ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಮತ್ತೆ ಸಿಕ್ಸ್ ಸಿಕ್ಸರ್ ಸಿಡಿಸುವ ಭರವಸೆ ನೀಡಿದ ಯುವಿ

ಮೊದಲ ಟಿ20 ವಿಶ್ವಕಪ್ ನಲ್ಲಿ ಒಂದೇ ಓವರ್ ನ ಆರು ಎಸೆತೆಗಳನ್ನು ಸಿಕ್ಸರ್ ಸಿಡಿಸಿದ್ದ ಟೀಂ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಕ್ಯಾನ್ಸರ್ ಪೀಡಿತ ಮಕ್ಕಳಿಗೆ...
ಯುವರಾಜ್ ಸಿಂಗ್
ಯುವರಾಜ್ ಸಿಂಗ್
Updated on: 

ಮೊಹಾಲಿ: ಮೊದಲ ಟಿ20 ವಿಶ್ವಕಪ್ ನಲ್ಲಿ ಒಂದೇ ಓವರ್ ನ ಆರು ಎಸೆತೆಗಳನ್ನು ಸಿಕ್ಸರ್ ಸಿಡಿಸಿದ್ದ ಟೀಂ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಮತ್ತೊಮ್ಮೆ ಸಿಕ್ಸ್ ಸಿಕ್ಸರ್ ಸಿಡಿಸುವ ಮಾತು ಕೊಟ್ಟಿದ್ದಾರೆ.

ಕ್ಯಾನ್ಸರ್ ನಿಂದ ಗುಣಮುಖರಾಗಿರುವ ಯುವರಾಜ್ ಸಿಂಗ್ ಕ್ಯಾನ್ಸರ್ ಪೀಡಿತ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಈ ವೇಳೆ ಮಕ್ಕಳಿಗೆ ಸಿಕ್ಸರ್ ಸಿಡಿಸುವ ಭರವಸೆ ನೀಡಿದ್ದಾರೆ.

ಪಿಸಿಎ ಸ್ಟೇಡಿಯಂಗೆ ಆಗಮಿಸಿದ್ದ 7 ಹಾಗೂ 8 ವರ್ಷದ ಕ್ಯಾನ್ಸರ್ ಪೀಡಿತ ಮಕ್ಕಳೊಂದಿಗೆ ಕೆಲ ಸಮಯ ಕಳೆದ ಯುವರಾಜ್ ಸಿಂಗ್ ಈ ವೇಳೆ ಸಿಕ್ಸರ್ ಸಿಡಿಸುವ ಬಗ್ಗೆ ಮಗುವೊಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನನಗೋಸ್ಕರ ನೀನು ಪ್ರಾರ್ಥನೆ ಮಾಡು. ಮತ್ತೊಮ್ಮೆ ನಾನು ಆರು ಸಿಕ್ಸರ್ ಬಾರಿಸುತ್ತೇನೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com