36 ವರ್ಷದ ಗೇಲ್ ಅಮಿತಾಭ್ ಬಚ್ಚನ್ ಅವರನ್ನು ಭೇಟಿ ಮಾಡಿದ ಚಿತ್ರವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದು, ತನ್ನನ್ನು ಊಟಕ್ಕೆ ಆಹ್ವಾನಿಸಿ, ಒಂದು ಪುಸ್ತಕವನ್ನು ಉಡುಗರೆಯಾಗಿ ನೀಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಅಲ್ಲದೆ ನೀನು 100ರನ್ ಬಾರಿಸು, ಆದರೆ ಭಾರತ ಗೆಲ್ಲಲಿ ಎಂದು ಬಾಸ್ ಬಯಸಿರುವುದಾಗಿ ಗೇಲ್ ತಮಾಷೆಯಾಗಿ ಬರೆದುಕೊಂಡಿದ್ದಾರೆ. ಬಳಿಕ ಇದೆ ಚಿತ್ರವನ್ನು ಬಿಗ್ ಬಿ ತಮ್ಮ ಟ್ವಿಟರ್ ನಲ್ಲಿ ಷೇರ್ ಮಾಡಿದ್ದಾರೆ.