
ದುಬೈ: ತನ್ನ ಐತಿಹಾಸಿಕ 500ನೇ ಟೆಸ್ಟ್ ಪಂದ್ಯ ಗೆದ್ದು ಉತ್ತಮ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ಪಂದ್ಯ ಗೆದ್ದರೆ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದೆ.
ಸದ್ಯ ಅಂತಾರಾಷ್ಟ್ರೀಯ ಟೆಸ್ಟ್ ರ್ಯಾಂಕಿಂಗ್ ನಲ್ಲಿ 1 ಅಂಕದ ಮುನ್ನಡೆಯಲ್ಲಿ ಪಾಕಿಸ್ತಾನ(111) ಅಗ್ರಸ್ಥಾನದಲ್ಲಿದ್ದು, ಈಡನ್ ಟೆಸ್ಟ್ ಗೆದ್ದರೆ ಭಾರತ ನಂಬರ್ 1 ಆಗಲಿದೆ.
ಕಾನ್ಪುರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ 197 ರನ್ ಗಳ ಅಂತರದಿಂದ ಗೆದ್ದಿತ್ತು.
Advertisement