ಮೊದಲ ಟೆಸ್ಟ್: ಭಾರತಕ್ಕೆ ಬಲ ತಂದ ವಿಜಯ್, ಪೂಜಾರ ಜುಗಲ್ ಬಂದಿ ಆಟ!

ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಆರಂಭ ಪಡೆದಿದ್ದು, ಆಂಗ್ಲರು ನೀಡಿದ್ದ ಬೃಹತ್ ಮೊತ್ತಕ್ಕೆ ಸರಿಯಾದ ಉತ್ತರ ನೀಡುತ್ತಿದ್ದಾರೆ.
ಕ್ರಿಕ್ ಇನ್ಱೋ ಚಿತ್ರ
ಕ್ರಿಕ್ ಇನ್ಱೋ ಚಿತ್ರ

ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಆರಂಭ ಪಡೆದಿದ್ದು, ಆಂಗ್ಲರು ನೀಡಿದ್ದ ಬೃಹತ್ ಮೊತ್ತಕ್ಕೆ ಸರಿಯಾದ ಉತ್ತರ ನೀಡುತ್ತಿದ್ದಾರೆ.

ರಾಜ್ ಕೋಟ್ ನಲ್ಲಿರುವ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ 3ನೇ ದಿನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡಕ್ಕೆ ಮುರಳಿ ವಿಜಯ್ ಹಾಗೂ ಚೇತೇಶ್ವರ ಪೂಜಾರ ಭರ್ಜರಿ ಆರಂಭ  ಒದಗಿಸಿದ್ದಾರೆ. ಬೌಲಿಂಗ್ ವೇಳೆ ಸ್ವಯಂಕೃತ ಅಪರಾಧಗಳಿಂದಾಗಿ ಇಂಗ್ಲೆಂಡ್ ಭಾರಿ ರನ್ ಬಿಟ್ಟುಕೊಟ್ಟಿದ್ದ ಭಾರತ ತಂಡದ ಆಟಗಾರರು ಅದೇ ತಪ್ಪನ್ನು ಬ್ಯಾಟಿಂಗ್ ನಲ್ಲಿ ಮುಂದುವರೆಸದೇ ಇಂಗ್ಲೆಂಡ್ ಬೌಲರ್ ಗಳಿಗೆ ಸಮರ್ಥ  ಉತ್ತರ ನೀಡುತ್ತಿದ್ದಾರೆ. ಆರಂಭಿಕ ಆಟಗಾರ ಗಂಭೀರ್ 29 ರನ್ ಗಳಿಸಿ ಔಟಾದರೂ ಕೂಡ ವಿಜಯ್ ರೊಂದಿಗೆ ಸೇರಿದ ಪೂಜಾರ ಉತ್ತಮ ಜೊತೆಯಾಟವಾಡುತ್ತಿದ್ದಾರೆ. ಇಂಗ್ಲೆಂಡ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿರುವ ಈ  ಇಬ್ಬರು ಬ್ಯಾಟ್ಸಮನ್ ಗಳು ಉತ್ತಮವಾಗಿ ರನ್ ಕಲೆಹಾಕುತ್ತಿದ್ದು, ಶತಕದ ಅಂಚಿನಲ್ಲಿ ಬ್ಯಾಟ್ ಮಾಡುತ್ತಿದ್ದಾರೆ.

ಆರಂಭಿಕ ಆಟಗಾರ ಮುರಳಿ ವಿಜಯ್ 82 ರನ್ ಗಳಿಸಿ ಅಜೇರಾಗಿ ಉಳಿದಿದ್ದರೆ, 2ನೇಯವರಾಗಿ ಕಣಕ್ಕಿಳಿದ ಪೂಜಾರ ಕೂಡ 94 ರನ್ ಗಳಿಸಿ ಶತಕದಂಚಿನಲ್ಲಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಭಾರತ 1 ವಿಕೆಟ್ ನಷ್ಟಕ್ಕೆ 216  ರನ್ ಗಳಿಸಿದ್ದು, 29 ರನ್ ಗಳಿಸಿ ಗಂಭೀರ್ ಔಟ್ ಆಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com