
ವೆಲ್ಲಿಂಗ್ಟನ್: ಏಕದಿನ ವಿಶ್ವಕಪ್‍ನಲ್ಲಿ ಕಿವೀಸ್ ತ೦ಡವನ್ನು ಮಣಿಸಿ ಫೈನಲ್ ಗೇರಿದ ಇಂಗ್ಲೆಂಡ್ ತಂಡವನ್ನು ನ್ಯೂಜಿಲೆಂಡ್ ಮಾಧ್ಯಮಗಳು ಟೀಕಿಸಿದ್ದು, ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ತಂಡದ ತಂತ್ರಗಾರಿಕೆಯನ್ನು ಅನುಸರಿಸಿ ಗೆಲುವು ಸಾಧಿಸಿದೆ ಎಂದು ಟೀಕಿಸಿವೆ.
ಇಂಗ್ಲೆಂಡ್ ಕ್ರಿಕೆಟ್ ತಂಡ ನ್ಯೂಜಿಲೆಂಡ್ ತಂಡ ಆಡಿದ ಮಾದರಿಯಲ್ಲೇ ಮೂಲಕ ಟಿ20 ವಿಶ್ವಕಪ್ ಫೈನಲಿಗೇರಿದೆ ಎ೦ದಿರುವ ಕಿವೀಸ್ ಮಾಧ್ಯಮಗಳು, ಅದನ್ನು ಎದುರಿಸಿ ನಿಲ್ಲುವಲ್ಲಿ ಕೇನ್ ವಿಲಿಯಮ್ಸನ್ ಪಡೆ ವಿಫಲವಾಯಿತು ಎ೦ದು ಟೀಕಿಸಿವೆ. ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನದ೦ಥ ಬಲಿಷ್ಠ ತ೦ಡಗಳೆದುರು ಗೆದ್ದಿದ್ದರೂ ಈ ಒ೦ದು ಸೋಲು ಕಿವೀಸ್ ತ೦ಡವನ್ನು ವಿಶ್ವಕಪ್‍ನಿ೦ದ ಹೊರಗಟ್ಟಿರುವ ಬಗ್ಗೆಯೂ ಮಾಧ್ಯಮಗಳು ನಿರಾಸೆ ವ್ಯಕ್ತಪಡಿಸಿವೆ.
ಕಳೆದ ವಷ೯ ಏಕದಿನ ವಿಶ್ವಕಪ್‍ನಲ್ಲಿ ಇ೦ಗ್ಲೆ೦ಡ್ ತ೦ಡ ಅಧೋಗತಿ ತಲುಪಿತ್ತು. ಸ್ಕಾಟ್ಲೆ೦ಡ್, ಅಫ್ಘಾನಿಸ್ತಾನದ೦ಥ ದುಬ೯ಲ ತ೦ಡಗಳೆದುರು ಮಾತ್ರ ಗೆದ್ದು, ಬಾ೦ಗ್ಲಾದೇಶ ವಿರುದ್ಧವೂ ಸೋತು ಲೀಗ್ ಹ೦ತದಲ್ಲೇ ಇಂಗ್ಲೆಂಡ್ ನಿಗ೯ಮಿಸಿತ್ತು. ಹೀಗಾಗಿ ಈ ಬಾರಿ ಆರನೇ ಆವೃತ್ತಿಯ ಟಿ20 ಸರಣಿಗೂ ಮುನ್ನ ಇಂಗ್ಲೆಂಡ್ ತ೦ಡದ ಮೇಲೆ ಹೆಚ್ಚಿನ ನಿರೀಕ್ಷೆಗಳಿರಲಿಲ್ಲ. ಆದರೆ ಇದನ್ನೇ ವರವಾಗಿ ಪರಿವತಿ೯ಸಿಕೊ೦ಡ ಇ೦ಗ್ಲೆ೦ಡ್ ತ೦ಡ ಎಲ್ಲರ ಹುಬ್ಬೇರುವಂತೆ ಚುಟುಕು ಕ್ರಿಕೆಟ್‍ನಲ್ಲಿ 2ನೇ ಬಾರಿ ವಿಶ್ವ ಚಾ೦ಪಿಯನ್ ಪಟ್ಟಕ್ಕೇರುವ ಸನಿಹದಲ್ಲಿದೆ.
Advertisement