
ಲಾಹೋರ್: ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ನಲ್ಲಿ ಹೀನಾಯ ಸೋಲು ಅನುಭವಿಸಿ ಪಂದ್ಯಾವಳಿಯಿಂದ ಹೊರಬಿದ್ದ ಪಾಕಿಸ್ತಾನ ತಂಡಕ ತವರಿಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಧಿಕ್ಕಾರ ಧಿಕ್ಕಾರ ಎಂದು ಕೂಗಿದ್ದಾರೆ.
ಲಾಹೋರ್ ನ ಅಲ್ಲಮಾ ಇಕ್ಬಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆ ಮೂಲಕ ಪಾಕ್ ಆಟಗಾರರು ಬಂದಿಳಿದರು. ಬಿಗಿ ಭದ್ರತೆಯ ನಡುವೆಯೂ ಪಾಕ್ ಅಭಿಮಾನಿಗಳು ಶೇಮ್ ಶೇಮ್ ಎಂದು ಕೂಗಿದ್ದಾರೆ. ಇದರಿಂದ ಪಾಕ್ ಆಟಗಾರರು ತಲೆ ತಗ್ಗಿಸಿಕೊಂಡು ಅಲ್ಲಿಂದ ಮನೆಯತ್ತ ಹೊರಟರು.
ಈ ವೇಳೆ ಪಾಕಿಸ್ತಾನ ನಾಯಕ ಶಾಹೀದ್ ಅಫ್ರಿದಿ ತವರಿಗೆ ಬರದೆ ದುಬೈಗೆ ತೆರಳಿದ್ದು, ಕೆಲ ದಿನ ಅಲ್ಲೇ ಕಳೆಯಲು ನಿರ್ಧರಿಸಿದ್ದಾರೆ.
ಏಷ್ಯಾಕಪ್ ಟಿ20 ಹಾಗೂ ವಿಶ್ವಕಪ್ ಟಿ20 ಟೂರ್ನಿಯಲ್ಲಿ ಹೀನಾಯವಾಗಿ ಸೋತಿದ್ದ ಪಾಕ್ ಎರಡೂ ಮಹತ್ವದ ಕೂಟದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಸೋಲು ಕಂಡಿದ್ದು, ಪಾಕ್ ಅಭಿಮಾನಿಗಳು ಕೆರಳಲು ಕಾರಣವಾಗಿತ್ತು.
Advertisement