ಅರ್ಜುನ್ ತೆಂಡೂಲ್ಕರ್ ಆಯ್ಕೆಯಲ್ಲಿ ಪಕ್ಷಪಾತವಾಗಿಲ್ಲ: ದಾಖಲೆ ವೀರ ಪ್ರಣವ್ ತಂದೆ ಹೇಳಿಕೆ

ಪಶ್ಚಿಮ ವಲಯ ಅಂಡರ್ 16 ಕ್ರಿಕೆಟ್ ತಂಡದ ಆಯ್ಕೆ ವಿಚಾರದಲ್ಲಿ ಯಾವುದೇ ಪಕ್ಷಪಾತವಾಗಿಲ್ಲ ಎಂದು ದಾಖಲೆ ವೀರ ಪ್ರಣವ್ ಧನವಾಡೆ ತಂದೆ ಪ್ರಶಾಂತ್ ಧನವಾಡೆ ಹೇಳಿದ್ದಾರೆ.
ಪ್ರಣವ್ ಧನವಾಡೆ ಮತ್ತು ಅರ್ಜುನ್ ತೆಂಡೂಲ್ಕರ್ (ಸಂಗ್ರಹ ಚಿತ್ರ)
ಪ್ರಣವ್ ಧನವಾಡೆ ಮತ್ತು ಅರ್ಜುನ್ ತೆಂಡೂಲ್ಕರ್ (ಸಂಗ್ರಹ ಚಿತ್ರ)

ನವದೆಹಲಿ: ಪಶ್ಚಿಮ ವಲಯ ಅಂಡರ್ 16 ಕ್ರಿಕೆಟ್ ತಂಡದ ಆಯ್ಕೆ ವಿಚಾರದಲ್ಲಿ ಯಾವುದೇ ಪಕ್ಷಪಾತವಾಗಿಲ್ಲ ಎಂದು ದಾಖಲೆ ವೀರ ಪ್ರಣವ್ ಧನವಾಡೆ ತಂದೆ ಪ್ರಶಾಂತ್ ಧನವಾಡೆ  ಹೇಳಿದ್ದಾರೆ.

ಅಂಡರ್ 16 ತಂಡದ ಆಯ್ಕೆಯಲ್ಲಿ ಆಯ್ಕೆ ಸಮಿತಿ ಪಕ್ಷಪಾತ ನೀತಿ ಧೋರಣೆ ಅನುಸರಿಸಿದ್ದು, ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರಿಗೆ ಸ್ಥಾನ  ಕಲ್ಪಿಸಲು ದಾಖಲೆ ವೀರ ಪ್ರಣವ್ ಧನವಾಡೆಯನ್ನು ನಿರ್ಲಕ್ಷಿಸಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ ಇದೀಗ ಈ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಈ ಬಗ್ಗೆ ಸ್ಪಷ್ಟನೆ  ನೀಡಿರುವ ಪ್ರಣವ್ ಧನವಾಡೆ ತಂದೆ ಪ್ರಶಾಂತ್ ಧನವಾಡೆ ಅವರು ಪಶ್ಚಿಮ ವಲಯದ ಅಂಡರ್ 16 ಕ್ರಿಕೆಟ್ ತಂಡದ ಆಯ್ಕೆ ವಿಚಾರದಲ್ಲಿ ಯಾವುದೇ ಪಕ್ಷಪಾತವಾಗಿಲ್ಲ. ಪ್ರಣವ್ ಪಶ್ಚಿಮ  ವಲಯದ ತಂಡದ ವ್ಯಾಪ್ಕಿಗೆ ಬರುವುದೇ ಇಲ್ಲ. ಹೀಗಿರುವಾಗ ಆತನ್ನು ಪಶ್ಚಿಮ ವಲಯದ ತಂಡಕ್ಕೆ ಆಯ್ಕೆ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಅರ್ಜುನ್ ತೆಂಡೂಲ್ಕರ್ ಉತ್ತಮ ಆಲ್ ರೌಂಡರ್ ಅಗಿದ್ದು, ಆತನ ಆಯ್ಕೆ ಉತ್ತಮವಾಗಿದೆ. ಪ್ರಣವ್ ಮತ್ತು ಅರ್ಜುನ್ ತೆಂಡೂಲ್ಕರ್ ಉತ್ತಮ ಸ್ನೇಹಿತರಾಗಿದ್ದು, ಅವರ ಸ್ನೇಹಕ್ಕೆ ಈ ವಿವಾದಗಳು  ತೊಡಕಾಗದಿರಲಿ ಎಂಬ ಒಂದೇ ಕಾರಣಕ್ಕಾಗಿ ತಾವು ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇವೆ. ವಿನಾಕಾರಣ ಈ ವಿಚಾರದಲ್ಲಿ ವಿವಾದ ಎಬ್ಬಿಸುವುದು ಬೇಡ ಎಂದು ಪ್ರಶಾಂತ್ ಧನವಾಡೆ  ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಪ್ರಣವ್ ದಾಖಲೆ ಕುರಿತು ಮಾತನಾಡಿದ ಪ್ರಶಾಂತ್ ಅವರು, ಪ್ರಣವ್ ಸಿಡಿಸಿದ 1009ರನ್ ಗಳ ದಾಖಲೆ ಖಂಡಿತ ಆಯ್ಕೆ ಸಮಿತಿಯ ಗಮನ ಸೆಳೆದಿರುತ್ತದೆ.  ಪ್ರಣವ್ ಖಂಡಿತ ತಂಡಕ್ಕೆ ಆಯ್ಕೆಯಾಗುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಎಂಸಿಎ ವತಿಯಿಂದ ಪಶ್ಚಿಮ ವಲಯದ ಅಂಡರ್ 16 ಕ್ರಿಕೆಟ್ ತಂಡ ಆಯ್ಕೆಯಾದಾಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಗೆ ಸ್ಥಾನ ನೀಡಲಾಗಿತ್ತು. ಆಗ ಕೆಲ  ಪತ್ರಿಕೆಗಳಲ್ಲಿ ಪ್ರಣವ್ ಧನವಾಡೆಯನ್ನು ನಿರ್ಲಕ್ಷಿಸಿ ಅರ್ಜುನ್ ತೆಂಡೂಲ್ಕರ್ ರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com