
ಬೆಂಗಳೂರು: ಕೆಲ ದಿನಗಳ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡದ ಅಭ್ಯಾಸದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅವರ ಪುತ್ರ ಅಬ್ರಹಾಂ ಸಹ ಬ್ಯಾಟಿಂಗ್ ನಡೆಸುತ್ತಿರುವ ವಿಡಿಯೋ ಯೂಟ್ಯೂಬ್ ನಲ್ಲಿ ಭಾರೀ ಜನಪ್ರಿಯತೆ ಪಡೆದಿದೆ.
ಅಬ್ರಹಾಂ ತನ್ನ ಪುಟ್ಟ ಕೈಗಳಲ್ಲಿ ಬ್ಯಾಟ್ ಹಿಡಿದು ಚೆಂಡನ್ನು ಬಾರಿಸುತ್ತಾ, ಗೋ ಆರ್ಸಿಬಿ.. ಗೋ ಆರ್ಸಿಬಿ ಎನ್ನುವ ಮಾತು ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದು ಸರಿಸುಮಾರು 10 ಲಕ್ಷಕ್ಕಿಂತ ಹೆಚ್ಚಿನ ಜನ ವೀಕ್ಷಿಸಿದ್ದಾರೆ.
ಡಿವಿಲಿಯರ್ಸ್ ಮಗನ ಈ ಬ್ಯಾಟಿಂಗ್ ವಿಡಿಯೋ ತುಣುಕಿನ ಕುರಿತು ಸಾಮಾಜಿಕ ತಾಣಗಳಾದ ಫೇಸ್ ಬುಕ್, ಟ್ವೀಟರ್ ನಲ್ಲೂ ಭಾರೀ ಚರ್ಚೆಯಾಗಿದೆ.
Advertisement