ಸೋಲಿನ ತೇಪೆಗೆ "ಕಾಶ್ಮೀರ" ಮುಂದಿಟ್ಟ ಅಫ್ರಿದಿ

ಟಿ20 ವಿಶ್ವಕಪ್ ಸರಣಿ ಸೋಲಿನಿಂದಾಗಿ ತೀವ್ರ ಮುಜುಗರಕ್ಕೊಳಗಾಗಿರುವ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ತಮ್ಮ ಸೋಲಿಗೆ...
ಶಾಹಿದ್ ಅಫ್ರಿದಿ ಮತ್ತು ವಸೀಂ ಅಕ್ರಂ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಶಾಹಿದ್ ಅಫ್ರಿದಿ ಮತ್ತು ವಸೀಂ ಅಕ್ರಂ (ಚಿತ್ರಕೃಪೆ: ಕ್ರಿಕ್ ಇನ್ಫೋ)

ಮೊಹಾಲಿ: ಟಿ20 ವಿಶ್ವಕಪ್ ಸರಣಿ ಸೋಲಿನಿಂದಾಗಿ ತೀವ್ರ ಮುಜುಗರಕ್ಕೊಳಗಾಗಿರುವ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ತಮ್ಮ ಸೋಲಿಗೆ ತೇಪೆ ಹಚ್ಚಲು ಕಾಶ್ಮೀರ ವಿವಾದವನ್ನು  ಮತ್ತೆ ಕೆಣಕಿದ್ದಾರೆ.

ನಿನ್ನೆ ಮೊಹಾಲಿಯಲ್ಲಿ ನಡೆದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡದ ಪಂದ್ಯದ ಬಳಿಕ ಮಾತನಾಡಿದ್ದ ಶಾಹಿದ್ ಅಫ್ರಿದಿ ಮತ್ತೆ ಕಾಶ್ಮೀರ ವಿವಾದವನ್ನು ಕೆಣಕಿದ್ದಾರೆ. ಈ ಹಿಂದಿನ ಪಂದ್ಯದ  ವೇಳೆಯಲ್ಲಿಯೂ ಕಾಶ್ಮೀರದ ಹೆಸರು ತೆಗೆಯುವ ಮೂಲಕ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಆಫ್ರಿದಿ ಎಚ್ಚರಿಕೆ ಕೂಡ ಪಡೆದಿದ್ದರು. ಇದೀಗ ಮತ್ತೆ ಕಾಶ್ಮೀರ ಹೆಸರಿನ ಪ್ರಸ್ತಾಪದ ಮೂಲಕ  ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಿನ್ನೆ ಆಸ್ಟ್ರೇಲಿಯಾ ತಂಡದ ವಿರುದ್ಧದ ಪಂದ್ಯದ ಸೋಲಿನ ಬಳಿಕ ಮಾತನಾಡಿದ್ದ ಆಫ್ರಿದಿ ‘ಕೋಲ್ಕತ ಜನತೆ ಜತೆಗೆ ಪಾಕಿಸ್ತಾನ ಮತ್ತು ಕಾಶ್ಮೀರದಿಂದಲೂ ಆಗಮಿಸಿ ಬೆಂಬಲಿಸಿದವರಿಗೆ  ಧನ್ಯವಾದಗಳು’ ಎಂದು ಹೇಳುವ ಮೂಲಕ ಸೋಲಿನಿಂದ ತಮ್ಮ ಮುಖ ಉಳಿಸಿಕೊಳ್ಳಲು, ‘ಕಾಶ್ಮೀರ’ ವಿಷಯವೆತ್ತಿ ಸ್ವದೇಶ ಬಾಂಧವರನ್ನು ಸಾಂತ್ವನಗೊಳಿಸುವ ಪ್ರಯತ್ನ ಮಾಡಿದ್ದಾರೆ. ಈ  ಹಿಂದೆ ಕಿವೀಸ್ ವಿರುದ್ಧದ ಪಂದ್ಯದ ಬಳಿಕ ಇದೇ ರೀತಿಯ ಹೇಳಿಕೆ ನೀಡಿದ್ದ ಅಫ್ರಿದಿಗೆ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಇಂತಹ ರಾಜಕೀಯ ಹೇಳಿಕೆ ನೀಡದಂತೆ ಎಚ್ಚರಿಕೆ  ನೀಡಿದ್ದರೆ, ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಕೂಡಾ ಖಾರವಾಗಿ ಪ್ರತಿಕ್ರಿಯಿಸಿದ್ದರು. ಇದೀಗ ಮತ್ತೆ ಅಫ್ರಿದಿ ಕಾಶ್ಮೀರ ವಿವಾದವನ್ನು ಕೆಣಕುವ ಮೂಲಕ ವಿವಾದಕ್ಕೀಡಾಗಿದ್ದಾರೆ.

ಈ ನಡುವೆ ನಿವೃತ್ತಿ ನಿರ್ಧಾರದಲ್ಲೂ ಗೊಂದಲದ ಹೇಳಿಕೆ ನೀಡಿದ್ದು, ‘ಆಟಗಾರನಾಗಿ ಫಿಟ್ ಆಗಿದ್ದರೂ, ನಾಯಕನಾಗಿ ನಾನು ಅನ್‌ಫಿಟ್ ಎನ್ನುವ ಭಾವನೆ ಕಾಡುತ್ತಿದೆ. ತವರಿಗೆ ಮರಳಿದ 4-5  ದಿನಗಳೊಳಗೆ ನನ್ನ ನಿವೃತ್ತಿಯ ನಿರ್ಧಾರ ಪ್ರಕಟಿಸುತ್ತೇನೆ’ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com