ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್ ಗೆ ಲಗ್ಗೆ ಇಟ್ಟ ಆಸಿಸ್ ಮಹಿಳೆಯರು

ಸತತ 4ನೇ ಬಾರಿ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿರುವ ಆಸಿಸ್ ವನಿತೆಯರು, ಮಹಿಳಾ ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ 5 ರನ್...
ಗೆಲುವಿನ ಸಂಭ್ರಮದಲ್ಲಿ ಆಸ್ಟ್ರೇಲಿಯಾ ವನಿತೆಯರು (ಚಿತ್ರಕೃಪೆ: ಕ್ರಿಕ್ ಇನ್ಫೋ)
ಗೆಲುವಿನ ಸಂಭ್ರಮದಲ್ಲಿ ಆಸ್ಟ್ರೇಲಿಯಾ ವನಿತೆಯರು (ಚಿತ್ರಕೃಪೆ: ಕ್ರಿಕ್ ಇನ್ಫೋ)

ನವದೆಹಲಿ: ಸತತ 4ನೇ ಬಾರಿ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿರುವ ಆಸ್ಟ್ರೇಲಿಯಾ ವನಿತೆಯರು, ಮಹಿಳಾ ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ 5 ರನ್ ಗಳ ರೋಚಕ ಜಯ  ದಾಖಲಿಸುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ಕೇಲಿಯಾ ತಂಡ ಲ್ಯಾನ್ನಿಂಗ್ (55 ರನ್)  ಅವರ ಸಮಯೋಚಿತ ಬ್ಯಾಟಿಂಗ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 132 ರನ್ ಗಳ ಸವಾಲಿನ ಮೊತ್ತವನ್ನು ಪೇರಿಸಿತು. ಇಂಗ್ಲೆಂಡ್ ಪರ ಸ್ಕೀವರ್ 2 ವಿಕೆಟ್ ಪಡೆದರೆ, ಮಾರ್ಶ್ ಮತ್ತು  ಗನ್ ತಲಾ 1 ವಿಕೆಟ್ ಗಳಿಸಿದರು.

ಆಸ್ಟ್ರೇಲಿಯಾ ನೀಡಿದ 138 ರನ್ ಗಳ ಗುರಿಯನ್ನು ಬೆನ್ನುಹತ್ತಿದ ಇಂಗ್ಲೆಂಡ್ ವನಿತೆಯರಿಗೆ ಉತ್ತಮ ಆರಂಭ ದೊರೆಯಿತಾದರೂ ಮಧ್ಯಮ ಮತ್ತು ಕೆಳ ಕ್ರಮಾಂಕದ ಕುಸಿತದಿಂದಾಗಿ ಇಂಗ್ಲೆಂಡ್  ಪಂದ್ಯವನ್ನು ಕಳೆದುಕೊಳ್ಳುವಂತಾಯಿತು. ಆರಂಭಿಕ ಆಟಗಾರರಾದ ಎಡ್ವರ್ಡ್ಸ್ (31 ರನ್) ಮತ್ತು ಬ್ಯೂಮೊಂಟ್ (32 ರನ್) ಮೊದಲ ವಿಕೆಟ್ ಗೆ 67 ರನ್ ಗಳ ಬೃಹತ್ ಜೊತೆಯಾಟ ಆಡಿದರು.  ಆದರೆ ಆ ಬಳಿಕ ಕ್ರೀಸ್ ಗೆ ಬಂದ ಟೇಲರ್ ಅವರನ್ನು ಹೊರತು ಪಡಿಸಿದರೆ ಇಂಗ್ಲೆಂಡ್ ನ ಯಾವೋಬ್ಬ ಆಟಗಾರ್ತಿಯೂ ಎರಡಂಕಿ ಮೊತ್ತವನ್ನೂ ಕೂಡ ದಾಟದೇ ಇಂಗ್ಲೆಂಡ್ ಸೋಲಿಗೆ  ಕಾರಣರಾದರು.

ಆ ಮೂಲಕ ಇಂಗ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆಕದುಕೊಂಡು 127 ರನ್ ಗಳನ್ನು ಗಳಿಸಲು ಮಾತ್ರ ಶಕ್ತವಾಯಿತು. 55 ರನ್ ಗಳಿಸಿ ಆಸ್ಟ್ರೇಲಿಯಾದ ಸವಾಲಿನ ಮೊತ್ತಕ್ಕೆ  ಕಾರಣರಾದ ಲ್ಯಾನ್ನಿಂಗ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಪಂದ್ಯದ ಗೆಲುವಿನೊಂದಿಗೆ ಆಸ್ಟ್ರೇಲಿಯಾ ವನಿತೆಯರು ಫೈನಲ್ ಗೆ ಲಗ್ಗೆ ಇಟ್ಟಿದ್ದು, ಇಂದು 2ನೇ ಸೆಮಿಫೈನಲ್ ಪಂದ್ಯ  ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com