ಮುಂಬೈಯನ್ನು ಮಣಿಸಿ ಪ್ಲೇ ಆಫ್ ಸ್ಥಾನ ಗಿಟ್ಟಿಸಿದ ಗುಜರಾತ್ ಲಯನ್ಸ್

ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 6 ವಿಕೆಟ್‌ಗಳಿಂದ ಪರಾಭವಗೊಳಿಸಿ ಗುಜರಾತ್ ಲಯನ್ಸ್ ಪ್ಲೇ ಆಫ್‌ಗೆ ಸ್ಥಾನ ಗಿಟ್ಟಿಸಿಕೊಂಡಿದೆ...
ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಬ್ಯಾಟಿಂಗ್
ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಬ್ಯಾಟಿಂಗ್
ಕಾನ್ಪುರ್: ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 6 ವಿಕೆಟ್‌ಗಳಿಂದ ಪರಾಭವಗೊಳಿಸಿ ಗುಜರಾತ್ ಲಯನ್ಸ್ ಪ್ಲೇ ಆಫ್‌ಗೆ ಸ್ಥಾನ ಗಿಟ್ಟಿಸಿಕೊಂಡಿದೆ. ಪ್ರಸ್ತುತ ಐಪಿಎಲ್‌ನಲ್ಲಿ ಪ್ಲೇ ಆಫ್‌ಗೆ ಸ್ಥಾನ ಗಿಟ್ಟಿಸಿಕೊಂಡ ಮೊದಲ ತಂಡವಾಗಿದೆ ಗುಜರಾತ್ ಲಯನ್ಸ್ .
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 172 ರನ್ ದಾಖಲಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಸುರೇಶ್ ರೈನಾ ನಾಯಕತ್ವದ ಲಯನ್ಸ್ ತಂಡ 17.5 ನೇ ಓವರ್‌ನಲ್ಲಿ 173 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.
ಗೆದ್ದೇ ಗೆಲ್ಲುವೆವು ಎಂಬ ಛಲದಲ್ಲಿ ಕ್ರೀಸ್‌ಗಿಳಿದಿದ್ದ ಮುಂಬೈ ಇಂಡಿಯನ್ಸ್‌ಗೆ ನಿರೀಕ್ಷಿಸಿದಂತೆ ಆಟವಾಡಲು ಸಾಧ್ಯವಾಗಲಿಲ್ಲ. ಲಯನ್ಸ್ ತಂಡದ ಬೌಲಿಂಗ್ ದಾಳಿಗೆ ಮುಂಬೈ ಇಂಡಿಯನ್ಸ್‌ನ ಬ್ಯಾಟ್ಸ್‌ಮೆನ್‌ಗಳು ರನ್‌ಗಳಿಸುವಲ್ಲಿ ವಿಫಲರಾಗುತ್ತಾ ಹೋದರು.
ಮುಂಬೈ ಪರವಾಗಿ ರಾಣಾ (36 ಎಸೆತಗಳಲ್ಲಿ 70), ಬಟ್ಲರ್  (30) ಮತ್ತು ರೋಹಿತ್ ಶರ್ಮಾ (17 ಎಸೆತಗಳಲ್ಲಿ 30) ರನ್ ಗಳಿಸಿದ್ದರು. ಇನ್ನುಳಿದವರೆಲ್ಲರ ರನ್ ಒಂದಂಕಿ ದಾಟಲಿಲ್ಲ. ಲಯನ್ಸ್ ತಂಡದ ಬೌಲಿಂಗ್ ಕೂಡಾ ಅದ್ಭುತವಾಗಿದ್ದು, ಪಿ ಕುಮಾರ್, ಕುಲಕರ್ಣಿ, ಸ್ಮಿತ್ ಮತ್ತು ಬ್ರಾವೋ ತಲಾ 2 ವಿಕೆಟ್ ಗಳಿಸಿಕೊಂಡಿದ್ದಾರೆ.
ಗುಜರಾತ್ ಲಯನ್ಸ್ ಪರವಾಗಿ ನಾಯಕ ರೈನಾ 36 ಎಸೆತಗಳಲ್ಲಿ 58, ಮೆಕಲಂ  27 ಎಸೆತಗಳಲ್ಲಿ  48 ಮತ್ತು  ಸ್ಮಿತ್  (ಅಜೇಯ 37), ಜಡೇಜಾ (ಅಜೇಯ 21) ರನ್ ದಾಖಲಿಸಿದ್ದಾರೆ. ಓಪನಿಂಗ್ ಬ್ಯಾಟ್ಸ್‌ಮೆನ್ ಫಿಂಚ್ ಶೂನ್ಯ ಹಾಗೂ ಕಾರ್ತಿಕ್ ಕೇವಲ ಮೂರು ರನ್ ಗಳಿಸಿ ಔಟಾಗಿದ್ದರು. 
ಮುಂಬೈ ಮಣಿಸುವ ಮೂಲಕ ಲಯನ್ಸ್ ತಂಡ 18 ಪಾಯಿಂಟ್‌ಗಳೊಂದಿಗೆ ಫ್ಲೇ ಆಪ್‌ಗೆ ಸ್ಥಾನ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com