ಕ್ರೀಡಾಂಗಣದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆಫ್ರಿಕಾ ಆಟಗಾರರಿಗೆ ದಂಡ!

ಆಸ್ಟ್ರೇಲಿಯಾ ವಿರುದ್ಧ ಕೇಪ್ ಟೌನ್ ನಲ್ಲಿ ನಡೆದ 5ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ರೊಂದಿಗೆ ವಾಗ್ವಾದಕ್ಕಿಳಿದಿದ್ದ ದಕ್ಷಿಣ ಆಫ್ರಿಕಾ ತಂಡದ ಬೌಲರ್ ಇಮ್ರಾನ್ ತಾಹಿರ್ ಗೆ ಐಸಿಸಿ ದಂಡವಿಧಿಸಿದೆ.
ಆಫ್ರಿಕಾ ತಂಡದ ತಾಹಿರ್ ಹಾಗೂ ವಾರ್ನರ್ ನಡುವಿನ ಸಂಘರ್ಷ (ಸಂಗ್ರಹ ಚಿತ್ರ)
ಆಫ್ರಿಕಾ ತಂಡದ ತಾಹಿರ್ ಹಾಗೂ ವಾರ್ನರ್ ನಡುವಿನ ಸಂಘರ್ಷ (ಸಂಗ್ರಹ ಚಿತ್ರ)

ದುಬೈ: ಆಸ್ಟ್ರೇಲಿಯಾ ವಿರುದ್ಧ ಕೇಪ್ ಟೌನ್ ನಲ್ಲಿ ನಡೆದ 5ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ರೊಂದಿಗೆ ವಾಗ್ವಾದಕ್ಕಿಳಿದಿದ್ದ ದಕ್ಷಿಣ ಆಫ್ರಿಕಾ ತಂಡದ ಬೌಲರ್  ಇಮ್ರಾನ್ ತಾಹಿರ್ ಗೆ ಐಸಿಸಿ ದಂಡವಿಧಿಸಿದೆ.

ಪಂದ್ಯದ 37ನೇ ಓವರ್ ನಲ್ಲಿ ಡೇವಿಡ್ ವಾರ್ನರ್ ರನ್ನು ಕೆಣಕಿ ವಾಗ್ವಾದ ಮಾಡಿದ್ದ ಆರೋಪದ ಮೇಲೆ ಇಮ್ರಾನ್ ತಾಹಿರ್ ಗೆ ಪಂದ್ಯ ಸಂಭಾವನೆಯ ಶೇ.30ರಷ್ಟು ಹಣವನ್ನು ದಂಡವಾಗಿ  ವಿಧಿಸಲಾಗಿದೆ. ಅಂತೆಯೇ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಆರೋಪ ಮೇಲೆ ದಕ್ಷಿಣ ಆಫ್ರಿಕಾ ತಂಡ ನಾಯಕ ಫಾಫ್ ಡುಪ್ಲೆಸಿಸ್ ಗೆ ಪಂದ್ಯದ ಸಂಭಾವನೆಯ ಶೇ.20ರಷ್ಚು  ಹಾಗೂ ಉಳಿದ ಆಟಗಾರರಿಗೆ ಶೇ.10ರಷ್ಟು ದಂಡ ವಿಧಿಸಲಾಗಿದೆ.

ಕೇಪ್ ಟೌನ್ ನಲ್ಲಿ ನಡೆದ ಕೊನೆಯ ಏಕದಿನ ಪಂದ್ಯವನ್ನೂ ಗೆದ್ದು ದಕ್ಷಿಣ ಆಫ್ರಿಕಾ ತಂಡ ಆಸಿಸ್ ವಿರುದ್ಧ ವೈಟ್ ವಾಶ್ ಮಾಡಿದ ಸಾಧನೆ ಮಾಡಿತ್ತಾದರೂ, ಪಂದ್ಯದ 37ನೇ ಓವರ್ ನಲ್ಲಿ  ಡೇವಿಡ್ ವಾರ್ನರ್ ರನ್ನು ಕೆಣಕಿದ ತಾಹಿರ್ ವಾಗ್ವಾದ ನಡೆಸಿದ್ದರು. ಅಲ್ಲದೆ ಈ ವೇಳೆ ಅಂಪೈರ್ ಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಶಾಂತವಾಗಿಸುವ ಪ್ರಯತ್ನ ನಡೆಸಿದರಾದರೂ ಅವರ  ಮಾತಿಗೆ ಬೆಲೆ ನೀಡಿದ ತಾಹಿರ್ ಮತ್ತೆ ವಾರ್ನರ್ ವಿರುದ್ಧ ವಾಗ್ವಾದ ನಡೆಸಿದ್ದರು. ಹೀಗಾಗಿ ಅಂಪೈರ್ ಗಳಿಗೆ ಗೌರವ ನೀಡದ ಹಿನ್ನಲೆಯಲ್ಲಿ ತಾಹಿರ್ ಗೆ ಐಸಿಸಿ ದಂಡ ವಿಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com