4 ವರ್ಷ ಬದಲಿಗೆ 2 ವರ್ಷಕ್ಕೊಮ್ಮೆ ಐಸಿಸಿ ಟಿ20 ವಿಶ್ವಕಪ್?

ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ನಿರೀಕ್ಷೆಗೂ ಮೀರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ 4 ವರ್ಷಕ್ಕೊಮ್ಮೆ ನಡೆಯುವ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು...
ವಿಶ್ವಕಪ್ ಟಿ20
ವಿಶ್ವಕಪ್ ಟಿ20

ದುಬೈ: ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ನಿರೀಕ್ಷೆಗೂ ಮೀರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ 4 ವರ್ಷಕ್ಕೊಮ್ಮೆ ನಡೆಯುವ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು 2 ವರ್ಷಕ್ಕೊಮ್ಮೆ ನಡೆಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಚಿಂತನೆ ನಡೆಸಿದೆ.

ಪ್ರಸ್ತುತ ಐಸಿಸಿ ವೇಳಾಪಟ್ಟಿ ಪ್ರಕಾರ, ಮುಂದಿನ ಟಿ20 ವಿಶ್ವಕಪ್ 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದೆ. 2 ವರ್ಷಕ್ಕೊಮ್ಮೆ ಟಿ20 ವಿಶ್ವಕಪ್ ಆಯೋಜಿಸಲು ಐಸಿಸಿ ಮುಂದಾದರೆ 2018ರಂದು ದಕ್ಷಿಣ ಆಫ್ರಿಕಾದಲ್ಲಿ ಪಂದ್ಯಾವಳಿ ನಡೆಯುವ ನಿರೀಕ್ಷೆ ಇದೆ. ಇನ್ನು ಟೂರ್ನಿಗೆ ಯುಎಇ ಕೂಡ ಆತಿಥ್ಯ ರಾಷ್ಟ್ರದ ರೇಸ್ ನಲ್ಲಿದೆ.

2 ವರ್ಷಕ್ಕೊಮ್ಮೆ ಟಿ20 ವಿಶ್ವಕಪ್ ನಡೆಸುವ ನಿರ್ಧಾರಕ್ಕೆ ಐಸಿಸಿ ಬರಲು ಮುಖ್ಯ ಕಾರಣ ಭಾರತದಲ್ಲಿ ನಡೆದ ಪಂದ್ಯಾವಳಿಯ ಅಭೂತಪೂರ್ವ ಯಶಸ್ಸು. ಪಂದ್ಯಾವಳಿಯ ವೇಳೆ ಭಾರತ ತಂಡದ ಆಸ್ಟ್ರೇಲಿಯಾ, ಪಾಕಿಸ್ತಾನ ವಿರುದ್ಧ ಪಂದ್ಯ, ಸೆಮಿಫೈನಲ್ ಪಂದ್ಯವನ್ನು 8 ಕೋಟಿಗೂ ಅಧಿಕ ಜನ ವೀಕ್ಷಿಸಿದ್ದರು. ಇನ್ನು ಟೂರ್ನಿಯ ವಿಡೋಯಗಳನ್ನು 75 ಕೋಟಿಗೂ ಅಧಿಕ ಮಂದಿ ಆನ್ ಲೈನ್ ನಲ್ಲಿ ವೀಕ್ಷಿಸಿದ್ದರು. 2015ರ ಏಕದಿನ ವಿಶ್ವಕಪ್ ವೇಳೆ 25 ಕೋಟಿ ವಿಡಿಯೋಗಳನ್ನು ಮಾತ್ರ ವೀಕ್ಷಣೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com