
ವಿಶಾಖಪಟ್ಟಣ: ಕೃಣಾಲ್ ಪಾಂಡ್ಯ ಆಲ್ ರೌಂಡರ್ ಪ್ರದರ್ಶನದ ನೆರವಿನಿಂದಾಗಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಡೇರ್ ಡೇವಿಲ್ಸ್ ತಂಡವನ್ನು 80 ರನ್ ಗಳಿಂದ ಸೋಲಿಸಿದೆ.
ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ ಭರ್ಜರಿ 206 ರನ್ ಗಳಿಸಿತು. 207 ರನ್ ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 126 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಮುಂಬೈ 80 ರನ್ ಗಳಿಂದ ಜಯ ಗಳಿಸಿತು.
ಡೆಲ್ಲಿ ಪರ ಮಾಯಾಂಕ್ ಅಗರವಾಲ್ 8, ಕ್ವಿಂಟನ್ ಡಿ ಕಾಕ್ 40, ರಿಷಭ್ ಪಂತ್ 23, ಕ್ರಿಸ್ ಮಾರಿಸ್ 20 ರನ್ ಗಳಿಸಿದ್ದಾರೆ.
ಮುಂಬೈ ಪರ ಜಸ್ ಪ್ರೀತ್ ಬುಮ್ರಾ 3, ಕೃಣಾಲ್ ಪಾಂಡ್ಯ 2, ಹರ್ಭಜನ್ ಸಿಂಗ್ ಹಾಗೂ ವಿನಯ್ ಕುಮಾರ್ ತಲಾ 1 ವಿಕೆಟ್ ಪಡೆದಿದ್ದಾರೆ.
ಮುಂಬೈ ಪರ ರೋಹಿತ್ ಶರ್ಮಾ 31, ಗಪ್ಟಿಲ್ 48, ಕೃಣಾಲ್ ಪಾಂಡ್ಯ 86, ಕೈರನ್ ಪೊಲಾರ್ಡ್ 3, ಜೋಸ್ ಬಟ್ಲರ್ ಅಜೇಯ 18 ಹಾಗೂ ಅಂಬಾಟಿ ರಾಯುಡು 13 ರನ್ ಗಳಿಸಿದ್ದಾರೆ.
ಡೆಲ್ಲಿ ಪರ ಕ್ರಿಸ್ ಮಾರಿಸ್ 2, ಜಹೀರ್ ಖಾನ್ ಹಾಗೂ ಅಮಿತ್ ಮಿಶ್ರಾ ತಲಾ 1 ವಿಕೆಟ್ ಪಡೆದಿದ್ದಾರೆ.
Advertisement