ಟೀಂ ಇಂಡಿಯಾಗೆ 500ನೇ ಟೆಸ್ಟ್ ಸಂಭ್ರಮ, ಹಿಂದಿನ ಮೈಲಿಗಲ್ಲುಗಳು

ನ್ಯೂಜಿಲೆಂಡ್ ವಿರುದ್ಧದ ಇಂದಿನ ಪಂದ್ಯ ಟೀಂ ಇಂಡಿಯಾಗೆ 500ನೇ ಟೆಸ್ಟ್ ಪಂದ್ಯವಾಗಿದ್ದು, ಜಯ ಸಾಧಿಸುವ ಸಂಭ್ರಮದಲ್ಲಿದ್ದಾರೆ ಭಾರತೀಯ ಆಟಗಾರರು. ಇನ್ನು 84 ವರ್ಷಗಳ ಹಿಂದೆ...
ಟೀಂ ಇಂಡಿಯಾ
ಟೀಂ ಇಂಡಿಯಾ
ನ್ಯೂಜಿಲೆಂಡ್ ವಿರುದ್ಧದ ಇಂದಿನ ಪಂದ್ಯ ಟೀಂ ಇಂಡಿಯಾಗೆ 500ನೇ ಟೆಸ್ಟ್ ಪಂದ್ಯವಾಗಿದ್ದು, ಜಯ ಸಾಧಿಸುವ ಸಂಭ್ರಮದಲ್ಲಿದ್ದಾರೆ ಭಾರತೀಯ ಆಟಗಾರರು. ಇನ್ನು 84 ವರ್ಷಗಳ ಹಿಂದೆ ಕ್ರಿಕೆಟ್ ಜನಕರ ವಿರುದ್ಧ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಆಡುವ ಮೂಲಕ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟ ಭಾರತ ಇದೀಗ 500ನೇ ಟೆಸ್ಟ್ ಆಡಲಿರುವ ವಿಶ್ವದ ಕೇವಲ 4ನೇ ರಾಷ್ಟ್ರ ಎನಿಸಿಕೊಳ್ಳಲಿದೆ. 
ಈ ಸುದೀರ್ಘ ಪಯಣದಲ್ಲಿ ಟೀಂ ಇಂಡಿಯಾ ಹಲವು ದಾಖಲೆಗಳನ್ನು ನಿರ್ಮಿಸಿದೆ. ಅಂತಹ ಅಭೂತಪೂರ್ವ ಸಾಧನೆಗಳ ಕೆಲ ವರದಿ ಇಲ್ಲಿದೆ. 
ಈಡನ್ ನಲ್ಲಿ ಆಸೀಸ್ ವಿರುದ್ಧ ಗೆದ್ದ ಐತಿಹಾಸಿಕ ಟೆಸ್ಟ್ 
2001ರ ಈಡನ್ ಗಾರ್ಡನ್ಸ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯ ಭಾರತ ಕ್ರಿಕೆಟ್ ನಲ್ಲಿ ಐತಿಹಾಸಿಕ ಟೆಸ್ಟ್ ಪಂದ್ಯವಾಗಿದೆ. ಸತತ 16 ಪಂದ್ಯಗಳ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಸ್ಟೀವ್ ವಾ ನೇತೃತ್ವದ ಆಸೀಸ್ ತಂಡವನ್ನು ಮಣಿಸಿ ಇತಿಹಾಸ ನಿರ್ಮಿಸಿತ್ತು. ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 445 ರನ್ ಬಾರಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ 171 ರನ್ ಗೆ ಮೊದಲ ಇನ್ನಿಂಗ್ಸ್ ಪತಗೊಂಡಿತ್ತು. ಇದರೊಂದಿಗೆ 274 ರನ್ ಗಳ ಫಾಲೋ ಆನ್ ಅವಮಾನ ಎದುರಿಸಿತ್ತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತದ ಪರ ವಿವಿಎಸ್ ಲಕ್ಷ್ಮಣ್(281) ರಾಹುಲ್ ಡ್ರಾವಿಡ್(180) ರನ್ ಗಳ ನೆರವಿನಿಂದ 7 ವಿಕೆಟ್ ಗೆ 657 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಗೆಲುವಿಗೆ 384 ರನ್ ಸವಾಲು ಪಡೆದ ಆಸೀಸ್ ಹರ್ಭಜನ್ ಸಿಂಗ್(73ಕ್ಕೆ6) ದಾಳಿಗೆ ಆಸೀಸ್ ತತ್ತರಿಸಿ 212 ರನ್ ಗೆ ಆಲೌಟ್ ಆಯಿತು ಇದರೊಂದಿಗೆ ಭಾರತ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿತ್ತು. 
