ಟಿ20 ಮಹಿಳಾ ವಿಶ್ವಕಪ್: ಬಾಂಗ್ಲಾ ವಿರುದ್ಧ ಪಾಕಿಸ್ತಾನಕ್ಕೆ ಭರ್ಜರಿ ಜಯ

ಬಾಂಗ್ಲಾದೇಶ ವನಿತೆಯರು ನೀಡಿದ 113 ರನ್ ಗಳ ಅಲ್ಪ ಮೊತ್ತವನ್ನು ಕೇವಲ 1 ವಿಕೆಟ್ ಕಳೆದುಕೊಂಡು ಪಾಕಿಸ್ತಾನ ಮಹಿಳಾ..
ಪಾಕಿಸ್ತಾನದ ಗೆಲುವಿಗೆ ಕಾರಣರಾದ ಸೈದ್ರಾ ಅಮೀನ್ ಮತ್ತು ಬಿಸ್ಮಾಹ್ ಮಾರೂಫ್ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಪಾಕಿಸ್ತಾನದ ಗೆಲುವಿಗೆ ಕಾರಣರಾದ ಸೈದ್ರಾ ಅಮೀನ್ ಮತ್ತು ಬಿಸ್ಮಾಹ್ ಮಾರೂಫ್ (ಚಿತ್ರಕೃಪೆ: ಕ್ರಿಕ್ ಇನ್ಫೋ)

ನವದೆಹಲಿ: ಬಾಂಗ್ಲಾದೇಶ ವನಿತೆಯರು ನೀಡಿದ 113 ರನ್ ಗಳ ಅಲ್ಪ ಮೊತ್ತವನ್ನು ಕೇವಲ 1 ವಿಕೆಟ್ ಕಳೆದುಕೊಂಡು ಪಾಕಿಸ್ತಾನ ಮಹಿಳಾ ತಂಡ ಯಶಸ್ವಿಯಾಗಿ ಗುರಿ ಮುಟ್ಟಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ವನಿತೆಯರ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 113 ರನ್ ಗಳನ್ನು ಮಾತ್ರ ಗಳಿಸಿತು. ಪಾಕಿಸ್ತಾನದ ಆನಮ್  ಅಮೀನ್ ಮತ್ತು ಇಕ್ಬಾಲ್ ತಲಾ 2 ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾದೇಶದ ಪತನಕ್ಕೆ ಕಾರಣರಾದರು. ಪ್ರಮುಖವಾಗಿ ಉತ್ತಮ ಕ್ಷೇತ್ರ ರಕ್ಷಣೆ ಮಾಡಿದ ಪಾಕಿಸ್ತಾನದ ಮಹಿಳೆಯರು  ಬಾಂಗ್ಲಾದ 4 ಆಟಗಾರ್ತಿಯರನ್ನು ರನ್ ಔಟ್ ಮಾಡಿದರು. ಬಾಂಗ್ಲಾದ ಫರ್ಖಾನ್ ಹಾಕ್ (36 ರನ್)ಅವರನ್ನು ಹೊರತು ಪಡಿಸಿದರೆ ಬಾಂಗ್ಲಾದ ಇನ್ನಾವುದೇ ಆಟಗಾರ್ತಿಯರು ಕೂಡ ಉತ್ತಮ  ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ ಬಾಂಗ್ಲಾದೇಶ ತಂಡ 9 ವಿಕೆಟ್ ನಷ್ಟಕ್ಕೆ 113 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಇನ್ನು ಬಾಂಗ್ಲಾದೇಶ ನೀಡಿದ 114ರನ್ ಗಳ ಗುರಿಯನ್ನು ಬೆನ್ನುಹತ್ತಿದ ಪಾಕಿಸ್ತಾನ ಕೇವಲ 1 ವಿಕೆಟ್ ಕಳೆದುಕೊಂಡು ಇನ್ನೂ 21 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು.  ಪ್ರಮುಖವಾಗಿ ಪಾಕಿಸ್ತಾನದ ಆರಂಭಿಕ ಆಟಗಾರ್ತಿ ಸೈದ್ರಾ ಅಮೀನ್ (53ರನ್) ಮತ್ತು ಬಿಸ್ಮಾಹ್ ಮಾರೂಫ್ (43ರನ್) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಪಾಕಿಸ್ತಾನದ ಮಹಿಳಾ  ತಂಡ ಬಾಂಗ್ಲಾದೇಶದ ವಿರುದ್ಧ ಅಮೋಘ ಜಯ ದಾಖಲಿಸಿತು. ಆಕರ್ಷಕ ಅರ್ಧ ಶತಕ ಗಳಿಸಿದ ಪಾಕಿಸ್ತಾನದ ಸೈದ್ರಾ ಅಮೀನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ಗೆಲುವಿನ ಮೂಲಕ ಪಾಕಿಸ್ತಾನ ತನ್ನ ಅಂಕಗಳನ್ನು 4ಕ್ಕೆ ಏರಿಸಿಕೊಳ್ಳುವ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಆ ಮೂಲಕ ಸೆಮಿಫೈನಲ್ ಗೇರುವ ತನ್ನ ಆಸೆಯನ್ನು ಇನ್ನೂ  ಜೀವಂತವಾಗಿಟ್ಟುಕೊಂಡಿದೆ. ಪಾಕಿಸ್ತಾನದೊಂದಿಗೆ ವೆಸ್ಟ್ ಇಂಡೀಸ್ ಮಹಿಳೆಯರೂ ಕೂಡ ಸೆಮೀಸ್ ರೇಸ್ ನಲ್ಲಿದ್ದು, ನೆಟ್ ರನ್ ರೇಟ್ ಲೆಕ್ಕಾಚಾರದಲ್ಲಿ ಪಾಕಿಸ್ತಾನಕ್ಕಿಂತ ಮುಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com