ಆರ್ ಸಿಬಿ
ಕ್ರಿಕೆಟ್
ಪುಣೆ ವಿರುದ್ಧದ ಪಂದ್ಯದಿಂದ ಕ್ರಿಸ್ ಗೇಲ್ ಕೈಬಿಟ್ಟಿದ್ದಕ್ಕೆ ಆರ್ ಸಿಬಿ ಕೋಚ್ ವೆಟ್ಟೊರಿ ಸಮರ್ಥನೆ
ಪುಣೆ ವಿರುದ್ಧದ ಪಂದ್ಯದಿಂದ ಕ್ರಿಸ್ ಗೇಲ್ ನ್ನು ಕೈಬಿಟ್ಟಿದ್ದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಡ್ಯಾನಿಯಲ್ ವೆಟ್ಟೋರಿ ಸಮರ್ಥನೆ ನೀಡಿದ್ದಾರೆ.
ಬೆಂಗಳೂರು: ಪುಣೆ ವಿರುದ್ಧದ ಪಂದ್ಯದಿಂದ ಕ್ರಿಸ್ ಗೇಲ್ ನ್ನು ಕೈಬಿಟ್ಟಿದ್ದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಡ್ಯಾನಿಯಲ್ ವೆಟ್ಟೋರಿ ಸಮರ್ಥನೆ ನೀಡಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ನಂತರ ತಂಡಕ್ಕೆ ಬೌಲರ್ ಗಳ ಕೊರತೆ ಕಾಡುತ್ತಿದೆ ಎಂದೆನಿಸಿತ್ತು. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ವಾಟ್ಸನ್ ಉತ್ತಮ ಆಟ ಆಡಬಲ್ಲವರಾಗಿದ್ದರಿಂದ, ಆಲ್ ರೌಂಡರ್ ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ಅವಕಾಶ ನೀಡಲಾಯಿತು ಎಂದು ತಂಡದ ಕೋಚ್ ಡ್ಯಾನಿಯಲ್ ವೆಟ್ಟೋರಿ ಸಮರ್ಥನೆ ನೀಡಿದ್ದಾರೆ.
ಆರ್ ಪಿಎಸ್ ವಿರುದ್ಧದ ಪಂದ್ಯದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡ್ಯಾನಿಯಲ್ ವೆಟ್ಟೋರಿ, ಪಂದ್ಯದಲ್ಲಿ ವಾಟ್ಸನ್ ಬೌಲಿಂಗ್, ಬ್ಯಾಟಿಂಗ್ ಎರಡೂ ವಿಭಾಗದಲ್ಲಿಯೂ ವಿಫಲರಾದರು. ಬೌಲಿಂಗ್ ನಲ್ಲಿ 44 ರನ್ ನೀಡಿ ಬ್ಯಾಟಿಂಗ್ ನಲ್ಲಿ ಮಹತ್ವದ ಹಂತದಲ್ಲಿ ಕೇವಲ 14 ರನ್ ಗಳಿಸಿ ಬೆನ್ ಸ್ಟೋಕ್ಸ್ ಬೌಲಿಂಗ್ ಗೆ ಬಲಿಯಾದರು. "ನಾವು ಬೌಲಿಂಗ್ ನಲ್ಲಿ ಮೊದಲ 18 ಓವರ್ ಗಳಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದೆವು. ಆದರೆ ಕೊನೆಯ ಎರಡು ಓವರ್ ಗಳಲ್ಲಿ 30 ರನ್ ನೀಡಿದ್ದು ಪಂದ್ಯ ಕೈತಪ್ಪಲು ಕಾರಣವಾಯಿತು ಎಂದು ವೆಟ್ಟೋರಿ ಅಭಿಪ್ರಾಯಪಟ್ಟಿದ್ದಾರೆ.

