ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ಶ್ರೀಲಂಕಾ ಆಟಗಾರ ನುವಾನ್ ಕುಲಸೇಕರ

ಶ್ರೀಲಂಕಾ ಕ್ರಿಕೆಟ್ ತಂಡದ ವೇಗದ ಬೌಲರ್ ನುವಾನ್ ಕುಲಸೇಕರ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ಶ್ರೀಲಂಕಾ ಆಟಗಾರ ನುವಾನ್ ಕುಲಸೇಕರ

ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ವೇಗದ ಬೌಲರ್ ನುವಾನ್ ಕುಲಸೇಕರ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
"ತಕ್ಷಣದಿಂದಲೇ ಜಾರಿಗೆ ಬರುವಂತೆ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ನುವಾನ್ ಕುಲಸೇಕರ ಹೇಳಿರುವುದರ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಸಾಕಷ್ಟು ಆಲೋಚನೆ ಬಳಿಕ ಈ ನಿರ್ಧಾರ ಕೈಗೊಂಡಿದ್ದು ಇದರಿಂದಾಗಿ ಏಕದಿನ ಪಂದ್ಯ ಹಾಗೂ ಐಪಿಎಲ್ ಪಂದ್ಯಗಳಿಗೆ ಸಹಕಾರಿಯಾಗಲಿದೆ ಎಂದು ಕುಲಸೇಕರ ತಿಳಿಸಿದ್ದಾರೆ.
2005 ರಲ್ಲಿ ಟೆಸ್ಟ್ ಕ್ರಿಕೆಟ್ ಪ್ರಾರಂಭಿಸಿದ ಕುಲಸೇಕರ ಈ ವರೆಗೂ 21 ಪಂದ್ಯಗಳನ್ನಾಡಿದ್ದು 48 ವಿಕೆಟ್ ಗಳನ್ನು ಪಡೆದಿದ್ದಾರೆ. ಆದರೆ ಏಕದಿನ ಹಾಗೂ ಟಿ 20 ಬೌಲಿಂಗ್ ಮಾಡಿದಷ್ಟು ಆಕ್ರಮಣಕಾರಿಯಾಗಿ  ಟೆಸ್ಟ್ ಪಂದ್ಯಗಳಲ್ಲಿ  ಮಾಡದೇ ಇರುವುದು ಟೆಸ್ಟ್ ಫಾರ್ಮೆಟ್ ನಲ್ಲಿ ಕುಲಸೇಕರ ಅವರ ವೈಫಲ್ಯವಾಗಿದೆ. 2014 ರಲ್ಲಿ ಲಾರ್ಡ್ಸ್ ನಲ್ಲಿ ನಡೆದ ಇಂಗ್ಲೆಡ್- ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯ ಕುಲಸೇಕರ ಅವರ ಕೊನೆಯ ಪಂದ್ಯವಾಗಿತ್ತು. 173 ಏಕದಿನ ಪಂದ್ಯಗಳನ್ನು ಆಡಿರುವ ಕುಲಸೇಕರ 2009 ರ ಸಾಲಿನಲ್ಲಿ ನಂ.1 ಬೌಲರ್ ಆಗಿ ಗುರುತಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com