ಲಂಕಾ ವೇಗಿ ಶಮಿಂದಾ ಎರಂಗಾ ಬೌಲಿಂಗ್ ಶೈಲಿ ಶಂಕಾಸ್ಪದ!
ಚೆಸ್ಟರ್ ಲೀ ಸ್ಟ್ರೀಟ್: ಶ್ರೀಲಂಕಾ ತಂಡದ ಉದಯೋನ್ಮುಖ ವೇಗಿ ಶಮಿಂದಾ ಎರಂಗಾ ಅವರ ಬೌಲಿಂಗ್ ಶೈಲಿ ಶಂಕಾಸ್ಪದವಾಗಿದೆ ಎಂದು ಐಸಿಸಿ ಶಂಕೆ ವ್ಯಕ್ತಚಪಡಿಸಿದೆ.
ಸೋಮವಾರ ಇಂಗ್ಲೆಂಡ್ ವಿರುದ್ಧ ಕೊನೆಗೊಂಡ ಎರಡನೇ ಟೆಸ್ಟ್ ಪಂದ್ಯದ ವೇಳೆ ಎರಂಗಾ ಬೌಲ್ ಮಾಡಿದ ಕೆಲ ಎಸೆತಗಳು ಅನುಮಾನಾಸ್ಪದವಾಗಿದ್ದವು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ಪಂದ್ಯದ ವಿಚಕ್ಷಣಾಧಿಕಾರಿಗಳು ಐಸಿಸಿಗೆ ದೂರು ನೀಡಿದ್ದು, ಅಧಿಕಾರಿಗಳು ಐಸಿಸಿಗೆ ವರದಿ ನೀಡಿದ್ದಾರೆ. ಐಸಿಸಿ ಮೂಲಗಳ ಪ್ರಕಾರ ತಜ್ಞರು ನೀಡಿರುವ ವರದಿ ಪ್ರತಿಯನ್ನು ಪ್ರತಿಯನ್ನು ಶ್ರೀಲಂಕಾ ತಂಡದ ಆಡಳಿತ ಮಂಡಳಿಗೂ ಕಳುಹಿಸಲಾಗಿದ್ದು, 14 ದಿನಗಳ ಒಳಗಾಗಿ ಅವರು ಬೌಲಿಂಗ್ ಪರೀಕ್ಷೆಗೆ ಒಳಗಾಗಬೇಕು. ಪರೀಕ್ಷೆಯ ವರದಿ ಬರುವವರೆಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲಿಂಗ್ ಮಾಡಬಹುದು’ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 27 ಓವರ್ ಬೌಲ್ ಮಾಡಿ 100ರನ್ ನೀಡಿದ್ದ ಎರಂಗಾ, ಎರಡನೇ ಇನಿಂಗ್ಸ್‌ನಲ್ಲಿ ಒಂದು ಓವರ್ ಬೌಲ್ ಮಾಡಿದ್ದರು. ಲಾರ್ಡ್ಸ್‌ನಲ್ಲಿ ಜೂನ್ 9ರಿಂದ ನಡೆಯುವ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಎರಂಗಾ ಆಡುವ ನಿರೀಕ್ಷೆ ಇದೆಯಾದರೂ, ಒಂದು ವೇಳೆ ಅವರ ಮೇಲಿನ ಆರೋಪ ಸಾಬೀತಾದರೆ ಸೀಮಿತ ಓವರ್‌ಗಳ ಸರಣಿಯಲ್ಲಿ ಎರಂಗಾ ಆಡುವ ಅವಕಾಶದಿಂದ ವಂಚಿತರಾಗಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