ನೆಟ್‌ನಲ್ಲಿ ಸುದೀರ್ಘ 51 ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿ ಗಿನ್ನಿಸ್ ದಾಖಲೆ ಸೃಷ್ಟಿಸಿದ ರವಾಂಡಾ ಕ್ಯಾಪ್ಟನ್

ರವಾಂಡದ ಕ್ರಿಕೆಟ್ ತಂಡದ ಕ್ಯಾಪ್ಟನ್ ಎರಿಕ್ ಡುಜಿಂಗಿಸಿಮಾನಾ ನೆಟ್ ನಲ್ಲಿ ಅತೀ ಹೆಚ್ಚು ಹೊತ್ತು ಬ್ಯಾಟ್ ಮಾಡುವ ಮೂಲಕ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾರೆ...
ರವಾಂಡದ ಕ್ರಿಕೆಟ್ ತಂಡದ ಕ್ಯಾಪ್ಟನ್ ಎರಿಕ್ ಡುಜಿಂಗಿಸಿಮಾನಾ
ರವಾಂಡದ ಕ್ರಿಕೆಟ್ ತಂಡದ ಕ್ಯಾಪ್ಟನ್ ಎರಿಕ್ ಡುಜಿಂಗಿಸಿಮಾನಾ
ರವಾಂಡಾ: ರವಾಂಡದ ಕ್ರಿಕೆಟ್ ತಂಡದ ಕ್ಯಾಪ್ಟನ್ ಎರಿಕ್ ಡುಜಿಂಗಿಸಿಮಾನಾ ನೆಟ್ ನಲ್ಲಿ ಅತೀ ಹೆಚ್ಚು ಹೊತ್ತು ಬ್ಯಾಟ್ ಮಾಡುವ ಮೂಲಕ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾರೆ.  ಈ ಮೂಲಕ ಎರಿಕ್, ವಿರಾಗ್ ಮಾರೆ ಎಂಬ ಭಾರತೀಯನ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. 
2015 ಡಿಸೆಂಬರ್ 22ರ ಬೆಳಗ್ಗಿನಿಂದ ಡಿ. 24ರ ಬೆಳಗ್ಗೆ ವರೆಗೆ ಸತತ 50 ಗಂಟೆಗಳ ಕಾಲ ಬ್ಯಾಟ್ ಮಾಡುವ ಮೂಲಕ 24ರ ಹರೆಯದ ಮಾರೆ ದಾಖಲೆ ಸೃಷ್ಟಿಸಿದ್ದರು. ಈ ಹಿಂದೆ ಇಂಗ್ಲೆಂಡ್‌ನ ಡೇವಿ ನ್ಯೂಮಾನ್, ರಿಚಾರ್ಡ್ ವೆಲ್ಸ್ ಮೊದಲಾದವರು 48 ಗಂಟೆಗಳ ಬ್ಯಾಟಿಂಗ್ ಮಾಡಿದ್ದ ದಾಖಲೆಯನ್ನು ಮಾರೆ ಮುರಿದಿದ್ದರು. ಆದರೆ 2016 ಮೇ 11 ರಿಂದ 13ನೇ ತಾರೀಖಿನ ವರೆಗೆ 51 ಗಂಟೆಗಳ ಕಾಲ ನೆಟ್ ನಲ್ಲಿ ಸುದೀರ್ಘ ಬ್ಯಾಟಿಂಗ್ ಮಾಡುವ ಮೂಲಕ ಎರಿಕ್ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ರವಾಂಡಾದಲ್ಲಿ ಮೊತ್ತ ಮೊದಲ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕಾಗಿ ಧನ ಸಂಗ್ರಹಿಸಲು ಎರಿಕ್ ಈ ರೀತಿ ಬ್ಯಾಟಿಂಗ್ ಮಾಡಿದ್ದರು. ಎರಿಕ್ ಬ್ಯಾಟಿಂಗ್ ಮಾಡುತ್ತಿರುವ ದೃಶ್ಯಗಳನ್ನು ರವಾಂಡಾ ಕ್ರಿಕೆಟ್ ಬೋರ್ಡ್ ಚಿತ್ರೀಕರಿಸಿ, ಬಿಡುಗಡೆ ಮಾಡಿದೆ. 
ತಾನು ದಾಖಲೆ ಬರೆಯುವ ಮುನ್ನ ತನಗೆ ಬೌಲಿಂಗ್ ಮಾಡಬೇಕೆಂದು ಎರಿಕ್ ರವಾಂಡಾ ಅಧ್ಯಕ್ಷ ಪೌಲ್ ಕಗೇಮಾ ಅವರಿಗೆ ಟ್ವೀಟ್ ಮಾಡಿದ್ದರು. ಆದರೆ ಪೌಲ್ ಇದಕ್ಕೆ ಒಪ್ಪಲಿಲ್ಲ.
ಅದೇ ವೇಳೆ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ಎರಿಕ್‌ಗೆ ಬೌಲಿಂಗ್ ಮಾಡುವ ದೃಶ್ಯಗಳನ್ನು ರವಾಂಡಾ ಕ್ರಿಕೆಟ್ ಬೋರ್ಡ್ ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com