ಸಚಿನ್ ಎ ಬಿಲಿಯನ್ ಡ್ರೀಮ್ಸ್ ಗೆ ಶುಭ ಕೋರಿದ ಶಾರುಖ್‌ಗೆ ಸಚಿನ್ ತತ್ವಭರಿತ ಟ್ವೀಟ್

ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜೀವನಾಧಾರಿತ ಚಿತ್ರ ಸಚಿನ್ ಎ ಬಿಲಿಯನ್ ಡ್ರೀಮ್ಸ್ ತೆರೆಗೆ ಬರಲು ಸಿದ್ಧವಾಗಿದ್ದು ಈ ಮಧ್ಯೆ...
ಶಾರುಖ್ ಖಾನ್, ಸಚಿನ್ ತೆಂಡೂಲ್ಕರ್
ಶಾರುಖ್ ಖಾನ್, ಸಚಿನ್ ತೆಂಡೂಲ್ಕರ್
Updated on: 
ನವದೆಹಲಿ: ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜೀವನಾಧಾರಿತ ಚಿತ್ರ ಸಚಿನ್ ಎ ಬಿಲಿಯನ್ ಡ್ರೀಮ್ಸ್ ತೆರೆಗೆ ಬರಲು ಸಿದ್ಧವಾಗಿದ್ದು ಈ ಮಧ್ಯೆ ಬಾಲಿವುಡ್ ನಟ ಶಾರುಖ್ ಖಾನ್ ಶುಭಕೋರುವ ನಿಟ್ಟಿನಯಲ್ಲಿ ಭಾವನಾತ್ಮಕ ಟ್ವೀಟ್ ಹಾಕಿದ್ದರು. ಈ ಟ್ವೀಟ್ ಗೆ ಸಚಿನ್ ತತ್ವಭರಿತ ಸಂದೇಶವೊಂದನ್ನು ಟ್ವೀಟಿಸಿದ್ದಾರೆ. 
ಶಾರುಖ್ ಟ್ವೀಟ್ ಗೆ ಫಿಲಾಸಫಿಯಿರುವ ಟ್ವೀಟ್ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ನೀವು ಕ್ರಿಕೆಟ್ ಮೈದಾನದಲ್ಲಿ ಉತ್ತಮ ನಿರ್ವಹಣೆ ತೋರಿದಾಗ ಚಿತ್ರರಂಗದಲ್ಲಿ ನಾನೂ ಉತ್ತಮ ನಿರ್ವಹಣೆ ತೋರಿದ್ದೆ ಎಂದು ನಂಬಿದ್ದೇನೆ. ನೀವು ಸೋತಾಗ ನಾನೂ ಸೋತಿದ್ದೇನೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶಾರುಖ್ ಟ್ವೀಟ್ ಮಾಡಿದ್ದರು. 
ಇದಕ್ಕೆ ಪ್ರತಿಯಾಗಿ ಸಚಿನ್ ಜೀವನದಲ್ಲಿ ಸೋಲುಗಳು ಇಲ್ಲದಿದ್ದರೆ ಯಾರೂ ಗೆಲ್ಲುತ್ತಲೇ ಇರಲಿಲ್ಲ ಹಾಗೂ ಏನೂ ಕಲಿಯುತ್ತಲೇ ಇರಲಿಲ್ಲ(ಜಿಂದಗಿ ಮೇ ಹಾರ್ ನ ಹೋತಿ ತೋ ಕೋಯಿ ಕಭಿ ಜೀತ್ ತಾ ನಹೀ ಔರ್ ಕುಚ್ ಸೀಕ್ತಾ ಭಿ ನಹೀ) ಎಂದು ಟ್ವೀಟಿಸಿದ್ದು ಇದು ಸಚಿನ್ ಅಭಿಮಾನಿಗಳ ಗಮನ ಸೆಳೆದಿದೆ. 
ಸಚಿನ್ ಎ ಬಿಲಿಯನ್ ಡ್ರೀಮ್ಸ್ ಚಿತ್ರ ಮೇ 26ರಂದು ತೆರೆಗೆ ಬರುತ್ತಿದ್ದು ಚಿತ್ರದ ಟ್ರೈಲರ್ ನೋಡಿದ ಹಲವು ಗಣ್ಯರು ಟ್ವೀಟರ್ ನಲ್ಲಿ ಶುಭಕೋರಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com