ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ಬಾಂಗ್ಲಾದೇಶ ನಾಯಕ ಮೋರ್ತಾಜಾ ವಿದಾಯ!

ಬಾಂಗ್ಲಾದೇಶ ಕ್ರಿಕೆಟ್ ತಂಡದ ಸೀಮಿತ ಓವರ್‌ಗಳ ನಾಯಕ ಹಾಗೂ ವೇಗದ ಬೌಲರ್‌ ಮಶ್ರಫೆ ಮೊರ್ತಾಜಾ ಅಂತಾರಾಷ್ಟ್ರೀಯ ಟಿ20 ಪಂದ್ಯಾವಳಿಗೆ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಲಂಬೊ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಸೀಮಿತ ಓವರ್‌ಗಳ ನಾಯಕ ಹಾಗೂ ವೇಗದ ಬೌಲರ್‌ ಮಶ್ರಫೆ ಮೊರ್ತಾಜಾ ಅಂತಾರಾಷ್ಟ್ರೀಯ ಟಿ20 ಪಂದ್ಯಾವಳಿಗೆ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದ ನಂತರ ಮಶ್ರಫೆ ತಮ್ಮ ನಿರ್ಧಾರವನ್ನು ಪ್ರಕಟ ಪಡಿಸಿದ್ದು, ‘‘ಕಳೆದ ಹತ್ತು ವರ್ಷಗಳಿಂದ ಬಾಂಗ್ಲಾದೇಶ ತಂಡವನ್ನು ಚುಟುಕು ಕ್ರಿಕೆಟ್ ನಲ್ಲಿ ಪ್ರತಿನಿಧಿಸಿದ್ದು, ನನಗೆ ಗೌರವದ ಸಂಗತಿ''  ಎಂದು ಹೇಳಿದ್ದಾರೆ. 2006ರಲ್ಲಿ ಜಿಂಬಾಬ್ವೆ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಿದ್ದ ಮೊರ್ತಾಜಾ, ಬಾಂಗ್ಲಾದೇಶ ಪರ ಒಟ್ಟು 52 ಪಂದ್ಯಗಳನ್ನಾಡಿದ್ದಾರೆ. ಅಂತೆಯೇ 27 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

ತಂಡದ ಯುವ ಪ್ರತಿಭೆಗಳಿಗೆ ಸ್ಥಾನ ಕಲ್ಪಿಸುವ ಉದ್ದೇಶದಿಂದ ತಾವು ಚುಟುಕು ಕ್ರಿಕೆಟ್ ನಿಂದ ಹಿಂದೆ ಸರಿಯುತ್ತಿದ್ದು, ರುಬೆಲ್ ಹುಸೇನ್ ರಂತಹ ಯುವ ಪ್ರತಿಭಾವಂತ ಬೌಲರ್ ಗಳು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಕಳೆದ 2 ಟಿ20  ಪಂದ್ಯಗಳಲ್ಲಿ ರುಬೆಲ್ ಹುಸೇನ್ 7 ವಿಕೆಟ್ ಗಳನ್ನು ಗಳಿಸಿದ್ದರು. ಇಂತಹ ಅದ್ಬುತ ಫಾರ್ಮ್ ನಲ್ಲಿರುವ ಆಟಗಾರ ಕ್ಷುಲ್ಲಕ ಕಾರಣಕ್ಕೆ ತಂಡದಿಂದ ಕೈಬಿಡುವುದು ನನಗೆ ಸರಿಕಾಣಲಿಲ್ಲ. ನಾನು ಕೂಡ ಈ ಹಿಂದೆ ಇದೇ ಪರಿಸ್ಥಿತಿ  ಎದುರಿಸಿದ್ದು. ನನಗೆ ಆ ಪರಿಸ್ಥಿತಿಯ ಅನುಭವ ಇದೆ. ಹೀಗಾಗಿ ನಾನು ಹಿಂದೆ ಸರಿಯುವ ಮೂಲಕ ರುಬೆಲ್ ಹುಸೇನ್ ಗೆ ಅವಕಾಶ ಕಲ್ಪಿಸುತ್ತಿದ್ದೇನೆ ಎಂದು ಮೋರ್ತಾಜಾ ಹೇಳಿದ್ದಾರೆ.

ನಾನು ಐದು ಬಾರಿ ಟಿ20 ವಿಶ್ವಕಪ್ ನಲ್ಲಿ ದೇಶವನ್ನು ಪ್ರತಿನಿಧಿಸಿದ್ದು, ಈ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ಈ ಚುಟುಕು ಮಾದರಿಯ ಕ್ರಿಕೆಟ್ ನಲ್ಲಿ ನಾನು ಆಸಕ್ತಿ ಕಳೆದುಕೊಂಡಿದ್ದೇನೆ ಎಂದು ಮೋರ್ತಾಜಾ ಇದೇ ವೇಳೆ ಹೇಳಿದರು.

ಮೋರ್ತಾಜಾ ತಮ್ಮ 18ನೇ ವಯಸ್ಸಿನಲ್ಲಿ 2001ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ್ದರು. 2006ರಲ್ಲಿ ತಮ್ಮ ಮೊದಲ ಟಿ20 ಪಂದ್ಯವನ್ನಾಡಿದ್ದರು. ವೇಗದ ಬೌಲಿಂಗ್ ಗೆ ಖ್ಯಾತಿ ಗಳಿಸಿದ್ದ ಮೋರ್ತಾಜಾ ತಮ್ಮ  ಗಾಯಗಳಿಂದಾಗಿಯೂ ಖ್ಯಾತಿಗಳಿಸಿದ್ದರು. ಈವರೆಗೂ ಮೋರ್ತಾಜಾ ಸುಮಾರು 6 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com