ರೋಹಿತ್ ಶರ್ಮಾ ವಿಕೆಟ್ ಪಡೆದ ಬೌಲ್ಟ್ ಸಂಭ್ರಮ (ಕ್ರಿಕ್ ಇನ್ಫೋ ಚಿತ್ರ)
ರೋಹಿತ್ ಶರ್ಮಾ ವಿಕೆಟ್ ಪಡೆದ ಬೌಲ್ಟ್ ಸಂಭ್ರಮ (ಕ್ರಿಕ್ ಇನ್ಫೋ ಚಿತ್ರ)

ಕಿವೀಸ್ ದಾಳಿಗೆ ತತ್ತರಿಸಿದ ಭಾರತ, ನ್ಯೂಜಿಲೆಂಡ್ ಗೆ 6 ರನ್ ರೋಚಕ ಜಯ

ವಿಲಿಯಮ್ಸನ್ ಪಡೆಯ ಪ್ರಭಾವಿ ಬೌಲಿಂಗ್ ದಾಳಿಗೆ ಕುಸಿದ ಭಾರತ 236 ರನ್ ಗಳಿಗೆ ಆಲೌಟ್ ಆಗುವ ಮೂಲಕ ನ್ಯೂಜಿಲೆಂಡ್ ವಿರುದ್ಧ 6 ರನ್ ಗಳ ರೋಚಕ ಸೋಲು ಕಂಡಿದೆ.

ನವದೆಹಲಿ: ವಿಲಿಯಮ್ಸನ್ ಪಡೆಯ ಪ್ರಭಾವಿ ಬೌಲಿಂಗ್ ದಾಳಿಗೆ ಕುಸಿದ ಭಾರತ 236 ರನ್ ಗಳಿಗೆ ಆಲೌಟ್ ಆಗುವ ಮೂಲಕ ನ್ಯೂಜಿಲೆಂಡ್ ವಿರುದ್ಧ 6 ರನ್ ಗಳ ರೋಚಕ ಸೋಲು ಕಂಡಿದೆ.

ದೆಹಲಿ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 243 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ 49.3 ಓವರ್ ಗಳಲ್ಲಿ ಕೇವಲ 236ರನ್ ಗಳಿಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ವೇಗಿಗಳ ಕರಾರುವಕ್ಕಾದ ಬೌಲಿಂಗ್ ದಾಳಿಗೆ ಭಾರತದ  ಬಲಿಷ್ಟ ಬ್ಯಾಟಿಂಗ್ ನಿಜಕ್ಕೂ ತತ್ತರಿಸಿತ್ತು. ಜಾಧವ್ ಗಳಿಸಿದ 41 ರನ್ ಗಳೇ ಟೀಂ ಇಂಡಿಯಾ ಪರ ಬ್ಯಾಟ್ಸಮನ್ ಗಳಿಸಿದ್ದ ವೈಯಕ್ತಿಕ ಗರಿಷ್ಟ ರನ್ ಸಾಧನೆಯಾಗಿತ್ತು ಎಂಬುದು ಕಿವೀಸ್ ಬೌಲರ್ ಗಳ ಪಾರಮ್ಯಕ್ಕೆ ಸಾಕ್ಷಿ ಎಂಬಂತಾಗಿತ್ತು. ನಾಯಕ ಧೋನಿ (39 ರನ್), ರಹಾನೆ (28 ರನ್)  ಹಾಗೂ ಮಧ್ಯಮ ಕ್ರಮಾಂಕದ ಆಲ್ ರೌಂಡ್ ಆಟಗಾರ ಹಾರ್ಧಿಕ್ ಪಾಂಡ್ಯಾ (36 ರನ್) ಕೊಂಚ ಪ್ರತಿರೋಧ ಒಡ್ಡಿದರಾದರೂ, ನ್ಯೂಜಿಲೆಂಡ್ ಬೌಲರ್ ಗಳ ಎದುರು ಮಂಕಾದರು.

ಅಂತಿಮವಾಗಿ ಭಾರತ 49.3 ಓವರ್ ಗಳಲ್ಲಿ 236 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ ಪ್ರವಾಸಿ ವಿಲಿಯಮ್ಸನ್ ಪಡೆ 6 ರನ್ ಗಳ ರೋಚಕ ಜಯಸಾಧಿಸಿತು. ನ್ಯೂಜಿಲೆಂಡ್ ಪರ ಸೌಥಿ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ, ಬೌಲ್ಟ್ ಹಾಗೂ ಗಪ್ಟಿಲ್  ತಲಾ 2 ವಿಕೆಟ್ ಪಡೆದರು. ಅಂತೆಯೇ ಹೆನ್ರಿ, ಸ್ಯಾಂಟ್ನರ್ ತಲಾ 1 ವಿಕೆಟ್ ಪಡೆದರು.

ನ್ಯೂಜಿಲೆಂಡ್ ಪರ ಭರ್ಜರಿ ಶತಕ ಸಿಡಿಸಿದ ವಿಲಿಯಮ್ಸನ್ ಅರ್ಹವಾಗಿಯೇ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು. ಕಿವೀಸ್ ಪಡೆ 2ನೇ ಪಂದ್ಯ ಗೆಲ್ಲುವ ಮೂಲಕ 1-1ರಲ್ಲಿ ಸಮಬಲ ಸಾಧಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com