 ವಿಶ್ವಕಪ್: ಲಂಕಾ ವಿರುದ್ಧ ಆಸಿಸ್ ಗೆ ಭರ್ಜರಿ ಜಯ

ಸ್ಪೋಟಕ ಬ್ಯಾಟಿ೦ಗ್ ನಿಂದ ನೆರವಿನಿ೦ದ ಹಾಲಿ ಚಾ೦ಪಿಯನ್ ಆಸ್ಟ್ರೇಲಿಯಾ ವನಿತೆಯರ ತ೦ಡ ಶ್ರೀಲ೦ಕಾ ವಿರುದ್ಧ 9 ವಿಕೆಟ್‍ಗಳ ಭಜ೯ರಿ ಜಯ ದಾಖಲಿಸಿತು...
56 ರನ್ ಗಳಿಸಿದ ಲ್ಯಾನಿಂಗ್ ಬ್ಯಾಟಿಂಗ್ ವೈಖರಿ (ಚಿತ್ರಕೃಪೆ: ಕ್ರಿಕ್ ಇನ್ಫೋ)
56 ರನ್ ಗಳಿಸಿದ ಲ್ಯಾನಿಂಗ್ ಬ್ಯಾಟಿಂಗ್ ವೈಖರಿ (ಚಿತ್ರಕೃಪೆ: ಕ್ರಿಕ್ ಇನ್ಫೋ)

ನವದೆಹಲಿ: ಸ್ಪೋಟಕ ಬ್ಯಾಟಿ೦ಗ್ ನಿಂದ ನೆರವಿನಿ೦ದ ಹಾಲಿ ಚಾ೦ಪಿಯನ್ ಆಸ್ಟ್ರೇಲಿಯಾ ವನಿತೆಯರ ತ೦ಡ ಶ್ರೀಲ೦ಕಾ ವಿರುದ್ಧ 9 ವಿಕೆಟ್‍ಗಳ ಭಜ೯ರಿ ಜಯ ದಾಖಲಿಸಿತು.

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ವನಿತೆಯರ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 123 ರನ್  ಗಳಿಸಿತು. ಪ್ರಮುಖವಾಗಿ ಆಸ್ಟ್ರೇಲಿಯಾದ ಬಳಿಷ್ಠ ಬೌಲಿಂಗ್ ದಾಳಿಗೆ ನಲುಗಿದ ಲಂಕಾದ ಐವರು ಆಟಗಾರ್ತಿಯರು ಎರಡಂಕಿ ಕೂಡ ದಾಟದೇ ಇರುವುದು ಲಂಕಾದ ಅಲ್ಪಮೊತ್ತಕ್ಕೆ  ಕಾರಣವಾಯಿತು.

ಆರಂಭಿಕ ಆಟಗಾರ್ತಿ ಜಯಂಗಿಣಿ (38 ರನ್) ಮತ್ತು ಮಧ್ಯಮ ಕ್ರಮಾಂಕದ ಆಟಗಾರ್ತಿ ಸುರಂಗಿಕ (38ರನ್) ಅವರನ್ನು ಹೊರತು ಪಡಿಸಿದರೆ ಲಂಕಾದ ಇನ್ನಾವುದೇ ಆಟಗಾರ್ತಿಯರು ಕ್ರೀಸ್  ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲಿಲ್ಲ. ಅಂತಿಮವಾಗಿ ಶ್ರೀಲಂಕಾ ತಂಡ 8 ವಿಕೆಟ್ ನಷ್ಟಕ್ಕೆ 123 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆಸಿಸ್ ಪರ ಕ್ರಿಸ್ಟನ್ ಬೀಮ್ಸ್ ಮತ್ತು ಸ್ಕುಟ್  ತಲಾ ವಿಕೆಟ್ ಪಡೆದರೆ, ಆಸ್ ಬರ್ನ್ ಮತ್ತು ಜೋನಾಸೆನ್ ತಲಾ 1 ವಿಕೆಟ್ ಗಳಿಸಿದರು.

ನಂತರ ಲಂಕಾ ನೀಡಿದ 124 ರನ್ ಗಳ ಅಲ್ಪಮೊತ್ತವನ್ನು ಬೆನ್ನುಹತ್ತಿದ ಆಸಿಸ್ ಪಡೆ ಕೇವಲ 1 ವಿಕೆಟ್ ಕಳೆದು ಇನ್ನೂ 14 ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿ ಸಂಭ್ರಮಿಸಿತು.  ಆರಂಭಿಕ ಆಟಗಾರ್ತಿ ವಿಲ್ಲಾನಿ 53 ರನ್ ಮತ್ತು ಲ್ಯಾನಿಂಗ್ 56 ರನ್ ಗಳಿಸಿ ಆಸ್ಟ್ರೇಲಿಯಾದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. 53 ರನ್ ಗಳಿಸಿ ವಿಲ್ಲಾನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ  ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com