ಸೆಮೀಸ್‍ಗೆ ಕಾಲಿಟ್ಟ ಆ೦ಗ್ಲ ಮಹಿಳೆಯರು

ಕೊನೇ ಎಸೆತದಲ್ಲಿ ರೋಚಕ 1 ವಿಕೆಟ್ ಗೆಲುವು ದಾಖಲಿಸಿದ ಇ೦ಗ್ಲೆ೦ಡ್ ತ೦ಡ ಮಹಿಳೆಯರ ಟಿ20 ವಿಶ್ವಕಪ್‍ನಲ್ಲಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊ೦ಡಿದೆ..
ಗೆಲುವಿನ ಸಂಭ್ರಮದಲ್ಲಿ ಇಂಗ್ಲೆಂಡ್ ಪಡೆ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಗೆಲುವಿನ ಸಂಭ್ರಮದಲ್ಲಿ ಇಂಗ್ಲೆಂಡ್ ಪಡೆ (ಚಿತ್ರಕೃಪೆ: ಕ್ರಿಕ್ ಇನ್ಫೋ)

ಧರ್ಮಶಾಲಾ: ಕೊನೇ ಎಸೆತದಲ್ಲಿ ರೋಚಕ 1 ವಿಕೆಟ್ ಗೆಲುವು ದಾಖಲಿಸಿದ ಇ೦ಗ್ಲೆ೦ಡ್ ತ೦ಡ ಮಹಿಳೆಯರ ಟಿ20 ವಿಶ್ವಕಪ್‍ನಲ್ಲಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊ೦ಡಿದೆ.

ಗುರುವಾರ ಧರ್ಮಶಾಲದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 1 ವಿಕೆಟ್ ಅಂತರದ ರೋಚಕ ಜಯ ಸಾಧಿಸುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಟಾಸ್ ಗೆದ್ದು  ಮೊದಲು ಬ್ಯಾಟಿ೦ಗ್ ಮಾಡಿದ ವೆಸ್ಟ್ ಇ೦ಡೀಸ್ ವನಿತೆಯರು ಎಸ್ ಆರ್ ಟೇಲರ್ (35ರನ್) ಮತ್ತು ಕ್ವಿನ್ ಟೈನ್ (29ರನ್) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್ ಗೆ 108  ರನ್ ಪೇರಿಸಿತು.

ವೆಸ್ಟ್ ಇಂಡೀಸ್ ವಿರುದ್ಧ ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಇಂಗ್ಲೆಂಡ್ ವನಿತೆಯರು ವಿಂಡೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಇಂಗ್ಲೆಂಡ್ ಪರ ಬ್ರಂಟ್, ಶ್ರುಬ್ಸೋಲ್, ಗುನ್ ಮತ್ತು  ಕ್ವೀವರ್ ತಲಾ 1 ವಿಕೆಟ್ ಪಡೆದರು. ಇನ್ನು ವೆಸ್ಟ್ ಇಂಡೀಸ್ ನೀಡಿದ 109 ರನ್ ಗಳ ಗುರಿ ಬೆನ್ನು ಹತ್ತಿದ ಇಂಗ್ಲೆಂಡ್ ವನಿತೆಯರು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 109 ರನ್ ಪೇರಿಸಿ,  1 ವಿಕೆಟ್ ಅಂತರದ ರೋಚಕ ಜಯ ಸಾಧಿಸಿದರು.

ವಿಂಡೀಸ್ ಪರ ಉತ್ತಮವಾಗಿ ಬೌಲ್ ಮಾಡಿದ ಫ್ಲೆಚರ್ ಮತ್ತು ಕ್ವಿನ್ಟೈನ್ ತಲಾ ಮೂರು ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ವನಿತೆಯರ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದರಾದರೂ  ಗೆಲುವು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ಪರ 31 ರನ್ ಗಳಿಸಿ ಜಯಕ್ಕೆ ಕಾರಣರಾದ ಬ್ಯೂಮಾಂಟ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com