
ಮುಂಬೈ: ಟೀಂ ಇಂಡಿಯಾದ ಪ್ರಖ್ಯಾತ ನಾಯಕ ಎಂಎಸ್ ಧೋನಿಯನ್ನು ಏಕದಿನ ನಾಯಕತ್ವದಿಂದ ತೆಗೆದರೆ ದೊಡ್ಡ ಗಂಡಾಂತರ ಎಂದು ಮಾಜಿ ಟೀಂ ಇಂಡಿಯಾ ಕೋಚ್ ಗ್ಯಾರಿ ಕ್ರಿಸ್ಟನ್ ಹೇಳಿದ್ದಾರೆ.
ಎರಡನೇ ಬಾರಿ ಟೀಂ ಇಂಡಿಯಾ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೋಚ್ ಗ್ಯಾರಿ ಕ್ರಿಸ್ಟನ್ ಧೋನಿ ಓರ್ವ ಅದ್ಭುತ ನಾಯಕ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದರೆ ಅದು ದೊಡ್ಡ ತಪ್ಪು ಎಂದು ಹೇಳಿದ್ದಾರೆ.
ಇದೇ ವೇಳೆ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದು ಅವರಿಗೆ ಏಕದಿನ ತಂಡದ ನಾಯಕತ್ವ ಜವಾಬ್ದಾರಿ ನೀಡುವುದು ಬೇಡವ ಎಂದು ಕೇಳಿದ್ದಕ್ಕೆ ಏನು ಪ್ರತಿಕ್ರಿಯೆ ನೀಡದ ಗ್ಯಾರಿ ಕ್ರಿಸ್ಟನ್, ಧೋನಿಯನ್ನು ನಾಯಕತ್ವದಿಂದ ಕೆಳಗಿಳಿಸಿದರೆ ಅದು ದೊಡ್ಡ ತಪ್ಪು ಎಂದು ಹೇಳಿದ್ದಾರೆ.
ಸುದೀರ್ಘ ಅನುಭವದ ಮೂಲಕ ಓರ್ವ ಸಾಧಕ ತನ್ನ ವೃತ್ತಿ ಬದುಕಿನ ಕೊನೆಯವರೆಗೂ ಉತ್ತಮ ಸಾಧನೆಯನ್ನು ನೀಡಬಲ್ಲರು. ಒಂದು ವೇಳೆ ಧೋನಿಯನ್ನು ನಾಯಕತ್ವದಿಂದ ಕೆಳಗಿಳಿಸುವುದೇ ಆದರೆ 2019ರ ಏಕದಿನ ವಿಶ್ವಕಪ್ ನಲ್ಲಿ ಒಂದು ಅದ್ಭುತ ಪ್ರದರ್ಶನದ ಕೊರತೆ ಎದುರಿಸಬೇಕಾಗುತ್ತದೆ ಎಂದು ಗ್ಯಾರಿ ಕ್ರಿಸ್ಟನ್ ಅಭಿಪ್ರಾಯಪಟ್ಟಿದ್ದಾರೆ.
Advertisement