ನವದೆಹಲಿ: ದೇಶೀಯ ಕ್ರಿಕೆಟ್ ನಲ್ಲಿ ದೆಹಲಿ ರಣಜಿ ಕ್ರಿಕೆಟ್ ತಂಡದ ಯುವ ಆಟಗಾರ ರಿಶಬ್ ಪಂತ್ ಇತಿಹಾಸ ನಿರ್ಮಿಸಿದ್ದಾರೆ.
ಕೇರಳದಲ್ಲಿ ಜಾರ್ಖಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 19 ವರ್ಷದ ರಿಶಬ್ ಅತೀ ವೇಗದ ಶತಕ ಸಿಡಿಸಿದ್ದಾರೆ. ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಅಲ್ಲದೆ ಪ್ರಸಕ್ತ ಟೂರ್ನಿಯಲ್ಲಿ ಒಟ್ಟು 6 ಇನ್ನಿಂಗ್ಸ್ ಗಳಲ್ಲಿ ನಾಲ್ಕು ಶತಕ ಸಿಡಿಸಿದ್ದಾರೆ.
2015ರಲ್ಲಿ ಕರ್ನಾಟಕದ ವಿರುದ್ಧದ ರಣಜಿ ಪಂದ್ಯದಲ್ಲಿ ನಮನ್ ಓಜಾ 69 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು.