ಸ್ಟಾಯಿನಿಸ್‌ನ ಆಲ್‌ರೌಂಡರ್ ಪ್ರದರ್ಶನ; ಡೆಲ್ಲಿ ವಿರುದ್ಧ ಗೆಲುವು ಸಾಧಿಸಿದ ಪಂಜಾಬ್

ಶನಿವಾರ ನಡೆದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್...
ಮೂರು ವಿಕೆಟ್  ಗಳಿಸಿದ ಸ್ಟಾಯಿನಿಸ್ ತಂಡದ ಇತರ ಸದಸ್ಯರೊಂದಿಗೆ ಸಂಭ್ರಮಿಸುತ್ತಿರುವುದು (ಕೃಪೆ: ಬಿಸಿಸಿಐ)
ಮೂರು ವಿಕೆಟ್ ಗಳಿಸಿದ ಸ್ಟಾಯಿನಿಸ್ ತಂಡದ ಇತರ ಸದಸ್ಯರೊಂದಿಗೆ ಸಂಭ್ರಮಿಸುತ್ತಿರುವುದು (ಕೃಪೆ: ಬಿಸಿಸಿಐ)
ಚಂಡೀಗಢ್: ಶನಿವಾರ ನಡೆದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ 9 ರನ್‌ಗಳ ವಿಜಯ ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 5 ವಿಕೆಟ್ ನಷ್ಟದಲ್ಲಿ 181 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿ ಕ್ರೀಸ್‌ಗಿಳಿದ ಡೆಲ್ಲಿ ತಂಡದ ಸಂಜು ಸಾಂಸನ್ ( 49) ಮತ್ತು ಕರಣ್ ನಾಯರ್ (23) ರನ್ ಗಳಿಸಿದರೂ ಡೆಲ್ಲಿ ಡೇರ್ ಡೆವಿಲ್ಸ್‌ನ ಇನ್ನಿಂಗ್ಸ್ 5 ವಿಕೆಟ್ ನಷ್ಟದಲ್ಲಿ 172 ರನ್ ಗಳಿಸಿ ಅಂತ್ಯಗೊಂಡಿತು. 
ಕ್ವಿಂಟನ್ ಡಿ ಕಾಕ್ (52) ಮತ್ತು ಸಂಜು ಸಾಂಸನ್ (49) ಆರಂಭಿಕ ಜತೆಯಾಟವು ಡೆಲ್ಲಿ ತಂಡಕ್ಕೆ 70 ರನ್‌ಗಳನ್ನು ನೀಡಿತ್ತು.  ಡಿಕಾಕ್ 30 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಗಳಿಸಿದ್ದರು. ಅದೇ ವೇಳೆ ಸಂಜು 35 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಗಳಿಸಿದ್ದರು. ಸಂಜು ಔಟಾದೊಡನೆ ಡೆಲ್ಲಿಯ ಹೋರಾಟವೂ ಮಂಕಾಗುತ್ತಾ ಬಂತು.
ಪಂಜಾಬ್ ಪರವಾಗಿ ಮಾರ್ಕಸ್  ಸ್ಟಾಯಿನಿಸ್ ಮತ್ತು ವೃದ್ಧಿಮಾನ್ ಸಾಹಾ ತಲಾ 52 ರನ್ ಗಳಿಸುವ ಮೂಲಕ ತಮ್ಮ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಕೊನೆ ಗಳಿಗೆಯಲ್ಲಿ 5 ಎಸೆತಗಳಲ್ಲಿ 16 ರನ್ ಗಳಿಸಿದ ಅಕ್ಷರ್ ಪಟೇಲ್ ಉತ್ತಮ ಪ್ರದರ್ಶನ ನೀಡಿ ಪ್ರಶಂಸೆಗೆ ಅರ್ಹರಾದರು. 
ಪಂಜಾಬ್ ಪರವಾಗಿ ಮೋರಿಸ್ 2 ಮತ್ತು ಜಹೀರ್ ಖಾನ್ ಮತ್ತು ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಗಳಿಸಿದ್ದು,  ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿ ಸ್ಟಾಯಿನಿಸ್ 3, ಕಾರಿಯಪ್ಪ ಮತ್ತು ಸಂದೀಪ್ ಶರ್ಮಾ ತಲಾ ಒಂದು ವಿಕೆಟ್ ಗಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com