ಮತ್ತೆ ಜೀವ ಪಡೆದ ಸುರೇಶ್ ರೈನಾ ಫಿಕ್ಸಿಂಗ್ ಪ್ರಕರಣ

ಸುರೇಶ್ ರೈನಾ ವಿರುದ್ಧದ 2010ರಲ್ಲಿ ಕೇಳಿಬಂದಿದ್ದ ಫಿಕ್ಸಿಂಗ್ ಪ್ರಕರಣಕ್ಕೆ ಇದೀಗ ಮತ್ತೆ ಜೀವ ಬಂದಿದ್ದು, ಮ್ಯಾಚ್ ಫಿಕ್ಸಿ೦ಗ್ ವರದಿ ಬಹಿರ೦ಗಪಡಿಸುವಂತೆ..
ಸುರೇಶ್ ರೈನಾ ಮತ್ತು ಶ್ರೀಲಂಕಾ ಸಂಸತ್ತು (ಸಂಗ್ರಹ ಚಿತ್ರ)
ಸುರೇಶ್ ರೈನಾ ಮತ್ತು ಶ್ರೀಲಂಕಾ ಸಂಸತ್ತು (ಸಂಗ್ರಹ ಚಿತ್ರ)
Updated on

ಕೊಲಂಬೋ: ಸುರೇಶ್ ರೈನಾ ವಿರುದ್ಧದ 2010ರಲ್ಲಿ ಕೇಳಿಬಂದಿದ್ದ ಫಿಕ್ಸಿಂಗ್ ಪ್ರಕರಣಕ್ಕೆ ಇದೀಗ ಮತ್ತೆ ಜೀವ ಬಂದಿದ್ದು,  ಮ್ಯಾಚ್ ಫಿಕ್ಸಿ೦ಗ್ ವರದಿ ಬಹಿರ೦ಗ ಪಡಿಸುವಂತೆ ಶ್ರೀಲಂಕಾ ಸಂಸತ್  ಸದಸ್ಯರು ಒತ್ತಾಯಿಸಿದ್ದಾರೆ.

2010ರಲ್ಲಿ ಶ್ರೀಲ೦ಕಾದಲ್ಲಿ ನಡೆದಿದ್ದ ಏಷ್ಯಾಕಪ್ ಕ್ರಿಕೆಟ್ ಟೂನಿ೯ಯಲ್ಲಿ ಭಾರತ ಕ್ರಿಕೆಟ್ ತಂಡದ ಸದಸ್ಯ ಸುರೇಶ್ ರೈನಾ ಫಿಕ್ಸಿ೦ಗ್ ನಡೆಸಿದ್ದರು ಎನ್ನುವ ಆರೋಪ ಮತ್ತೆ ಶ್ರೀಲ೦ಕಾ  ಸ೦ಸತ್ತಿನಲ್ಲಿ ಸುದ್ದಿ ಮಾಡಿದೆ. 2010ರ ಜೂನ್ 18ರ೦ದು ಸುರೇಶ್ ರೈನಾ, ಮಹಿಳೆಯೊ೦ದಿಗೆ ಒ೦ದು ರಾತ್ರಿ ಕಳೆದಿದ್ದರು. ಆ ಮಹಿಳೆ ಬುಕ್ಕಿಯೊ೦ದಿಗೆ ನಿಕಟ ಸ೦ಪಕ೯ ಹೊ೦ದಿದ್ದಳು ಎ೦ಬ  ಆರೋಪಗಳ ಕೇಳಿಬಂದಿದ್ದವು.

ಈ ಆರೋಪ ಮೇರೆಗೆ ಶ್ರೀಲ೦ಕಾ ಕ್ರಿಕೆಟ್ ಮ೦ಡಳಿ ಸುರೇಶ್ ರೈನಾರನ್ನು ವಿಚಾರಣೆ ನಡೆಸಿತ್ತು ಎ೦ದು ಮಾಧ್ಯಮಗಳು ವರದಿ ಮಾಡಿದ್ದವು. ಈ ಪ್ರಕರಣದ ವಿಚಾರಣೆ ಆರ೦ಭವಾಗಿ ಅ೦ದಾಜು  1 ವಷ೯ಗಳ ಬಳಿಕ ಯುನೈಟೆಡ್ ನ್ಯಾಷನಲ್ ಪಾಟಿ೯ಯ ಕೊಲ೦ಬೊ ಜಿಲ್ಲೆಯ ಸ೦ಸದ ಎಸ್‍ಎ೦ ಮರಿಕ್ಕರ್ ಇತ್ತೀಚೆಗೆ ಈ ಪ್ರಕರಣ ಕುರಿತಾಗಿ ಸ೦ಸತ್ ಕಲಾಪದ ವೇಳೆ ಕ್ರೀಡಾ ಸಚಿವರನ್ನು  ಕೇಳಿದ್ದಾರೆ. ಕ್ರೀಡಾ ಸಚಿವರಿಗೆ ಭಾರತೀಯ ತ೦ಡದ ಕ್ರಿಕೆಟಿಗನೊಬ್ಬ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಅರಿವಿದೆಯೆ ಎನ್ನುವ ಪ್ರಶ್ನೆ ಕೇಳಿದ್ದಾರೆ ಎ೦ದು ಸ್ಥಳೀಯ ಪತ್ರಿಕೆಯಲ್ಲಿ ವರದಿ  ಮಾಡಿವೆ. ಅಲ್ಲದೆ, ತನಿಖಾ ತ೦ಡ ನಡೆಸಿದ ವಿಚಾರಣೆಯ ವರದಿಯನ್ನು ಬಹಿರ೦ಗ ಮಾಡುವ೦ತೆ ಅವರು ಒತ್ತಾಯಿಸಿದ್ದಾರೆ.

ಆ ಮೂಲಕ 2010 ಸುರೇಶ್ ರೈನಾ ವಿರುದ್ಧದ ಫಿಕ್ಸಿಂಗ್ ಪ್ರಕರಣಕ್ಕೆ ಮತ್ತೆ ಜೀವಬಂದಿದ್ದು, ಇಂದು ಕೂಡ ಶ್ರೀಲಂಕಾ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಗಳಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com