ಆಲ್ ರೌಂಡರ್ ಎಂದು ಕರೆಸಿಕೊಳ್ಳಬೇಕಾದರೇ ಕನಿಷ್ಠ 50 ಟೆಸ್ಟ್ ಪಂದ್ಯಗಳಾಡಿರಬೇಕು: ಕಪಿಲ್ ದೇವ್

ಯಾವುದೇ ಒಬ್ಬ ಕ್ರಿಕೆಟಿಗ ಆಲ್ ರೌಂಡರ್ ಎಂದು ಕರೆಸಿಕೊಳ್ಳಲು ಕನಿಷ್ಠ 50 ಟೆಸ್ಟ್ ಪಂದ್ಯಗಳನ್ನಾದರೂ ಆಡಿರಬೇಕು, ಕೇವಲ ಎರಡು ಮೂರು ಸರಣಿಗಳಲ್ಲಿ ಉತ್ತಮ ,...
ಕಪಿಲ್ ದೇವ್
ಕಪಿಲ್ ದೇವ್

ಬೆಂಗಳೂರು: ಯಾವುದೇ ಒಬ್ಬ ಕ್ರಿಕೆಟಿಗ ಆಲ್ ರೌಂಡರ್ ಎಂದು ಕರೆಸಿಕೊಳ್ಳಲು ಕನಿಷ್ಠ 50 ಟೆಸ್ಟ್ ಪಂದ್ಯಗಳನ್ನಾದರೂ ಆಡಿರಬೇಕು, ಕೇವಲ ಎರಡು ಮೂರು ಸರಣಿಗಳಲ್ಲಿ ಉತ್ತಮ ಪ್ರದರ್ಶನ ತೋರಿದಾಕ್ಷಣ ಆಲ್ ರೌಂಡರ್ ಎಂದು ಕರೆಯುವುದು ಸರಿಯಲ್ಲ ಎಂದು ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅಭಿಪ್ರಾಯ ಪಟ್ಟಿದ್ದಾರೆ.

ದೇವನಹಳ್ಳಿಯಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ಕೋರ್ಸ್‌‌ನಲ್ಲಿ ಕೃಷ್ಣಪಟ್ಟಣಂ ಪೋರ್ಟ್ ಗೋಲ್ಡನ್ ಈಗಲ್ಸ್ ಅಮೆಚೂರ್ 2ನೇ ಆವೃತ್ತಿ ಗಾಲ್ಫ್ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತ ಕ್ರಿಕೆಟ್ ತಂಡದಲ್ಲಿ ನಾನೊಬ್ಬ ಆಲ್ ರೌಂಡರ್‌ ಆಟಗಾರನಾಗಿದ್ದೆ ಹೊರತು 'ದಿ ಬೆಸ್ಟ್ ಆಲ್ ರೌಂಡರ್' ಅಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಚೊಚ್ಚಲ ವಿಶ್ವಕಪ್ ಗೆದ್ದ ತಂಡದ ನಾಯಕನಾಗಿದ್ದ ಕಪಿಲ್ ದೇವ್ ಹೇಳಿದ್ದಾರೆ.

ನಾನು ಆಲ್ ರೌಂಡರ್ ಆಟಗಾರನಾಗಿದ್ದೆ. ನನ್ನ ಕಾಲದಲ್ಲಿ ರಿಚರ್ಡ್ ಹ್ಯಾಡ್ಲಿ, ಇಯಾನ್ ಬಾಥಮ್, ಇಮ್ರಾನ್ ಖಾನ್ ಅತ್ಯುತ್ತಮ ಆಲ್ ರೌಂಡರ್‌‌ಗಳಾಗಿದ್ದರು. ಆದರೆ ಈಗಿನ ಯುವ ಆಟಗಾರರು ಅವರಿಗಿಂತಲೂ ಉತ್ತಮ ಪ್ರದರ್ಶನ ತೋರಿ ಗಮನ ಸೆಳೆಯುತ್ತಿದ್ದಾರೆ.

ಹಿಂದಿನ ಕಾಲದ ಕ್ರಿಕೆಟ್‌‌ಗೂ ಈಗಿನ ಕ್ರಿಕೆಟ್‌‌ಗೂ ಭಾರೀ ವ್ಯತ್ಯಾಸವಿದೆ. ನನ್ನ ಕಾಲದಿಂದ ಕ್ರಿಕೆಟ್ ನೋಡಿಕೊಂಡು ಬರುತ್ತಿರುವವರಿಗೆ ನನ್ನ ಆಟ ಇಷ್ಟವಾಗಿರಬಹುದು. ಈಗಿನ ಕಾಲದ ಯುವಕನಿಗೆ ಅದೇ ಪ್ರಶ್ನೆಯನ್ನು ಕೇಳಿದರೆ ಈಗಿನ ಆಲ್ ರೌಂಡರ್ ಹೆಸರನ್ನು ಹೇಳುತ್ತಾನೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com