ಟೆಸ್ಟ್ ನ ಗರಿಷ್ಠ ಮೊತ್ತ 
2009ರಲ್ಲಿ ಮುಂಬೈನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗರಿಷ್ಠ ಮೊತ್ತ 726 ರನ್ ಬಾರಿಸಿತ್ತು. ಈ ವೇಳೆ ಅದ್ಭುತ ಬ್ಯಾಟಿಂಗ್ ಮಾಡಿದ್ದ ವಿರೇಂದ್ರ ಸೆಹ್ವಾಗ್(293) ರನ್ ಬಾರಿಸಿದ್ದರು. 
ದೈತ್ಯ ಕೆರಿಬಿಯನ್ ರನ್ನು ಮಣಿಸಿ ಪರಾಕ್ರಮ
1970-71ರಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಕೆರಿಬಿಯನ್ ನಾಡಿಗೆ ಪ್ರವಾಸ ಕೈಗೊಂಡಿದ್ದ ಭಾರತ ದೈತ್ಯ ಕೆರಿಬಿಯನ್ ರನ್ನು ಮಣಿಸಿ ಪರಾಕ್ರಮ ಮೆರೆದಿದ್ದರು. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ದಿಕ್ಕನ್ನೆ ಬದಲಿಸಿದ ಸರಣಿ ಇದಾಗಿತ್ತು. ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. 2ನೇ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಜಯ ಗಳಿಸಿತ್ತು. ನಂತರದ ಮೂರು ಪಂದ್ಯಗಳ ಡ್ರಾನಲ್ಲಿ ಅಂತ್ಯವಾಗಿತ್ತು, ಇದರೊಂದಿಗೆ ಭಾರತ ಸರಣಿ ಕೈವಶ ಮಾಡಿಕೊಂಡಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಸುನೀಲ್ ಗವಾಸ್ಕರ್ 4 ಶತಕ, ಒಂದು ದ್ವಿಶಕ ಬಾರಿಸಿ ಮಿಂಚಿದ್ದರು. 
ಟೆಸ್ಟ್ ಕ್ರಿಕೆಟ್ ನಲ್ಲಿ ಆಟಗಾರರ ವೈಯಕ್ತಿಕ ಸಾಧನೆ:
ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಪಡೆದ ವೀರ ಅನಿಲ್ ಕುಂಬ್ಳೆ
1999ರ ಫೆಬ್ರವರಿ 7ರಂದು ಫಿರೋಜ್ ಷಾ ಕೋಟ್ಲಾದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಪಾಕಿಸ್ತಾನ ವಿರುದ್ಧದ ದ್ವಿತೀಯ ಇನ್ನಿಂಗ್ಸ್ ನ ಎಲ್ಲ 10 ವಿಕೆಟ್ ಉರುಳಿಸಿದ್ದು ಭಾರತೀಯ ಕ್ರಿಕೆಟ್ ನ ಸ್ಮರಣೀಯ ನಿರ್ವಹಣೆ ದಾಖಲಾಗಿತ್ತು. 
ಸೆಹ್ವಾಗ್ ತ್ರಿಶತಕ ವೀರ
2004ರಲ್ಲಿ ಪಾಕಿಸ್ತಾನ ವಿರುದ್ಧ ಮುಲ್ತಾನ್ ಟೆಸ್ಟ್ ನಲ್ಲಿ ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ 309 ರನ್ ಸಿಡಿಸುವ ಮೂಲಕ ಭಾರತದ ಟೆಸ್ಟ್ ಇತಿಹಾಸದಲ್ಲಿ ತ್ರಿಶತಕ ಸಿಡಿದ ಖ್ಯಾತಿ ಗಳಿಸಿದರು. 
ಸಚಿನ್ ದಾಖಲೆಗಳ ಸರದಾರ
2015ರ ನವೆಂಬರ್ ನಲ್ಲಿ 200ನೇ ಟೆಸ್ಟ್ ಪಂದ್ಯ ಆಡುವ ಮೂಲಕ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದ ಸಚಿನ್ ವಿಶ್ವ ಟೆಸ್ಟ್ ಕ್ರಿಕೆಟ್ ನಲ್ಲಿ 200 ಪಂದ್ಯವಾಡಿದ ವಿಶ್ವದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಟೆಸ್ಟ್ ನ 329 ಇನಿಂಗ್ಸ್ ಗಳಿಂದ 51 ಶತಕ, 68 ಅರ್ಧಶತಕದೊಂದಿಗೆ 15,921 ರನ್ ಬಾರಿಸಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಸಚಿನ್ ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com