2ನೇ ಏಕದಿನ ಪಂದ್ಯ: ಕಿವೀಸ್ ಪಡೆಗೆ ಆರಂಭಿಕ ಆಘಾತ ನೀಡಿದ ಉಮೇಶ್ ಯಾದವ್

ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ವಿಲಿಯಮ್ಸನ್ ಪಡೆಗೆ ಆರಂಭಿಕ ಆಘಾತ ನೀಡಿದೆ.
ಗಪ್ಚಿಲ್ ವಿಕೆಟ್ ಕಬಳಿಸಿದ ಉಮೇಶ್ ಯಾದವ್
ಗಪ್ಚಿಲ್ ವಿಕೆಟ್ ಕಬಳಿಸಿದ ಉಮೇಶ್ ಯಾದವ್

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ವಿಲಿಯಮ್ಸನ್ ಪಡೆಗೆ ಆರಂಭಿಕ ಆಘಾತ ನೀಡಿದೆ.

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದಿರುವ ನ್ಯೂಜಿಲೆಂಡ್ ತಂಡಕ್ಕೆ ಭಾರತದ ವೇಗಿ  ಉಮೇಶ್ ಯಾದವ್ ಮೊದಲ ಆಘಾತ ನೀಡಿದ್ದು, ಮೊದಲ ಓವರ್ ನ 2ನೇ ಎಸೆತದಲ್ಲೇ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಕ್ಲೀನ್ ಬೋಲ್ಡ್ ಆಗುವ ಮೂಲಕ ಔಟ್ ಆಗಿದ್ದಾರೆ. ಉಮೇಶ್  ಯಾದವ್ ಎಸೆದ ಗುಡ್ ಲೆಂತ್ ಬಾಲ್ ಅನ್ನು ತಪ್ಪಾಗಿ ಪರಿಗಣಿಸಿದ ಗಪ್ಟಿಲ್ ವಿಕೆಟ್ ಒಪ್ಪಿಸುವ ಮೂಲಕ ಶೂನ್ಯಕ್ಕೆ ಔಟ್ ಆಗಿ ಪೆವಿಲಿಯನ್ ಗೆ ವಾಪಸ್ ಆಗಿದ್ದಾರೆ.

ಇತ್ತೀಚಿನ ವರದಿಗಳು ಬಂದಾಗ ಪ್ರವಾಸಿ ನ್ಯೂಜಿಲೆಂಡ್ ತಂಡ 5.4 ಓವರ್ ನಲ್ಲಿ 1 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿದೆ. ಆರಂಭಿಕ ಆಟಗಾರ ಲಾಥಮ್ 10 ರನ್ ಗಳಿಸಿದ್ದರೆ, ನಾಯಕ  ವಿಲಿಯಮ್ಸನ್ 13 ರನ್ ಗಳಿಸಿ ಆಟ ಮುಂದವರೆಸಿದ್ದಾರೆ.

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದ ಪಿಚ್ ಬ್ಯಾಟಿಂಗ್ ಸಹಕಾರಿಯಾಗಿದ್ದು, ಮೊದಲ ಬ್ಯಾಟ್ ಮಾಡುವ ತಂಡಕ್ಕೆ ಪಂದ್ಯ ಗೆಲ್ಲುವ ಅವಕಾಶಗಳು ಹೆಚ್ಚು. ಆದರೆ ಪಿಚ್ ವೇಗದ ಬೌಲರ್  ಗಳಿಗೂ ಸಹಕಾರಿಯಾಗಿದ್ದು, ಬೇಗನೆ ವಿಕೆಟ್ ಗಳನ್ನು ಉರುಳಿಸಿದರೆ ಎರಡನೇ ಬಾರಿ ಬ್ಯಾಟಿಂಗ್ ಮಾಡುವ ತಂಡ ಕೂಡ ಪಂದ್ಯ ಗೆಲ್ಲಬಹುದು. ಕೋಟ್ಲಾ ಪಿಚ್ ನ ಸರಾಸರಿ ರನ್ ಗಳಿಕೆ 280 ರನ್   ಗಳಾಗಿದ್ದು, ಸ್ಪಿನ್ನರ್ ಗಳು ವಿಕೆಟ್ ಪಡೆಯಲು ಇಲ್ಲಿ ಪರದಾಡಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com